ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತವು 2030ಕ್ಕೆ ವಿಶ್ವದ 3ನೇ ಬೃಹತ್ ಆರ್ಥಿಕತೆಯಾಗಲಿದೆ: CEBR

|
Google Oneindia Kannada News

ನವದೆಹಲಿ, ಡಿಸೆಂಬರ್ 26: ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಜಾಗತಿಕವಾಗಿ ಆರನೇ ಆರ್ಥಿಕತೆಯ ಸ್ಥಾನಕ್ಕೆ ತಳ್ಳಿರುವ ಭಾರತವು 2025ರ ವೇಳೆಗೆ ಮತ್ತೆ ಐದನೇ ಸ್ಥಾನವನ್ನು ಪಡೆದುಕೊಳ್ಳಲಿದೆ ಮತ್ತು 2030ಕ್ಕೆ ವಿಶ್ವದ ಮೂರನೇ ಬೃಹತ್ ಆರ್ಥಿಕತೆಯಾಗಲಿದೆ ಎಂದು ಆರ್ಥಿಕ ಮತ್ತು ವ್ಯವಹಾರ ಸಂಶೋಧನಾ ಕೇಂದ್ರ (ಸಿಇಬಿಆರ್) ಶನಿವಾರ ಮಂಡಿಸಿದ ವರದಿಯಲ್ಲಿ ಈ ವಿಷಯ ತಿಳಿಸಿದೆ.

2019ರಲ್ಲಿ ಭಾರತವು ಬಲಿಷ್ಠ ಬ್ರಿಟನ್ ಅನ್ನು ಹಿಂದಿಕ್ಕಿ ಐದನೇ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. ಆದರೆ ಈ ವರ್ಷದಲ್ಲಿ ರೂಪಾಯಿ ದುರ್ಬಲತೆಯಿಂದಾಗಿ ಆರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

2021ರಲ್ಲಿ ಭಾರತವು ವೇಗವಾಗಿ ಬೆಳೆಯಲಿರುವ ಏಷ್ಯಾದ ಆರ್ಥಿಕತೆಯಾಗಲಿದೆ!2021ರಲ್ಲಿ ಭಾರತವು ವೇಗವಾಗಿ ಬೆಳೆಯಲಿರುವ ಏಷ್ಯಾದ ಆರ್ಥಿಕತೆಯಾಗಲಿದೆ!

''ಸಾಂಕ್ರಾಮಿಕ ಪ್ರಭಾವದಿಂದ ಭಾರತವನ್ನು ಸ್ವಲ್ಪಮಟ್ಟಿಗೆ ತಳ್ಳಲ್ಪಟ್ಟಿದೆ. ಇದರ ಪರಿಣಾಮವಾಗಿ, 2019 ರಲ್ಲಿ ಬ್ರಿಟನ್‌ ಅನ್ನು ಹಿಂದಿಕ್ಕಿದ ನಂತರ, ಬ್ರಿಟನ್ ಈ ವರ್ಷದ ಮುನ್ಸೂಚನೆಯಲ್ಲಿ ಭಾರತವನ್ನು ಹಿಂದಿಕ್ಕಿದೆ ಮತ್ತು ಭಾರತ ಮತ್ತೆ ತನ್ನ ಸ್ಥಾನ ಪಡೆಯುವ ಮೊದಲು 2024 ರವರೆಗೆ ಮುಂದುವರಿಯುತ್ತದೆ" ಎಂದು ಆರ್ಥಿಕ ಕೇಂದ್ರ ಮತ್ತು ವ್ಯಾಪಾರ ಸಂಶೋಧನೆ (ಸಿಇಬಿಆರ್) ಶನಿವಾರ ಪ್ರಕಟಿಸಿದ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

India To Become 3rd Largest Economy By 2030: CEBR

ಭಾರತವು ಮುಂದುವರೆದಂತೆ, ಸ್ವಾಭಾವಿಕವಾಗಿ ಬೆಳವಣಿಗೆಯ ದರವು ಕಡಿಮೆಯಾಗುತ್ತಲೇ ಇರುತ್ತದೆ. ಅಂದಾಜಿನ ಪ್ರಕಾರ, ಭಾರತದ ಬೆಳವಣಿಗೆಯ ದರವು 2035 ರಲ್ಲಿ ಶೇ 5.8 ಕ್ಕೆ ತಲುಪಲಿದೆ. ಬೆಳವಣಿಗೆಯ ದರ ಅಧ್ಯಯನದ ಆಧಾರದ ಮೇಲೆ 2030 ರ ವೇಳೆಗೆ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಸಿಇಬಿಆರ್ ಅಂದಾಜಿಸಿದೆ. ಈ ಸ್ಥಳವನ್ನು ತಲುಪುವ ಸಲುವಾಗಿ, ಭಾರತವು 2025 ರಲ್ಲಿ ಬ್ರಿಟನ್ನನ್ನು ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು 2027 ರಲ್ಲಿ ಜರ್ಮನಿಯನ್ನು ನಾಲ್ಕನೇ ಸ್ಥಾನದಿಂದ , 2030ರಲ್ಲಿ ಜಪಾನ್‌ ಅನ್ನು ಮೂರನೇ ಸ್ಥಾನದಿಂದ ತಳ್ಳುತ್ತದೆ ಎನ್ನಲಾಗಿದೆ.

English summary
India will again overtake the UK to become the fifth largest in 2025 and race to the third spot by 2030, a think tank said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X