ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ವರ್ಷಗಳ ಬಳಿಕ 2000 ರು ನೋಟು ಮುದ್ರಣ ಬಂದ್

|
Google Oneindia Kannada News

ನವದೆಹಲಿ, ಜನವರಿ 03: ಕಪ್ಪುಹಣದ ಮೇಲೆ ನಿಯಂತ್ರಣ ಸಾಧಿಸಲು ಅಪನಗದೀಕರಣ ಜಾರಿಗೆ ಬಂದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ನೋಟ್ ಬ್ಯಾನ್ ಗೆ ಮುಂದಾಗಿದೆ. ಲಭ್ಯ ಮಾಹಿತಿಯಂತೆ 2000 ರುಪಾಯಿ ಮೌಲ್ಯದ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿದೆ.

ಭಾರತದ ದೊಡ್ಡ ಮೌಲ್ಯದ ಕರೆನ್ಸಿಗಳನ್ನು ನಿಷೇಧಿಸಿದ ನೇಪಾಳಭಾರತದ ದೊಡ್ಡ ಮೌಲ್ಯದ ಕರೆನ್ಸಿಗಳನ್ನು ನಿಷೇಧಿಸಿದ ನೇಪಾಳ

2000ರುಪಾಯಿ ನೋಟುಗಳನ್ನು ತೆರಿಗೆ ವಂಚನೆ, ಮನಿಲಾಂಡ್ರಿಂಗ್ ಗೆ ಬಳಸಲಾಗುತ್ತಿರುವ ಶಂಕೆ ವ್ಯಕ್ತವಾಗಿದೆ. ನೋಟು ಮುದ್ರಣ ಸ್ಥಗಿತಗೊಳಿಸಲಾಗಿದ್ದು, ಹಂತ ಹಂತವಾಗಿ ಕರೆನ್ಸಿ ಚಲಾವಣೆಯನ್ನು ಬಂದ್ ಮಾಡಲಾಗುತ್ತದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಅಪನಗದೀಕರಣ ಬಳಿಕ 22 ದಿನದಲ್ಲಿ ಮುದ್ರಿಸಿದ ನೋಟುಗಳೆಷ್ಟು? ಮಾಹಿತಿ ನೀಡಿಅಪನಗದೀಕರಣ ಬಳಿಕ 22 ದಿನದಲ್ಲಿ ಮುದ್ರಿಸಿದ ನೋಟುಗಳೆಷ್ಟು? ಮಾಹಿತಿ ನೀಡಿ

2016ರ ನವೆಂಬರ್ ನಲ್ಲಿ ಮೊದಲಿಗೆ 2000ರು ಮುಖಬೆಲೆಯ ನೋಟುಗಳು ಚಲಾವಣೆಗೆ ಬಂದವು. 1000 ಹಾಗೂ 500 ರು ನೋಟುಗಳಲ್ಲಿ ಬದಲಾವಣೆಯಾಯಿತು. 200 ರು ಮುಖಬೆಲೆ ನೋಟುಗಳು ಬಂದವು. ಹೆಚ್ಚಿನ ಸುರಕ್ಷತೆ ಅಳವಡಿಸಲಾಯಿತು.

India stops printing Rs 2,000 note, two years after its shock launch

2018ರ ಮಾರ್ಚ್ ತಿಂಗಳ ಎಣಿಕೆಯಂತೆ ಕರೆನ್ಸಿ ಚಲಾವಣೆ 18.03 ಲಕ್ಷಕೋಟಿ ರು ನಷ್ಟಾಗಿದೆ. ಈ ಪೈಕಿ ಶೇ 37ರಷ್ಟು ಅಥವಾ 6.73 ಲಕ್ಷ ಕೋಟಿರು 2000 ರು ನೋಟುಗಳಾಗಿವೆ. ಶೇ 43ರಷ್ಟು ಅಥವಾ 7.73 ಲಕ್ಷ ಕೋಟಿ ರು 500 ನೋಟುಗಳಾಗಿವೆ.

English summary
India has stopped printing Rs 2,000 notes in a bid to slowly reduce their circulation, a highly placed government source told ThePrint The cut in circulation does not mean the Rs 2,000 notes will become invalid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X