ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರು ಮಾರುಕಟ್ಟೆಯಲ್ಲಿ ಏರಿಕೆ; ಖರೀದಿಗೆ ಆಕರ್ಷಕವಾಗಿವೆ ಈ 6 ಷೇರುಗಳು

|
Google Oneindia Kannada News

ಶುಕ್ರವಾರದಂದು ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಉತ್ತಮ ಏರಿಕೆ ದಾಖಲಿಸಿವೆ. ಬಿಎಸ್ ಇ ಸೂಚ್ಯಂಕವು 280.71 ಅಂಶ ಏರಿಕೆಯಾಗಿ, 37,384.99 ಅಂಶಗಳನ್ನು ತಲುಪಿದೆ. ಇನ್ನು ನಿಫ್ಟಿ 50 ಸೂಚ್ಯಂಕವು 93.10 ಅಂಶ ಏರಿಕೆಯಾಗಿ ದಿನಾಂತ್ಯಕ್ಕೆ 11,075.90 ಅಂಶಗಳಿಗೆ ವಹಿವಾಟು ಮುಗಿಸಿದೆ.

ನಿಫ್ಟಿ ಟಾಪ್ ಗೇಯ್ನರ್ಸ್
ಬಿಪಿಸಿಎಲ್

ಐಒಸಿ

ಟೈಟಾನ್ ಕಂಪೆನಿ

ಗೇಯ್ಲ್

ಐಸಿಐಸಿಐ ಬ್ಯಾಂಕ್

ಮಹೀಂದ್ರಾ ಅಂಡ್ ಮಹೀಂದ್ರಾದಿಂದ ಕಾರು ಸಬ್ ಸ್ಕ್ರಿಪ್ಷನ್ ಗೆ ಚಾಲನೆ: ಏನಿದು ಸ್ಕೀಮ್?ಮಹೀಂದ್ರಾ ಅಂಡ್ ಮಹೀಂದ್ರಾದಿಂದ ಕಾರು ಸಬ್ ಸ್ಕ್ರಿಪ್ಷನ್ ಗೆ ಚಾಲನೆ: ಏನಿದು ಸ್ಕೀಮ್?

ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಡೋಲಾಯಮಾನವಾಗಿದೆ. ಆದರೂ ಸಿಪ್ (ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್) ಮಾದರಿಯಲ್ಲಿ ಷೇರು ಖರೀದಿ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದು ಷೇರು ದಲ್ಲಾಳಿಗಳು ಸಲಹೆ ಮಾಡುತ್ತಾರೆ. ಅಂದ ಹಾಗೆ ಯಾವ ಷೇರುಗಳ ಮೇಲೆ ಹಣ ಹೂಡಬಹುದು ಎಂದು ಪ್ರಶ್ನಿಸಿದರೆ ದೊರೆಯುವ ಉತ್ತರ ಹೀಗೆ.

India Stock Market Up On Friday; 6 Stock Buying Tips

ಷೇರು ಮಾರುಕಟ್ಟೆ ಅಂದರೆ ರಿಸ್ಕ್ ಇದ್ದೇ ಇರುತ್ತದೆ. ಆದರೆ ಲಾರ್ಜ್ ಕ್ಯಾಪ್ ಷೇರುಗಳಲ್ಲಿ ವ್ಯಾಲ್ಯೂ ಪಿಕ್ ಮಾಡಬಹುದು. ಅದು ಕೂಡ ಹೂಡಿಕೆದಾರರಿಗೆ ಆಯ್ಕೆ ಹೇಳಬಹುದೇ ವಿನಾ ಇಂಥ ಷೇರಿನಲ್ಲಿ ಇಷ್ಟೇ ಲಾಭ ಬರುತ್ತದೆ ಎಂದು ಹೇಳುವುದು ಅಸಾಧ್ಯ. ಆದರೆ ಇವು ಉತ್ತಮ ಷೇರು ಎಂಬುದನ್ನು ಹೇಳಬಹುದಷ್ಟೇ ಎನ್ನುತ್ತಾರೆ.

ಐಒಸಿ

ಕೆನರಾ ಬ್ಯಾಂಕ್

ಮಹೀಂದ್ರಾ ಅಂಡ್ ಮಹೀಂದ್ರಾ

ಗೇಯ್ಲ್

ಐಟಿಸಿ

ಬಯೋಕಾನ್

ಈ ಷೇರುಗಳ ಸದ್ಯದ ಸ್ಥಿತಿಯಲ್ಲಿ ಹೂಡಿಕೆದಾರರ ಪಾಲಿಗೆ ಆಕರ್ಷಕವಾಗಿದೆ. ಹೂಡಿಕೆ ಮಾಡಿದರೆ ಉತ್ತಮ ಪ್ರತಿಫಲವೂ ದೊರೆಯಬಹುದು. ಆದರೆ ಅಪಾಯ ಕೂಡ ಇರುತ್ತದೆ ಎಂಬ ಕಿವಿ ಮಾತನ್ನು ಮರೆಯಬೇಡಿ.

English summary
Sensex and Nifty- 50 ended in green on Friday. Here is the 6 shares buying recommendation by share brokers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X