ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ತ್ರೈಮಾಸಿಕದಲ್ಲಿ 10.2 ಟ್ರಿಲಿಯನ್ ಮೌಲ್ಯದ ವಹಿವಾಟು ನಡೆಸಿದ ಯುಪಿಐ

|
Google Oneindia Kannada News

ನವದೆಹಲಿ, ಜೂ.27: ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ನೇತೃತ್ವದ ವಿವಿಧ ಪಾವತಿ ವಿಧಾನಗಳ ಮೂಲಕ ಭಾರತವು ಮೊದಲ ತ್ರೈಮಾಸಿಕದಲ್ಲಿ ಅಂದರೆ ಜನವರಿ- ಮಾರ್ಚ್ ಅವಧಿಯಲ್ಲಿ 9.36 ಶತಕೋಟಿ ರೂ.ಗಳ 10.25 ಟ್ರಿಲಿಯನ್ ವಹಿವಾಟುಗಳನ್ನು ಮಾಡಿದೆ ಎಂದು ವರದಿಗಳು ಸೋಮವಾರ ತಿಳಿಸಿವೆ.

ಪಾವತಿ ಉದ್ಯಮದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ವರ್ಲ್ಡ್‌ಲೈನ್‌ನ ವರದಿಯ ಪ್ರಕಾರ, ಯುಪಿಐ P2M ಅಂದರೆ ವ್ಯಕ್ತಿಯಿಂದ ವ್ಯಾಪಾರಿ ವಹಿವಾಟುಗಳು ಗ್ರಾಹಕರಲ್ಲಿ ಹೆಚ್ಚು ಆದ್ಯತೆಯ ಪಾವತಿ ವಿಧಾನವಾಗಿ ಕಂಡುಬಂದಿದೆ. ಇದು ಪರಿಮಾಣದಲ್ಲಿ ಶೇ. 64 ರಷ್ಟು ಮತ್ತು ಮೌಲ್ಯದಲ್ಲಿ ಶೇ. 50 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

ಮೇ ನಲ್ಲಿ 10 ಲಕ್ಷ ಕೋಟಿ ವಹಿವಾಟು ದಾಟಿದ ಯುಪಿಐ ಮೇ ನಲ್ಲಿ 10 ಲಕ್ಷ ಕೋಟಿ ವಹಿವಾಟು ದಾಟಿದ ಯುಪಿಐ

2022 ರ ಮೊದಲ ತ್ರೈಮಾಸಿಕದಲ್ಲಿ ಯುಪಿಐ ವಾಲ್ಯೂಮ್‌ನಲ್ಲಿ 14.55 ಶತಕೋಟಿ ವಹಿವಾಟುಗಳನ್ನು ಮತ್ತು ಮೌಲ್ಯದ ದೃಷ್ಟಿಯಿಂದ 26.19 ಟ್ರಿಲಿಯನ್‌ ಪಾವತಿಗಳನ್ನು ಮಾಡಿದೆ. ಅದರ ವಹಿವಾಟಿನ ಪ್ರಮಾಣ ಹಾಗೂ ಮೌಲ್ಯವು ಕಳೆದ ವರ್ಷಕ್ಕಿಂತ ಸುಮಾರು ದ್ವಿಗುಣಗೊಂಡಿದೆ. ಮೊದಲ ತ್ರೈಮಾಸಿಕ 2021ಕ್ಕೆ ಹೋಲಿಸಿದರೆ ಪರಿಮಾಣದಲ್ಲಿಶೇಕಡಾ 99ರಷ್ಟು ಹೆಚ್ಚಳ ಮತ್ತು ಮೌಲ್ಯದಲ್ಲಿ ಶೇಕಡಾ 90ರಷ್ಟು ಹೆಚ್ಚಳವಾಗಿದೆ.

 UPI123Pay : ಫೀಚರ್ ಫೋನ್‌ಗಳಲ್ಲೂ ಡಿಜಿಟಲ್ ಪೇಮೆಂಟ್ ಇದೀಗ ಸಾಧ್ಯ UPI123Pay : ಫೀಚರ್ ಫೋನ್‌ಗಳಲ್ಲೂ ಡಿಜಿಟಲ್ ಪೇಮೆಂಟ್ ಇದೀಗ ಸಾಧ್ಯ

ಮಾರ್ಚ್‌ ಹೊತ್ತಿಗೆ ಯುಪಿಐ ಶೇ. 93ರಷ್ಟು ವಾಹಿವಾಟು

ಮಾರ್ಚ್‌ ಹೊತ್ತಿಗೆ ಯುಪಿಐ ಶೇ. 93ರಷ್ಟು ವಾಹಿವಾಟು

ಮೊದಲ ತ್ರೈಮಾಸಿಕದಲ್ಲಿ, ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಆಪ್, ಅಮೆಜಾನ್ ಪೇ, ಆಕ್ಸಿಸ್ ಬ್ಯಾಂಕ್ಸ್ ಆಪ್ ವಾಲ್ಯೂಮ್‌ನಲ್ಲಿ ಅಗ್ರ ಯುಪಿಐ ಅಪ್ಲಿಕೇಶನ್‌ಗಳಾಗಿದ್ದರೆ. ಟಾಪ್ ಪಿಎಸ್‌ಪಿ ಯುಪಿಐ ಪ್ಲೇಯರ್‌ಗಳು ಯೆಸ್ ಬ್ಯಾಂಕ್ ಆಗಿದ್ದವು. ಉನ್ನತ ಯುಪಿಐ ಅಪ್ಲಿಕೇಶನ್‌ಗಳಲ್ಲಿ, ಫೋನ್‌ ಪೇ, ಗೂಗಲ್‌ ಪೇ ಮತ್ತು ಪೇಟಿಎಂ ಯುಪಿಐ ವಹಿವಾಟಿನ ಪ್ರಮಾಣದಲ್ಲಿ 94.8 ಪ್ರತಿಶತ ಮತ್ತು ಮಾರ್ಚ್ 2022ರ ಹೊತ್ತಿಗೆ ಯುಪಿಐ ವಹಿವಾಟಿನ ಮೌಲ್ಯದ ಶೇಕಡಾ 93 ರಷ್ಟು ಪಾಲನ್ನು ಹೊಂದಿದೆ ಎಂದು ವರದಿ ತೋರಿಸಿದೆ.

ಕ್ರೆಡಿಟ್ ಕಾರ್ಡ್‌ ವಹಿವಾಟಿನ ಶೇಕಡಾ 7ರಷ್ಟು ಪಾಲು

ಕ್ರೆಡಿಟ್ ಕಾರ್ಡ್‌ ವಹಿವಾಟಿನ ಶೇಕಡಾ 7ರಷ್ಟು ಪಾಲು

ಯುಪಿಐ ಪಿ2ಪಿ (ಪೀರ್-ಟು-ಪೀರ್) ವಹಿವಾಟುಗಳಿಗೆ ಸರಾಸರಿ ಟಿಕೆಟ್ ಗಾತ್ರ (ಎಟಿಎಸ್‌) ರೂ. 2,455 ಮತ್ತು ಪಿ2ಎಂ ವಹಿವಾಟುಗಳಿಗೆ ರೂ. 860 ಮಾರ್ಚ್‌ನಂತೆ ಕಂಡು ಬಂದಿದೆ. ಕ್ರೆಡಿಟ್ ಕಾರ್ಡ್‌ಗಳು ವಹಿವಾಟಿನ ಶೇಕಡಾ 7ರಷ್ಟು ಪಾಲನ್ನು ಹೊಂದಿವೆ. ಆದರೆ, ಮೌಲ್ಯದ ಶೇಕಡಾ 26 ರಷ್ಟು ಗ್ರಾಹಕರು ಇನ್ನೂ ಹೆಚ್ಚಿನ ಮೌಲ್ಯದ ವಹಿವಾಟುಗಳಿಗಾಗಿ ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಲು ಬಯಸುತ್ತಾರೆ ಎಂದು ತಿಳಿಸಿದೆ.

ಒಟ್ಟು ಪಿಒಎಸ್‌ ವಿಭಾಗಗಳ ಸಂಖ್ಯೆ 6.07 ಮಿಲಿಯನ್

ಒಟ್ಟು ಪಿಒಎಸ್‌ ವಿಭಾಗಗಳ ಸಂಖ್ಯೆ 6.07 ಮಿಲಿಯನ್

ಡೆಬಿಟ್ ಕಾರ್ಡ್‌ಗಳು ವಹಿವಾಟಿನ ಶೇಕಡಾ 10ರಷ್ಟಿದೆ. ಆದರೆ ಮೌಲ್ಯದಲ್ಲಿ ಶೇ. 18 ಕಂಡು ಬಂದಿದೆ. ಯುಪಿಐ ಏರಿಕೆಯಿಂದಾಗಿ ವಾಹಿವಾಟು ಹಿಂದಿನ ವರ್ಷಗಳಿಗಿಂತ ಕುಗ್ಗಿದೆ ಎಂದು ವರದಿ ಹೇಳಿದೆ. ಮಾರ್ಚ್ ವರೆಗೆ, ವ್ಯಾಪಾರಿ ಸ್ವಾಧೀನಪಡಿಸಿಕೊಳ್ಳುವ ಬ್ಯಾಂಕ್‌ಗಳಿಂದ ನಿಯೋಜಿಸಲಾದ ಒಟ್ಟು ಪಿಒಎಸ್‌ ವಿಭಾಗಗಳ ಸಂಖ್ಯೆ 6.07 ಮಿಲಿಯನ್ ಆಗಿದ್ದು, 2022ರ ಮೊದಲ ತ್ರೈಮಾಸಿಕದಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಪಿಒಎಸ್‌ ವಿಭಾಗಗಳನ್ನು ನಿಯೋಜಿಸಲಾಗಿದೆ.

658 ಮಿಲಿಯನ್ ಇಂಟರ್ನೆಟ್ ಬಳಕೆದಾರರು

658 ಮಿಲಿಯನ್ ಇಂಟರ್ನೆಟ್ ಬಳಕೆದಾರರು

2022ರ ಮೊದಲ ತ್ರೈಮಾಸಿಕದ ಅಂತ್ಯದ ವೇಳೆಗೆ ಚಲಾವಣೆಯಲ್ಲಿರುವ ಒಟ್ಟು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಸಂಖ್ಯೆ 991.28 ಮಿಲಿಯನ್ ಆಗಿದೆ. ಜನವರಿಯ ಹೊತ್ತಿಗೆ ಭಾರತದಲ್ಲಿ ಸುಮಾರು 658 ಮಿಲಿಯನ್ ಇಂಟರ್ನೆಟ್ ಬಳಕೆದಾರರು ಮತ್ತು ಸುಮಾರು 1.2 ಬಿಲಿಯನ್ ಮೊಬೈಲ್ ಚಂದಾದಾರರು ಇದ್ದಾರೆ. 2022ರ ಮೊದಲ ತ್ರೈಮಾಸಿಕದಲ್ಲಿ ಗ್ರಾಹಕರು 15.6 ಶತಕೋಟಿ ಮೊಬೈಲ್ ಆಧಾರಿತ ಪಾವತಿಗಳನ್ನು ಮಾಡಿದ್ದಾರೆ. ಆದರೆ ನೆಟ್ ಬ್ಯಾಂಕಿಂಗ್, ಇಂಟರ್ನೆಟ್ ಬ್ರೌಸರ್ ಆಧಾರಿತ ವಹಿವಾಟುಗಳು 1 ಶತಕೋಟಿಗಿಂತ ಹೆಚ್ಚು ಎಂದು ವರದಿ ತೋರಿಸಿದೆ.

English summary
UPI Transactions in Q1 2022: India saw 9.36 billion transactions amounting to Rs 10.25 trillion in the first quarter (January-March period) in UPI. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X