• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರ್‌ಐಎಲ್ ಸಿಬ್ಬಂದಿಯನ್ನು ‘ಫ್ರೆಂಟ್‌ ಲೈನ್ ಯೋಧರು’ ಎಂದು ಶ್ಲಾಘಿಸಿದ ಅಂಬಾನಿ

|

ನವದೆಹಲಿ, ಎಪ್ರಿಲ್ 6: ಲಾಕ್ ಡೌನ್ ಆದ ಹಿನ್ನಲೆಯಲ್ಲಿ ದೇಶದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಸಾವಿರಾರು ನೌಕರರು ಲೈಫ್‌ಲೈನ್‌ಗಳನ್ನು ನಡೆಸಲು ಸಹಾಯ ಮಾಡುತ್ತಿದ್ದಾರೆ. ಫೋನ್ ಲೈನ್‌ನಿಂದ ಹಿಡಿದು ಅಂಗಡಿಗಳ ಬಾಗಿಲು ತೆರೆದು ಜನರಿಗೆ ಸೇವೆಯನ್ನು ನೀಡುತ್ತಿವೆ, ಈ ಹಿನ್ನಲೆಯಲ್ಲಿ COVID-19 ವಿರುದ್ಧ ಯುದ್ಧದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಪಾತ್ರವನ್ನು ಎತ್ತಿಹಿಡಿದ ಬಿಲಿಯನೇರ್ ಮುಖೇಶ್ ಅಂಬಾನಿ, ಆರ್‌ ಐ ಎಲ್ ಸಿಬ್ಬಂದಿಯನ್ನು 'ಫ್ರೆಂಟ್‌ ಲೈನ್ ಯೋಧರು' ಎಂದಿದ್ದಾರೆ.

ಆಯಿಲ್ ನಿಂದ ಹಿಡಿದು ಟೆಲಿಕಾಂ ಕ್ಷೇತ್ರದವರೆಗೂ ಕಾರ್ಯನಿರ್ವಹಿಸುತ್ತಿರುವ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್‌ನಲ್ಲಿ, ಬಿಲಿಯನೇರ್ ಮುಖೇಶ್ ಅಂಬಾನಿ ಆಧುನಿಕ ಇತಿಹಾಸದಲ್ಲಿ ಅತ್ಯಂತ ಭೀಕರವಾದ ಪ್ರತಿಕೂಲತೆಯನ್ನು ಎದುರಿಸುವಲ್ಲಿ ಕಂಪನಿಯ ಪ್ರತಿಯೊಬ್ಬರೂ ಅಸಾಧಾರಣ ಮಟ್ಟದ ಬದ್ಧತೆಯನ್ನು ಪ್ರದರ್ಶಿಸುತ್ತಿರುವುದಕ್ಕೆ ಅವರು ವಿನಮ್ರರಾಗಿದ್ದಾರೆ ಎಂದು ಹೇಳಿದರು.

ಜಿಯೋ ಫೈಬರ್ ಹೊಚ್ಚ ಹೊಸ ಆಫರ್, WFHಗೆ ಅನುಕೂಲ

ಮೂರು ವಾರಗಳ ಲಾಕ್‌ಡೌನ್ ಸಲುವಾಗಿ 130 ಕೋಟಿ ಭಾರತೀಯರು ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ, ಇವರಿಗಾಗಿ ರಿಲಯನ್ಸ್‌ನ ಟೆಲಿಕಾಂ ಜಿಯೋ ಮೊಬೈಲ್‌ನಲ್ಲಿ ನಿರಂತರ ಧ್ವನಿ ಕರೆ ಮತ್ತು ಇಂಟರ್ನೆಟ್ ಸೇವೆಗಳ ಮೂಲಕ ಸುಮಾರು 40 ಕೋಟಿ ಜನರಿಗೆ ಜೀವಸೆಲೆ ಒದಗಿಸುತ್ತಿದೆ, ರಿಲಯನ್ಸ್ ರಿಟೇಲ್ ಲಕ್ಷಾಂತರ ಜನರಿಗೆ ಅಗತ್ಯ ಆಹಾರ ಮತ್ತು ಇತರ ವಸ್ತುಗಳನ್ನು ಪೂರೈಸುತ್ತದೆ, ರಿಲಯನ್ಸ್ ಲೈಫ್ ಸೈನ್ಸಸ್ ಭಾರತದ COVID-19 ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ ಮತ್ತು ಸರ್ ಎಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಕೇವಲ 10 ದಿನಗಳಲ್ಲಿ ಮುಂಬೈನಲ್ಲಿ 100 ಹಾಸಿಗೆಗಳ ಕೊರೊನಾವೈರಸ್ ಚಿಕಿತ್ಸಾ ಸೌಲಭ್ಯವನ್ನು ಸ್ಥಾಪಿಸಿದೆ ಎಂದು ತಿಳಿಸಿದರು.

ಇದಲ್ಲದೆ, ಕಂಪನಿಯ ಇಂಧನ ಸಂಸ್ಕರಣಾಗಾರಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಉತ್ಪಾದಿಸುವುದನ್ನು ಮುಂದುವರೆಸುತ್ತವೆ ಮತ್ತು ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳ ಪ್ಯಾಕೇಜಿಂಗ್‌ನಲ್ಲಿ ಬಳಸುವ ಉತ್ಪನ್ನಗಳ ತಯಾರಿಕೆಯೂ ಮುಂದುವರೆದಿದೆ. ಇದೇ ಸಂದರ್ಭದಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಸಿಬ್ಬಂದಿಗೆ 'ಮೈ ವಾಯ್ಸ್' ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.(ಪಿಟಿಐ)

English summary
With thousands of his company employees helping run lifelines in a lockdown country — from phone lines to stores to fuel — billionaire Mukesh Ambani has hailed them as ‘frontline warriors’ as he reiterated Reliance Industries’ role in India’s war against Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X