ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಸೌರಶಕ್ತಿ ಸುಂಕದ ಹೊಸ ದಾಖಲೆ : ಯುನಿಟ್‌ಗೆ 2 ರುಪಾಯಿ

|
Google Oneindia Kannada News

ನವದೆಹಲಿ, ನವೆಂಬರ್ 23: ಭಾರತದ ಸೌರಶಕ್ತಿ ಸುಂಕವು ಸೋಮವಾರ ಯುನಿಟ್‌ಗೆ 2 ರೂ.ಗಳಷ್ಟು ತಲುಪಿ ಹೊಸ ದಾಖಲೆಯನ್ನು ಮುಟ್ಟಿದೆ. ದೇಶದಲ್ಲಿ ಈ ಹಿಂದೆ ದಾಖಲಾದ ಅತಿ ಕಡಿಮೆ ಸೌರ ಸುಂಕ ಯುನಿಟ್‌ಗೆ 2.36 ರೂಪಾಯಿ ಆಗಿತ್ತು.

ಸೌದಿ ಅರೇಬಿಯಾದ 'ಅಲ್ಜೋಮೈಹ್ ಎನರ್ಜಿ ಅಂಡ್ ವಾಟರ್ ಕಂಪನಿ ಮತ್ತು ಸಿಂಗಾಪುರ ಮೂಲದ ವಿದ್ಯುತ್ ಉತ್ಪಾದಕ ಸೆಂಬ್‌ಕಾರ್ಪ್ ಇಂಡಸ್ಟ್ರೀಸ್' ಗ್ರೀನ್ ಇನ್ಫ್ರಾ ವಿಂಡ್ ಎನರ್ಜಿ ಲಿಮಿಟೆಡ್ ಕ್ರಮವಾಗಿ 200 ಮೆಗಾವ್ಯಾಟ್ ಮತ್ತು 400 ಮೆಗಾವ್ಯಾಟ್ ಸೌರ ಯೋಜನೆಗಳನ್ನು ನಿರ್ಮಿಸುವ ಒಪ್ಪಂದಗಳನ್ನು ಪಡೆಯಲು ಬಿಡ್‌ನಲ್ಲಿ ಭಾಗಿಯಾಗಿದ್ದವು.

ಒಂದೇ ವರ್ಷದಲ್ಲಿ ಈ ಕಂಪನಿಯ ಷೇರಿಗೆ ಶೇ. 741ರಷ್ಟು ಆದಾಯಒಂದೇ ವರ್ಷದಲ್ಲಿ ಈ ಕಂಪನಿಯ ಷೇರಿಗೆ ಶೇ. 741ರಷ್ಟು ಆದಾಯ

470 ಮೆಗಾವ್ಯಾಟ್ ಸಾಮರ್ಥ್ಯವನ್ನು ಉಳಿಸಿಕೊಳ್ಳಲು ಸರ್ಕಾರಿ ಸ್ವಾಮ್ಯದ ಎನ್‌ಟಿಪಿಸಿ ಲಿಮಿಟೆಡ್ ಯಶಸ್ವಿಯಾಗಿದ್ದು ಯುನಿಟ್‌ಗೆ ಎರಡನೇ ಅತಿ ಕಡಿಮೆ ಗೆಲುವಿನ ಬಿಡ್ ಗೆದಿತ್ತು. ಈ ಹರಾಜಿನಲ್ಲಿ ದಾಖಲೆಯ ಕಡಿಮೆ ಬಿಡ್ ಬೆಲೆಯು ಯುನಿಟ್‌ಗೆ ಎರಡು ರೂಪಾಯಿ ಆಗಿದೆ.

Indias Solar Power Tariffs Hit A New Record: Rs 2 Per Unit

ಈ ಬಿಡ್ ಕುರಿತು ಅಧಿಕೃತ ಹೇಳಿಕೆ ಹೊರಬೀಳದಿದ್ರು, ಅಲ್ಜೋಮೈಹ್ ಎನರ್ಜಿ ಮತ್ತು ವಾಟರ್ ಕಂಪನಿ, ಸೆಂಬ್‌ಕಾರ್ಪ್ ಇಂಡಸ್ಟ್ರೀಸ್ ಮತ್ತು ಎನ್‌ಟಿಪಿಸಿಯ ವಕ್ತಾರರನ್ನು ಸಂಪರ್ಕಿಸುವ ಪ್ರಯತ್ನ ನಡೆದರು, ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ವಿಶೇಷವೆಂದರೆ, ಭಾರತ ನಡೆಸಿದ ಈ ಹರಾಜಿನಲ್ಲಿ ವಿದೇಶಿ ಕಂಪನಿಗಳು ಆಕ್ರಮಣಕಾರಿ ಬಿಡ್‌ಗಳನ್ನು ನಡೆಸಿವೆ.

English summary
India's Solar power tariffs hit a new record low of Rs 2 Per unit on monday during a bid conducted by SECI
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X