ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಸೇವಾ ವಲಯದಲ್ಲಿ ಸತತ ಎರಡನೇ ತಿಂಗಳು ಚೇತರಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 03: ದೇಶದ ಸೇವಾ ವಲಯವು ಸತತ ಎರಡನೇ ತಿಂಗಳು ಸಕಾರಾತ್ಮಕ ಬೆಳವಣಿಗೆ ಸಾಧಿಸಿದ್ದು, ಕೋವಿಡ್-19 ಪ್ರೇರಿತ ಲಾಕ್‌ಡೌನ್ ಬಳಿಕ ಸುಧಾರಣೆಯತ್ತ ಸಾಗಿದೆ. ಕಳೆದ ಒಂಭತ್ತು ತಿಂಗಳಿನಲ್ಲಿ ಇದು ಎರಡು ತಿಂಗಳುಗಳ ಸತತ ಬೆಳವಣಿಗೆಯಾಗಿದ್ದು, ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಸ್ವಲ್ಪ ಇಳಿಕೆಯಾಗಿದೆ.

ವಿಶ್ಲೇಷಣಾತ್ಮಕ ಸಂಸ್ಥೆ ಐಎಚ್‌ಎಸ್ ಮಾರ್ಕಿಟ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಸೇವಾವಲಯ ಚಟುವಟಿಕೆಗಳ ಸೂಚ್ಯಂಕವು ಅಕ್ಟೋಬರ್‌ನಲ್ಲಿ 54.1ರಷ್ಟಿತ್ತು. ಆದರೆ ಇದು ನವೆಂಬರ್‌ನಲ್ಲಿ 53.7ಕ್ಕೆ ಇಳಿಕೆಯಾಗಿದೆ. ಆದರೆ ಸೂಚ್ಯಂಕವು 50ಕ್ಕಿಂತ ಮೇಲ್ಮಟ್ಟದಲ್ಲಿ ಇರುವುದು ಸ್ಥಿರ ಬೆಳವಣಿಗೆ ಸೂಚನೆಯಾಗಿದೆ ಎಂದು ಐಎಚ್‌ಎಸ್ ಮಾರ್ಕಿಟ್ ಹೇಳಿದೆ.

ಹರಿಯಾಣದ ಖಾಸಗಿ ಕಂಪನಿಗಳಲ್ಲಿ ಶೇ.75ರಷ್ಟು ಸ್ಥಳೀಯರಿಗೆ ಉದ್ಯೋಗಹರಿಯಾಣದ ಖಾಸಗಿ ಕಂಪನಿಗಳಲ್ಲಿ ಶೇ.75ರಷ್ಟು ಸ್ಥಳೀಯರಿಗೆ ಉದ್ಯೋಗ

ಇದಲ್ಲದೆ, ಭಾರತೀಯ ಖಾಸಗಿ ವಲಯದ ಚಟುವಟಿಕೆಗಳು ನವೆಂಬರ್‌ನಲ್ಲಿ ಸತತ ಮೂರನೇ ತಿಂಗಳು ಏರಿಕೆಯಾಗಿದೆ. ಆದರೆ ಬೆಳವಣಿಗೆಯ ವೇಗವು ಅಕ್ಟೋಬರ್‌ನಿಂದ ಒಂಬತ್ತು ವರ್ಷಗಳ ಗರಿಷ್ಠ ಮಟ್ಟದಿಂದ ಸ್ವಲ್ಪ ಮಟ್ಟಿಗೆ ಇಳಿಕೆಯಾಇಗದೆ. ಸಂಯೋಜಿತ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) 58 ರಿಂದ 56.3 ಕ್ಕೆ ಇಳಿದಿದೆ, ಇದು ಇನ್ನೂ ಗಮನಾರ್ಹವಾದ ವಿಸ್ತರಣೆಯ ದರಕ್ಕೆ ಅನುಗುಣವಾಗಿದೆ ಎಂದಿದೆ.

Indias Service Sector Expanded For The 2nd Straight Month

ಇನ್ನು ಕೋವಿಡ್-19 ಸಂಕಷ್ಟದಿಂದಾಗಿ ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಹೊರಹಾಕಿದ್ದ ಸೇವಾ ವಲಯದ ಕಂಪನಿಗಳು ನವೆಂಬರ್ ತಿಂಗಳಿನಲ್ಲಿ ಹೊಸದಾಗಿ ಕೆಲಸಗಾರರನ್ನು ನೇಮಿಸಿಕೊಳ್ಳುತ್ತಿದೆ. ಆದರೆ ಕೆಲವು ಕಂಪನಿಗಳಿಗೆ ಬೇಡಿಕೆಗೆ ತಕ್ಕಂತಹ ಕೆಲಸಗಾರರನ್ನು ಹೊಂದಿರುವುದರಿಂದ ಹೊಸ ನೇಮಕ ಮಾಡಿಕೊಳ್ಳದೇ ಇರುವುದು ಉದ್ಯೋಗ ದರದ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ.

English summary
India's services sector expanded for the second straight month in November, a monthly survey showed on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X