ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಲ್ಲರೆ ಹಣದುಬ್ಬರ ಜೂನ್ ತಿಂಗಳಿನಲ್ಲಿ ಶೇ. 6.09ರಷ್ಟು ಏರಿಕೆ

|
Google Oneindia Kannada News

ನವದೆಹಲಿ, ಜುಲೈ 14: ಕೊರೊನಾವೈರಸ್ ಬಿಕ್ಕಟ್ಟು ದಿನೇ ದಿನೇ ಹೆಚ್ಚಾಗತೊಡಗಿದ್ದು, ಆರ್ಥಿಕತೆಯ ಮೇಲಿನ ಪರಿಣಾಮವು ಬಿಗಿಯಾಗಿದೆ. ಇದಕ್ಕೆ ಸಾಕ್ಷ್ಯಯೆಂಬಂತೆ ಚಿಲ್ಲರೆ ಹಣದುಬ್ಬರವು ಮೇ ನಂತರ ಜೂನ್‌ನಲ್ಲಿ ಶೇಕಡಾ 6 ಕ್ಕಿಂತ ಹೆಚ್ಚಾಗಿದೆ. ಇದು ಏಪ್ರಿಲ್‌ನಲ್ಲಿ ಶೇ 7.22 ಕ್ಕೆ ತಲುಪಿದೆ. ಅದರ ನಂತರ ಅದು ಮೇ ತಿಂಗಳಲ್ಲಿ ಶೇ 6.27 ಕ್ಕೆ ಇಳಿದಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಚಿಲ್ಲರೆ ಹಣದುಬ್ಬರವು ಜೂನ್‌ನಲ್ಲಿ ಶೇಕಡಾ 6.09 ರಷ್ಟಿದೆ. ಆರ್ಥಿಕ ಚಟುವಟಿಕೆಯ ಮಂದಗತಿಯ ಹೊರತಾಗಿಯೂ, ಅಂತಹ ಹೆಚ್ಚಿನ ಮಟ್ಟದ ಹಣದುಬ್ಬರದ ಹಿಂದಿನ ನಿಜವಾದ ಕಾರಣವೆಂದರೆ ಹೆಚ್ಚಿನ ಆಹಾರ ಉತ್ಪನ್ನಗಳು ಮತ್ತು ಸಾರಿಗೆ ಶುಲ್ಕಗಳು. ಇತ್ತೀಚೆಗೆ ಡೀಸೆಲ್ ಬೆಲೆ ಹೆಚ್ಚಳದಿಂದಾಗಿ, ಸಾರಿಗೆ ದುಬಾರಿಯಾಗಿದೆ ಮತ್ತು ತರಕಾರಿ ಹಾಗೂ ಹಣ್ಣುಗಳ ಬೆಲೆ ಹೆಚ್ಚಾಗಿದೆ ಎಂದು ತೋರಿಸಿದೆ.

ಆಹಾರ ಹಣದುಬ್ಬರ: ಮೇ ತಿಂಗಳಿನಲ್ಲಿ 9.28 ಪರ್ಸೆಂಟ್‌ಗೆ ಏರಿಕೆಆಹಾರ ಹಣದುಬ್ಬರ: ಮೇ ತಿಂಗಳಿನಲ್ಲಿ 9.28 ಪರ್ಸೆಂಟ್‌ಗೆ ಏರಿಕೆ

ಚಿಲ್ಲರೆ ಹಣದುಬ್ಬರವು ಜೂನ್‌ನಲ್ಲಿ ಶೇಕಡಾ 5.3 ಆಗಿರಬಹುದು ಎಂದು ತಜ್ಞರು ಅಂದಾಜಿಸಿದ್ದರು. ಶೇಕಡಾ 6 ಕ್ಕಿಂತ ಹೆಚ್ಚಿನ ಹಣದುಬ್ಬರವು ವಿತ್ತೀಯ ನೀತಿ ಸಮಿತಿಯ ಸಹಿಷ್ಣುತೆ ಬ್ಯಾಂಡ್‌ನ ಶೇಕಡಾ 4 ಕ್ಕಿಂತ ಹೆಚ್ಚಾಗಿದೆ (+/- 2%). ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 5.91 ರಷ್ಟಿತ್ತು. ಮಾರ್ಚ್ ಅಂತ್ಯದಲ್ಲಿ ವಿಧಿಸಲಾದ ಲಾಕ್‌ಡೌನ್‌ನಿಂದಾಗಿ ಡೇಟಾ ಸಂಗ್ರಹಣೆಗೆ ಅಡ್ಡಿಯುಂಟಾಯಿತು, ಇದು ಏಪ್ರಿಲ್ ಮತ್ತು ಮೇ ತಿಂಗಳ ಪೂರ್ಣ ಅಂಕಿಅಂಶಗಳನ್ನು ತಲುಪಲು ವಿಫಲವಾಗಿದೆ.

Indias Retail Inflation Stands At 6.09% In June

ವಿವಿಧ ವಸ್ತುಗಳ ಚಿಲ್ಲದ ಹಣದುಬ್ಬರ ದರ:

ಗ್ರಾಮೀಣ ಹಣದುಬ್ಬರ ಶೇಕಡಾ 6.2 ರಷ್ಟಿದ್ದು, ನಗರ ಹಣದುಬ್ಬರ ಶೇಕಡಾ 5.9ರಷ್ಟಿದೆ. ಇನ್ನು ಮಾಂಸ ಮತ್ತು ಮೀನು ಹಣದುಬ್ಬರವು ಶೇಕಡಾ 16.22. ದ್ವಿದಳ ಧಾನ್ಯಗಳ ಮೇಲಿನ ಹಣದುಬ್ಬರ ಶೇ 16.68, ಮಸಾಲೆಗಳ ಮೇಲಿನ ಹಣದುಬ್ಬರ ಶೇ. 11.74ರಷ್ಟು ಇದೆ

ಬಟ್ಟೆ ಮತ್ತು ಬೂಟುಗಳ ಮೇಲಿನ ಹಣದುಬ್ಬರ ಶೇ. 3.53ರಷ್ಟು , ವಸತಿ ಹಣದುಬ್ಬರ ಶೇ. 3.55 ಪರ್ಸೆಂಟ್ ಮತ್ತು ಇಂಧನ ಮತ್ತು ವಿದ್ಯುತ್ ಹಣದುಬ್ಬರವು ಶೇಕಡಾ 2.69ರಷ್ಟಾಗಿದೆ. ಜೊತೆಗೆ ಸಾರಿಗೆ ಮತ್ತು ಸಂವಹನ ಹಣದುಬ್ಬರ ಶೇ 7.14ಕ್ಕೆ ತಲುಪಿದೆ.

English summary
Retail inflation increased 6.09 Percent In June, Mainly on account of higher Prices Of food items
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X