ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.93ರಷ್ಟು ಏರಿಕೆ

|
Google Oneindia Kannada News

ನವದೆಹಲಿ, ಆಗಸ್ಟ್ 13: ಜುಲೈ ತಿಂಗಳಲ್ಲಿ ಭಾರತದ ಚಿಲ್ಲರೆ ಹಣದುಬ್ಬರವು ಶೇ .6.93 ರಷ್ಟಿದ್ದು, ಹಿಂದಿನ ತಿಂಗಳ ಅವಧಿಯಲ್ಲಿ ಇದು 6.23 ರಷ್ಟಿತ್ತು ಎಂದು ಆಗಸ್ಟ್ 13 ರಂದು ಬಿಡುಗಡೆಯಾದ ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‌ಎಸ್‌ಒ) ಅಂಕಿ ಅಂಶಗಳು ತಿಳಿಸಿವೆ.

Recommended Video

MLA Akhanda Srinivasamurtyಯನ್ನು ತರಾಟೆಗೆ ತೆಗೆದುಕೊಂಡ ಜನ | Oneindia Kannada

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ದರವನ್ನು ಜೂನ್‌ನಲ್ಲಿ ಶೇ. 6.09 ರಿಂದ ಶೇ. 6.23 ಕ್ಕೆ ಪರಿಷ್ಕರಿಸಲಾಗಿದೆ.

ಚಿಲ್ಲರೆ ಹಣದುಬ್ಬರ ಜೂನ್ ತಿಂಗಳಿನಲ್ಲಿ ಶೇ. 6.09ರಷ್ಟು ಏರಿಕೆಚಿಲ್ಲರೆ ಹಣದುಬ್ಬರ ಜೂನ್ ತಿಂಗಳಿನಲ್ಲಿ ಶೇ. 6.09ರಷ್ಟು ಏರಿಕೆ

ಜೂನ್‌ನ ಅಂಕಿ-ಅಂಶಗಳ ಬಿಡುಗಡೆ ಮೊದಲು, ಸರ್ಕಾರವು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದತ್ತಾಂಶವನ್ನು ಬಿಡುಗಡೆ ಮಾಡಿಲ್ಲ. ಆದರೆ, ಏಪ್ರಿಲ್‌ನಲ್ಲಿ ಅದು ಮಾರ್ಚ್ ತಿಂಗಳ ಸಿಪಿಐ ಡೇಟಾವನ್ನು ಶೇ. 5.91 ರಿಂದ ಶೇ. 5.84 ಕ್ಕೆ ಪರಿಷ್ಕರಿಸಿದೆ.

Indias Retail Inflation 2020: Govt Data Shows 6.93 Percent In July

ಜುಲೈನಲ್ಲಿ ಒಟ್ಟು ಆಹಾರ ಬೆಲೆ ಹಣದುಬ್ಬರ (ಸಿಎಫ್‌ಪಿಐ) ಶೇಕಡಾ 9.62 ರಷ್ಟಿದ್ದು, ಒಂದು ತಿಂಗಳ ಹಿಂದೆ ಶೇ .8.72 ರಷ್ಟಿತ್ತು. ತರಕಾರಿಗಳ ಹಣದುಬ್ಬರವು ಜುಲೈನಲ್ಲಿ ಶೇಕಡಾ 11.29 ರಷ್ಟಿದ್ದರೆ, ಜೂನ್‌ನಲ್ಲಿ ಇದು 1.86 ರಷ್ಟಿತ್ತು. ಇಂಧನ ಮತ್ತು ಬೆಳಕಿನ ವಿಭಾಗದಲ್ಲಿ, ಅದೇ ತಿಂಗಳ ಹಣದುಬ್ಬರವು ಜೂನ್‌ನಲ್ಲಿ 2.69 ರಷ್ಟಿದ್ದರೆ ಶೇ. 2.80 ರಷ್ಟಿತ್ತು.

English summary
The country’s retail inflation spiked to 6.93 per cent in the month of July mainly on account of higher food prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X