ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಅಕ್ಟೋಬರ್, ನವೆಂಬರ್‌ನಲ್ಲಿ 4.29 ದಶಲಕ್ಷ ಟನ್ ಸಕ್ಕರೆ ಉತ್ಪಾದನೆ

|
Google Oneindia Kannada News

ನವದೆಹಲಿ, ಡಿಸೆಂಬರ್ 02: ಅಕ್ಟೋಬರ್ ಮತ್ತು ನವೆಂಬರ್‌ ತಿಂಗಳಿನಲ್ಲಿ ಭಾರತೀಯ ಸಕ್ಕರೆ ಕಾರ್ಖಾನೆಗಳು 4.29 ದಶಲಕ್ಷ ಟನ್ ಸಕ್ಕರೆಯನ್ನು ಉತ್ಪಾದಿಸಿದ್ದು, ಇದು ಒಂದು ವರ್ಷದ ಹಿಂದಿನ ಪ್ರಮಾಣಕ್ಕಿಂತ ಶೇಕಡಾ 107ರಷ್ಟು ಹೆಚ್ಚಾಗಿದೆ ಎಂದು ಪ್ರಮುಖ ವ್ಯಾಪಾರ ಸಂಸ್ಥೆ ಬುಧವಾರ ತಿಳಿಸಿದೆ.

ಅಕ್ಟೋಬರ್ 1 ರಂದು ಪ್ರಾರಂಭವಾದ 2020/21 ಮಾರುಕಟ್ಟೆ ವರ್ಷದ ಮೊದಲ ಎರಡು ತಿಂಗಳಲ್ಲಿ ದೇಶೀಯ ಸಕ್ಕರೆ ಕಾರ್ಖಾನೆಗಳು ದಾಖಲೆಯ ಪ್ರಮಾಣದಲ್ಲಿ ಸಕ್ಕರೆ ಉತ್ಪಾದನೆಯನ್ನು ಮಾಡಿರುವುದು ಅಂಕಿ-ಅಂಶಗಳ ಮೂಲಕ ಬಹಿರಂಗವಾಗಿದೆ.

 ವಿಶ್ವದ 8ನೇ ಅತಿದೊಡ್ಡ ಹಾಲು ಸಂಸ್ಕಾರಕವಾಗಿ ಹೊರಹೊಮ್ಮಿದ ಅಮುಲ್ ವಿಶ್ವದ 8ನೇ ಅತಿದೊಡ್ಡ ಹಾಲು ಸಂಸ್ಕಾರಕವಾಗಿ ಹೊರಹೊಮ್ಮಿದ ಅಮುಲ್

ಭಾರತ ವಿಶ್ವದ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕವಾಗಿದೆ. ಒಂದು ವರ್ಷದ ಹಿಂದೆ 309 ಕಾರ್ಖಾನೆಗಳಿಗೆ ಹೋಲಿಸಿದರೆ ನವೆಂಬರ್ ಅಂತ್ಯದ ವೇಳೆಗೆ, ದೇಶದಲ್ಲಿ 408 ಸಕ್ಕರೆ ಕಾರ್ಖಾನೆಗಳು ಸಕ್ಕರೆ ಉತ್ಪಾದನೆ ಪ್ರಾರಂಭಿಸಿದವು ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ) ಪ್ರಕಟಣೆಯಲ್ಲಿ ತಿಳಿಸಿದೆ.

Indias Oct-Nov Sugar Output Rises To 4.29 Million Tonnes

ಕಳೆದ ವರ್ಷ ಬರದಿಂದಾಗಿ ಉತ್ಪಾದನೆ ಸ್ವಲ್ಪ ಇಳಿಕೆಯಾಗಿತ್ತು. ಆದರೆ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ 2021ರ ಸಕ್ಕರೆ ಸೀಸನ್‌ನಲ್ಲಿ(ಅಕ್ಟೋಬರ್-ಸೆಪ್ಟೆಂಬರ್) ಹೇರಳವಾಗಿ ಕಬ್ಬಿನ ಬೆಳೆಯ ಉತ್ಪಾದನೆ ಆಗಲಿರುವುದರಿಂದ ಸಕ್ಕಾರೆ ಉತ್ಪಾದನೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿತ್ತು.

ಭಾರತದಲ್ಲಿ ಸಕ್ಕರೆ ಸೀಸನ್‌ ಪ್ರತಿ ವರ್ಷ ಅಕ್ಟೋಬರ್‌ನಿಂದ ಆರಂಭವಾಗುತ್ತದೆ. ಅಕ್ಟೋಬರ್‌ನಲ್ಲಿ ಆರಂಭವಾಗುವ ಕೊಯ್ಲು, ಜನವರಿಯಲ್ಲಿ ಉನ್ನತ ಮಟ್ಟದಲ್ಲಿರುತ್ತದೆ ಹಾಗೂ ನಂತರ ಇಳಿಮುಖವಾಗುತ್ತದೆ.

English summary
Indian sugar mills have produced 4.29 million tonnes of sugar in the first two months of the 2020/21 marketing year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X