ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಏರ್ ಲೈನ್ ಸಂಸ್ಥೆ 'ಜೂಮ್ ಏರ್' ಬಗ್ಗೆ ತಿಳಿಯಬೇಕಾದ 5 ಅಂಶ

ದೇಶೀಯ ಮಟ್ಟದಲ್ಲಿ ಈಗಾಗಲೇ ಏರ್ ಇಂಡಿಯಾ, ಜೆಟ್ ಏರ್ ವೇಸ್ ಸೇರಿದಂತೆ ಹಲವಾರು ಪ್ರತಿಷ್ಠಿತ ಕಂಪನಿಗಳು ಸೇವೆ ನೀಡುತ್ತಿದ್ದು ಹೊಸ ಕಂಪನಿಯಾದ ಜೂಮ್ ಏರ್ ಆಗಮನದಿಂದ ಸ್ಪರ್ಧೆ ಹೆಚ್ಚಾಗುವ ಸಾಧ್ಯತೆಗಳಿವೆ.

|
Google Oneindia Kannada News

ದೇಶೀಯ ವಿಮಾನ ಯಾನ ಸೇವಾ ಕ್ಷೇತ್ರಕ್ಕೆ ಹೊಸತೊಂದು ಕಂಪನಿ ಸೇರ್ಪಡೆಗೊಂಡಿದೆ. ಅದರ ಹೆಸರು ಜೂಮ್ ಇನ್. ಇತ್ತೀಚೆಗೆ ಇದರ ಮೊದಲ ಹಾರಾಟ ನಡೆಸಲಾಗಿದೆ.

ಹರ್ಯಾಣದಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಕಂಪನಿಯ ಮೊದಲ ವಿಮಾನ ಇತ್ತೀಚೆಗೆ, ನವದೆಹಲಿಯಿಂದ ಕೋಲ್ಕತಾದ ಡಮ್ ಡಮ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಹೊತ್ತು ತಂದಿಳಿಸಿತು. ಈ ಮೂಲಕ ದೇಶೀಯ ವಿಮಾನ ಕ್ಷೇತ್ರಕ್ಕೆ ಲಗ್ಗೆಯಿಟ್ಟಿರುವ ಈ ಕಂಪನಿಯ ಮೇಲೆ ಹೊಸ ಹೊಸ ನಿರೀಕ್ಷೆಗಳು ಗರಿಗೆದರಿವೆ.

ಈ ನಿರೀಕ್ಷೆಗಳಲ್ಲಿ ಮೊದಲನೆಯಾಗಿ, ದೇಶೀಯ ಮಟ್ಟದಲ್ಲಿ ಹೊಸ ವಿಮಾನ ಸಂಸ್ಥೆಯ ಆಗಮನದಿಂದ ಹೊಸ ಸ್ಪರ್ಧೆ ಹುಟ್ಟಿಕೊಳ್ಳಬಹುದೆಂಬ ಅಂದಾಜಿದೆ. ಈ ಸ್ಪರ್ಧೆಯು ಮುಂದೆ ಹೆಚ್ಚಾಗಿ, ದರ ಸಮರಕ್ಕೆ ವೇದಿಕೆ ಸಜ್ಜಾಗಿ, ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಉತ್ತಮ ಸೌಕರ್ಯಗಳು ಸಿಗಬಹುದೆಂದು ಅಂದಾಜಿಸಲಾಗಿದೆ.

ಈ ವಿಮಾನ ಯಾನ ಸಂಸ್ಥೆ, ಮುಂದೊಂದು ದಿನ ಬೆಂಗಳೂರಿಗೂ ಕಾಲಿಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹಾಗಾಗಿ, ಈ ಬಗ್ಗೆ ಒಂದೂರು ಮಾಹಿತಿ ನಿಮಗಾಗಿ....

(ಚಿತ್ರಕೃಪೆ: ಜೂಮ್ ಏರ್ ಜಾಲತಾಣ ಹಾಗೂ ಫೇಸ್ ಬುಕ್ ಪುಟ)

ಶೀಘ್ರವೇ ವಿಸ್ತೃತ

ಶೀಘ್ರವೇ ವಿಸ್ತೃತ

ಸದ್ಯಕ್ಕೆ ದೆಹಲಿ - ಅಮೃತಸರ, ದೆಹಲಿ- ಚಂಡೀಗಢದ ನಡುವೆ ಮಾತ್ರ ವಾಯು ಸಂಚಾರ ಸೇವೆ ಆರಂಭಿಸಲಾಗಿದ್ದು, ಮುಂಬರುವ ದಿನಗಳಲ್ಲಿ ದೇಶದ ಇತರೆಡೆಗಳಿಗೂ ಈ ಸೇವೆಗಳನ್ನು ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.

ಜೂನ್ ವೇಳೆಗೆ ಕೊಂಚ ವಿಸ್ತರಣೆ

ಜೂನ್ ವೇಳೆಗೆ ಕೊಂಚ ವಿಸ್ತರಣೆ

ಇದೇ ವರ್ಷ ಜೂನ್, ಜುಲೈ ವೇಳೆಗೆ, ಸೂರತ್, ಭಾವನಗರ್, ತಿರುಪತಿ, ವಿಜಯವಾಡ, ಮುಂಬೈ, ಶಿಲ್ಲಾಂಗ್, ಐಜ್ವಾಲ್, ಅಲಹಾಬಾದ್, ಇಂದೋರ್, ಗೋರಖ್ ಪುರ, ಭೋಪಾಲ್ ಮುಂತಾದ ನಗರಗಳಿಗೆ ಸಂಸ್ಥೆಯ ಸೇವೆ ವಿಸ್ತರಿಸಲ್ಪಡಲಿದೆ.

ತಜ್ಞರ ನಿರೀಕ್ಷೆ

ತಜ್ಞರ ನಿರೀಕ್ಷೆ

ಜೂಮ್ ಏರ್ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ದೇಶೀಯ ವಿಮಾನ ಯಾನ ಕ್ಷೇತದಲ್ಲಿ ಸ್ಪರ್ಧೆ ಏರ್ಪಡುವ ನಿರೀಕ್ಷೆಯನ್ನು ಈ ಕ್ಷೇತ್ರದ ತಜ್ಞರು ವ್ಯಕ್ತಪಡಿಸಿದ್ದಾರೆ.

ದೊಡ್ಡ ಸ್ಪರ್ಧೆಗೆ ವೇದಿಕೆ ಸಜ್ಜು?

ದೊಡ್ಡ ಸ್ಪರ್ಧೆಗೆ ವೇದಿಕೆ ಸಜ್ಜು?

ಈಗಾಗಲೇ ಏರ್ ಇಂಡಿಯಾ, ಜೆಟ್ ಏರ್ ವೇಸ್, ವಿಸ್ತಾರ, ಇಂಡಿಗೋ, ಸ್ಪೈಸ್ ಜೆಟ್, ಗೋ ಏರ್, ಏರ್ ಏಷ್ಯಾ ಇಂಡಿಯಾ ಮುಂತಾದ ಸಂಸ್ಥೆಗಳು ಸೇವೆ ನೀಡುತ್ತಿವೆ. ಇದೀಗ, ಜೂಮ್ ಏರ್ ಕಾಲಿಟ್ಟಿರುವುದರಿಂದ ಸ್ಪರ್ಧೆ ಹೆಚ್ಚಾಗಿ ದರ ಸಮರವೇರ್ಪಟ್ಟು, ಪ್ರಯಾಣಿಕರಿಗೆ ಅನುಕೂಲಕರ ಸೌಕರ್ಯಗಳು ಸಿಗಲಿವೆ ಎಂದು ಹೇಳಲಾಗಿದೆ.

ಲಾಭದ ಬಗ್ಗೆ ನಿರೀಕ್ಷೆ

ಲಾಭದ ಬಗ್ಗೆ ನಿರೀಕ್ಷೆ

ಈಗಷ್ಟೇ ತನ್ನ ಮೊದಲ ಹಾರಾಟ ಆರಂಭಿಸಿರುವ ಜೂಮ್ ಇನ್ ವಿಮಾನ ಸಂಸ್ಥೆ ಮೊದಲ ಮೂರು ತಿಂಗಳಲ್ಲಿ 20-25 ಕೋಟಿ ರು. ಲಾಭ ಗಳಿಸಬಹುದಾದ ನಿರೀಕ್ಷೆಯೂ ಇದೆ.

English summary
A new airline named 'Zoom Air' has started its sevice recently. Experts think that, due to the arrival of Zoom Air, competition will rise in domestic aviation sector of India which will be profitable for passangers in near future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X