ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರುಪೇಟೆ: ಆರು ದಿನಗಳ ಲಾಭ ಕೊನೆಗೊಳಿಸಿದ ಸೆನ್ಸೆಕ್ಸ್, ನಿಫ್ಟಿ

|
Google Oneindia Kannada News

ನವದೆಹಲಿ, ಫೆಬ್ರವರಿ 09: ಏರುಮುಖದಲ್ಲೇ ಸಾಗಿದ್ದ ಭಾರತೀಯ ಷೇರುಪೇಟೆ ಮಂಗಳವಾರ ಹೂಡಿಕೆದಾರರಿಗೆ ನಿರಾಸೆ ಮೂಡಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 19.69 ಪಾಯಿಂಟ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಇಳಿಕೆಗೊಂಡಿದೆ.

ಇಂದು ಸೆನ್ಸೆಕ್ಸ್ 19.69 ಪಾಯಿಂಟ್‌ ಅಥವಾ ಶೇಕಡಾ 0.04ರಷ್ಟು ಕುಸಿತ ಕಂಡಿದ್ದು, 51329.08 ರ ಮಟ್ಟದಲ್ಲಿ ಮುಚ್ಚಿದೆ. ಎನ್‌ಎಸ್ಇ ಸೂಚ್ಯಂಕ ನಿಫ್ಟಿ 6.50 ಅಥವಾ ಶೇಕಡಾ 0.04ರಷ್ಟು ಪಾಯಿಂಟ್‌ಗಳ ಕುಸಿತ ಕಂಡಿದ್ದು, 15109.30 ರ ಮಟ್ಟದಲ್ಲಿ ಮುಚ್ಚಿದೆ.

ಕಳೆದ ಮಾರ್ಚ್‌ನಿಂದ ಹೂಡಿಕೆದಾರರ ಸಂಪತ್ತು 96.57 ಲಕ್ಷ ಕೋಟಿ ರೂ. ಹೆಚ್ಚಾಗಿದೆ!ಕಳೆದ ಮಾರ್ಚ್‌ನಿಂದ ಹೂಡಿಕೆದಾರರ ಸಂಪತ್ತು 96.57 ಲಕ್ಷ ಕೋಟಿ ರೂ. ಹೆಚ್ಚಾಗಿದೆ!

ಇದಲ್ಲದೆ, ಇಂದು ಒಟ್ಟು 3,158 ಕಂಪನಿಗಳು ಬಿಎಸ್‌ಇಯಲ್ಲಿ ವಹಿವಾಟು ನಡೆಸಿದ್ದು, ಈ ಪೈಕಿ ಸುಮಾರು 1,313 ಷೇರುಗಳು ಕೊನೆಗೊಂಡಿವೆ ಮತ್ತು 1,656 ಷೇರುಗಳು ಕುಸಿದಿವು. 189 ಕಂಪನಿಗಳ ಷೇರು ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ.

Indias Market Ends 6 Day Winning Streak

ಐಒಸಿ, ಎಂ & ಎಂ, ಟಾಟಾ ಮೋಟಾರ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಬಜಾಜ್ ಆಟೋ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿವೆ. ಎಸ್‌ಬಿಐ ಲೈಫ್ ಇನ್ಶುರೆನ್ಸ್, ಏಷ್ಯನ್ ಪೇಂಟ್ಸ್, ಎಚ್‌ಡಿಎಫ್‌ಸಿ ಲೈಫ್, ಒಎನ್‌ಜಿಸಿ ಮತ್ತು ಟೈಟಾನ್ ಕಂಪನಿ ಲಾಭಗಳಿಸಿವೆ.

ಅದೇ ಸಮಯದಲ್ಲಿ, 7 ಪೈಸೆ ಸಹಾಯದಿಂದ ಡಾಲರ್ ಎದುರು ರೂಪಾಯಿ 92.89 ರೂಪಾಯಿಗೆ ಕೊನೆಗೊಂಡಿದೆ.

English summary
The benchmark indices erased all the intraday gains and ended with marginal losses, breaking the six day winning momentum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X