ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಚಿನ್ನದ ಆಮದು ಜುಲೈನಲ್ಲಿ ಶೇಕಡಾ 24ರಷ್ಟು ಇಳಿಕೆ: ಬೆಲೆ ದಾಖಲೆಯ ಏರಿಕೆ

|
Google Oneindia Kannada News

ನವದೆಹಲಿ, ಆಗಸ್ಟ್‌ 04: ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ತಡೆಗೆ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅನೇಕ ನಗರಗಳು ಇನ್ನೂ ಲಾಕ್‌ಡೌನ್‌ ಸ್ಥಿತಿಯಲ್ಲಿವೆ. ಹೀಗಾಗಿ ಜುಲೈನಲ್ಲಿ ಭಾರತದ ಚಿನ್ನದ ಆಮದು ಶೇಕಡಾ 24ರಷ್ಟು ಕುಸಿದಿದ್ದು, ಚಿಲ್ಲರೆ ಖರೀದಿಯಲ್ಲಿ ದಾಖಲೆಯ ಕಡಿತವಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಚಿನ್ನವನ್ನು ಆಮದು ಮಾಡಿಕೊಳ್ಳುವ ವಿಶ್ವದ ಎರಡನೇ ಅತಿದೊಡ್ಡ ಗ್ರಾಹಕ ಭಾರತವು ಜುಲೈನಲ್ಲಿ ಸುಮಾರು 30 ಟನ್‌ನಷ್ಟು ಚಿನ್ನವನ್ನು ಆಮದು ಮಾಡಿಕೊಂಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 39.66 ಟನ್‌ಗಳಿಂದ 30ಟನ್‌ಗೆ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಚಿನ್ನದ ಬೆಲೆಯ ದಾಖಲೆಯ ಓಟ: ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹಚಿನ್ನದ ಬೆಲೆಯ ದಾಖಲೆಯ ಓಟ: ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹ

ಮೌಲ್ಯದ ಪ್ರಕಾರ, ಜುಲೈ ಆಮದು ಒಂದು ವರ್ಷದ ಹಿಂದೆ 1.71 ಬಿಲಿಯನ್‌ ಡಾಲರ್‌ನಿಂದ 1.78 ಶತಕೋಟಿಗ ಡಾಲರ್‌ಗೆ ಏರಿದೆ ಎಂದು ಅವರು ಹೇಳಿದರು.

Indias July Gold Import Drop 24 Percent

ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನವು ತನ್ನ ದಾಖಲೆಯ ಓಟವನ್ನು ಮುಂದುವರೆಸಿದ್ದು, ಇಂದು ಬೆಲೆಗಳು ಮತ್ತೊಂದು ಗರಿಷ್ಠ ಮಟ್ಟವನ್ನು ಮುಟ್ಟಿದೆ. ಎಂಸಿಎಕ್ಸ್‌ನಲ್ಲಿ ಅಕ್ಟೋಬರ್ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇ. 0.2ರಷ್ಟು ಏರಿಕೆಯಾಗಿ, 53,865 ರೂಪಾಯಿಗೆ ತಲುಪಿದೆ.

ಎಂಸಿಎಕ್ಸ್‌ನಲ್ಲಿನ ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇ. 0.18ರಷ್ಟು ಹೆಚ್ಚಾಗಿ 65,865 ರೂಪಾಯಿಗೆ ತಲುಪಿದೆ.

English summary
India’s gold imports in July fell 24% from a year earlier as a rally in local prices to a record high curtailed retail purchases amid lockdown in many towns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X