ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆಯಿಂದ ಕುಸಿದ ಜಿಡಿಪಿ

|
Google Oneindia Kannada News

ನವದೆಹಲಿ, ಜುಲೈ 27: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ನಂತರ ಭಾರತದಲ್ಲಿ 2021-22ನೇ ಸಾಲಿನಲ್ಲಿ ಭಾರತದ ಅಭಿವೃದ್ಧಿ ಶ್ರೇಯಾಂಕದಲ್ಲಿ ಶೇಕಡಾ ಮೂರರಷ್ಟು ಇಳಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ವರದಿ ತಿಳಿಸಿದೆ.

ಭಾರತದಲ್ಲಿ ಶೇಕಡಾ 12.5 ರಿಂದ ಶೇಕಡಾ 9.5ಕ್ಕೆ ಇಳಿಕೆಯಾಗಿದೆ ಶ್ರಯಾಂಕ ಇಳಿಮುಖವಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಇತ್ತೀಚಿಗೆ ನಡೆಸಿದ ಜಾಗತಿಕ ಆರ್ಥಿಕ ಹೊರನೋಟದ ಪ್ರಕರಾ, ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಭಾರತದ ಅಭಿವೃದ್ಧಿ ಶ್ರೇಯಾಂಕದಲ್ಲಿ ಭಾರಿ ಕುಸಿತ ಕಂಡು ಬಂದಿದೆ.

ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ನೋಟು ಮುದ್ರಣದ ಆಲೋಚನೆ ಇಲ್ಲ: ನಿರ್ಮಲಾ ಸೀತಾರಾಮನ್ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ನೋಟು ಮುದ್ರಣದ ಆಲೋಚನೆ ಇಲ್ಲ: ನಿರ್ಮಲಾ ಸೀತಾರಾಮನ್

ಕೊರೊನಾವೈರಸ್ ಕಾಲದ ಎರಡು ವರ್ಷದಲ್ಲಿ ಭಾರತದ ಜಿಡಿಪಿಯಲ್ಲಿ ಶೇಕಡಾ 10ರಷ್ಟು ಇಳಿಮುಖವಾಗಿದೆ. ಯಾವುದೇ ಸಾಂಕ್ರಾಮಿಕ ಪಿಡುಗು ಇಲ್ಲದಿದ್ದರೆ ವರ್ಷದಲ್ಲಿ ದೇಶದ ಜಿಡಿಪಿ ಸಾಮಾನ್ಯವಾಗಿ ಶೇ.6ರಷ್ಟು ಏರಿಕೆಯಾಗುತ್ತಿತ್ತು. ಐಎಂಎಫ್ ಯೋಜನೆಗಳು ಈ ರೀತಿಯಾದರೆ, ಸಾಂಕ್ರಾಮಿಕ ರೋಗದಿಂದ ಈ ಎರಡು ವರ್ಷಗಳ ಕಾಲ ಭಾರತದ ಜಿಡಿಪಿಯನ್ನು ಶೇಕಡಾ 10.9ರಷ್ಟು ಹಿಂದುಳಿಯುವಂತೆ ಮಾಡುತ್ತದೆ.

 Indias Growth Projection Downgrades 12.5 To 9.5 Percent: IMF Report Points

ಮುಂದಿನ 2022-23ರ ಹಣಕಾಸು ವರ್ಷದಲ್ಲಿ ಐಎಂಎಫ್ ಭಾರತದ ಆರ್ಥಿಕ ಬೆಳವಣಿಗೆಯನ್ನು ಏಪ್ರಿಲ್ 2021 ರಲ್ಲಿ ನಿರೀಕ್ಷಿಸಿದ್ದ ಶೇಕಡಾ 6.9 ರಿಂದ ಶೇ 8.5ಕ್ಕೆ ಹೆಚ್ಚಿಸಲಿದೆ. ಇದರಿಂದಾಗಿ ಶೇಕಡಾ 1.6 ಅಂಕಗಳಷ್ಟು ಹೆಚ್ಚಾಗಲಿದೆ. "ಸುಧಾರಿತ ಆರ್ಥಿಕತೆಗಳ ನವೀಕರಣಕ್ಕಾಗಿ ಉದಯೋನ್ಮುಖ ಮಾರುಕಟ್ಟೆಗಳನ್ನು ಹೊಂದಿದ್ದೇವೆ. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಇಳಿಕೆಯನ್ನು ಸರಿದೂಗಿಸುವ ಸಾಮರ್ಥ್ಯವನ್ನು ಹೊಂದಿವೆ," ಎಂದು ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಗೀತಾ ಗೋಪಿನಾಥ್ ಹೇಳಿದ್ದಾರೆ.

ಜೂನ್ 4 ರಂದು ನಡೆದ 2021-22ರ ಹಣಕಾಸು ವರ್ಷದ ಎರಡನೇ ದ್ವಿ-ಮಾಸಿಕ ವಿತ್ತೀಯ ನೀತಿ ಸಮಿತಿ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶ್ರೇಯಾಂಕವನ್ನು ಶೇಕಡಾ 10.5 ರಿಂದ ಶೇ 9.5 ಕ್ಕೆ ಇಳಿಸಿತು.

ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಕಳೆದ ಒಂದು ದಿನದಲ್ಲಿ 29,689 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಮಹಾಮಾರಿಗೆ 415 ಮಂದಿ ಬಲಿಯಾಗಿದ್ದಾರೆ. ಇದೇ ಅವಧಿಯಲ್ಲಿ 42,363 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಚೇತರಿಕೆ ಸಂಖ್ಯೆ 3,06,21,469ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೂ ಕೊವಿಡ್-19 ಸೋಂಕಿನಿಂದ 4,21,382 ಜನರು ಪ್ರಾಣ ಬಿಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
India's Growth Projection Downgrades 12.5 To 9.5 Percent: IMF Report Points.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X