ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್‌ನಲ್ಲಿ ಚಿನ್ನದ ಆಮದು ಏರಿಕೆ: ಕಳೆದ 8 ತಿಂಗಳಿನಲ್ಲೇ ಅತಿ ಹೆಚ್ಚು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 2: ಕೊರೊನಾವೈರಸ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್ಲಾ ಚಿನ್ನದ ಮಳಿಗೆಗಳು ಬಂದ್‌ ಆಗಿದ್ದರ ಜೊತೆಗೆ ಬೇಡಿಕೆಯ ಕುಸಿತದಿಂದಾಗಿ ಚಿನ್ನದ ಆಮದಿನಲ್ಲಿ ಭಾರೀ ವ್ಯತ್ಯಾಸವನ್ನೇ ನಾವು ಈ ಹಿಂದೆ ನೋಡಿದ್ದೆವು. ಆದರೆ ಹೂಡಿಕೆಯ ಬೇಡಿಕೆಯ ಸುಧಾರಣೆಯ ಮೇಲೆ ಆಗಸ್ಟ್‌ನಲ್ಲಿ ಭಾರತದ ಚಿನ್ನದ ಆಮದು ಎಂಟು ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ

ಕೇಂದ್ರ ಸರ್ಕಾರವು ಲಾಕ್‌ಡೌನ್‌ಗಳನ್ನು ಸಡಿಲಿಸಿದ ನಂತರ ಹಲವು ಆಭರಣಕಾರರು ಕೆಲಸ ಪುನಾರಂಭಿಸಿದ್ದಾರೆ. ಅನೇಕ ಜ್ಯುವೆಲ್ಲರಿ ಮಳಿಗೆಗಳು ಪುನರಾರಂಭಗೊಂಡಿದೆ ಎಂದು ಸರ್ಕಾರದ ಮೂಲಗಳು ಬುಧವಾರ ತಿಳಿಸಿವೆ.

ಚಿನ್ನದ ಬೆಲೆ ಮತ್ತೆ ಜಿಗಿತ: 10 ಗ್ರಾಂಗೆ ಎಷ್ಟು ಬೆಲೆ ಏರಿಕೆ?ಚಿನ್ನದ ಬೆಲೆ ಮತ್ತೆ ಜಿಗಿತ: 10 ಗ್ರಾಂಗೆ ಎಷ್ಟು ಬೆಲೆ ಏರಿಕೆ?

ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ ಭಾರತ ಆಗಸ್ಟ್‌ ತಿಂಗಳಿನಲ್ಲಿ ಸುಮಾರು 60 ಟನ್ ಚಿನ್ನವನ್ನು ಆಮದು ಮಾಡಿಕೊಂಡಿದೆ. ಇದು ವರ್ಷದ ಹಿಂದೆ 32.1 ಟನ್‌ಗಳಷ್ಟು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

Indias Gold Import In August Hit 8 Month Peak

ಮೌಲ್ಯದ ಪ್ರಕಾರ, ಆಗಸ್ಟ್ ಆಮದು ಒಂದು ವರ್ಷದ ಹಿಂದೆ 1.37 ಬಿಲಿಯನ್ ಡಾಲರ್‌ನಷ್ಟಿದ್ದು, ಇದೀಗ 3.7 ಬಿಲಿಯನ್ ಡಾಲರ್‌ಗೆ ತಲುಪಿದೆ.

English summary
India's gold imports in August nearly doubled from a year ago to the highest level in eight months on an improvement in investment demand
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X