• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.16.5 ರಷ್ಟು ಕುಸಿತ ಕಾಣಲಿದೆ: ಎಸ್‌ಬಿಐ ವರದಿ

|

ನವದೆಹಲಿ, ಆಗಸ್ಟ್‌ 17: 2020-21ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.16.5 ರಷ್ಟು ಕುಸಿತ ಕಾಣಲಿದೆ ಎಂದು ಸ್ಟೇಟ್ ಬ್ಯಾಂಕ್ ನ ಸಂಶೋಧನಾ ವರದಿ ಇಕೋವ್ರಾಪ್ ಅಂದಾಜಿಸಿದೆ.

ಇಕೋವ್ರಾಪ್, 2020-21 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯನ್ನು ಶೇ.20 ರಷ್ಟು ಕುಸಿಯಲಿದೆ ಎಂದು ಮೇ ತಿಂಗಳಿನಲ್ಲಿ ಅಂದಾಜಿಸಿತ್ತು. ಆದರೆ ಇದೀಗ ಆರ್ಥಿಕ ಚೇತರಿಕೆಯ ಪರಿಷ್ಕೃತ ಅಂದಾಜಿನಲ್ಲಿ ಶೇ.16.5 ರಷ್ಟು ಕುಸಿತ ಕಾಣಲಿದೆ ಎಂದು ವಿಶ್ಲೇಷಿಸಿದೆ.

ಭಾರತದ ಜಿಡಿಪಿ ಇತಿಹಾಸದಲ್ಲೇ ಅತ್ಯಂತ ಕಡಿಮೆ ದಾಖಲಾಗಲಿದೆ: ನಾರಾಯಣ ಮೂರ್ತಿ

ಕಾರ್ಪೊರೇಟ್ ಜಿವಿಎದಲ್ಲಿನ ಕುಸಿತ (ಕೆಲವು ಹಣಕಾಸು ಮತ್ತು ಹಣಕಾಸೇತರ ಕಂಪನಿಗಳ ನಿರೀಕ್ಷಿತ ಫಲಿತಾಂಶಗಳಿಗಿಂತ ಉತ್ತಮವಾಗಿದೆ) ಮೊದಲ ತ್ರೈಮಾಸಿಕದಲ್ಲಿನ ಆದಾಯ ಕುಸಿತಕ್ಕಿಂತ ಗಮನಾರ್ಹವಾಗಿ ಉತ್ತಮವಾಗಿದೆ ಎಂದು ಪಟ್ಟಿಮಾಡಿದ ಕಂಪನಿಗಳ ಫಲಿತಾಂಶಗಳಿಗೆ ಸಂಬಂಧಿಸಿದೆ.

ಹಣಕಾಸು- ಹಣಕಾಸೇತರ ಕಂಪನಿಗಳ ಫಲಿತಾಂಶಗಳು ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಾಗಿದ್ದು, 2021 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಾರ್ಪೊರೇಟ್ ಜಿವಿಎ ನಲ್ಲಿನ ಡಿಗ್ರೋಥ್ ರೆವಿನ್ಯೂ ಡಿಗ್ರೋತ್ ಗಿಂತ ಉತ್ತಮವಾಗಿದೆ.

ಇಲ್ಲಿಯವರೆಗೆ, ಸುಮಾರು 1,000 ಪಟ್ಟಿಮಾಡಿದ ಸಂಸ್ಥೆಗಳು ಮೊದಲ ತ್ರೈಮಾಸಿಕದಲ್ಲಿ ತಮ್ಮ ಫಲಿತಾಂಶಗಳನ್ನು ಪ್ರಕಟಿಸಿವೆ. ಫಲಿತಾಂಶಗಳು ಟಾಪ್‌ಲೈನ್‌ನಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ಕುಸಿತ ಮತ್ತು ಬಾಟಮ್‌ಲೈನ್‌ನಲ್ಲಿ ಶೇಕಡಾ 55 ಕ್ಕಿಂತ ಹೆಚ್ಚು ಕುಸಿತವನ್ನು ದಾಖಲಿಸಿವೆ. ಒಟ್ಟಾರೆ ಕಾರ್ಪೊರೇಟ್ ಜಿವಿಎ ಯಲ್ಲಿ ಎದುರಾಗಿರುವ ಕುಸಿತ ಶೇ.14.1 ರಷ್ಟಾಗಿದೆ ಎಂದು ವರದಿ ತಿಳಿಸಿದೆ.

English summary
State Bank of India's research report Ecowrap expects the country's GDP to contract by 16.5 per cent during the first quarter of the current fiscal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X