ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಪ್ರಗತಿ ದರ ಶೇ4.5ಕ್ಕೆ ಕುಸಿತ

|
Google Oneindia Kannada News

ನವದೆಹಲಿ, ನವೆಂಬರ್ 29: ಭಾರತದ ಆರ್ಥಿಕ ಪ್ರಗತಿ ಮತ್ತೊಮ್ಮೆ ಕುಸಿತ ಕಂಡಿದೆ. 2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಪ್ರಗತಿ ದರ ಶೇ4.5ಕ್ಕೆ ಕುಸಿತವಾಗಿದೆ. 2013ರಿಂದ ಇಲ್ಲಿ ತನಕ ಈ ಪ್ರಮಾಣದಲ್ಲಿ ಜಿಡಿಪಿ ಕುಸಿತ ಕಂಡಿರಲಿಲ್ಲ . ಜುಲೈ -ಸೆಪ್ಟೆಂಬರ್ ತ್ರೈಮಾಸಿಕ ವರದಿಯನ್ನು ಶುಕ್ರವಾರದಂದು ಪ್ರಕಟಿಸಲಾಗಿದೆ.

ಜನವರಿ-ಮಾರ್ಚ್ ಅವಧಿ 2012-13 ರಲ್ಲಿ 4.3%ಕ್ಕೆ ಕುಸಿದಿದ್ದ ಜಿಡಿಪಿ ನಂತರ 2019ರ ಪ್ರಸಕ್ತ ತ್ರೈಮಾಸಿಕದಲ್ಲೇ ಕನಿಷ್ಠ ಮಟ್ಟ ಮುಟ್ಟಿದೆ. 2018-19ರ ವರ್ಷದಿಂದ ವರ್ಷದ ಅವಧಿಗೆ ಶೇ7ರಷ್ಟು ದಾಖಲಾಗಿದೆ.

ಸುಳ್ಳಾದ ನಿರೀಕ್ಷೆ! ಭಾರತದ ಜಿಡಿಪಿ ದರ ವರ್ಷದಿಂದ ವರ್ಷಕ್ಕೆ ಕುಸಿತಸುಳ್ಳಾದ ನಿರೀಕ್ಷೆ! ಭಾರತದ ಜಿಡಿಪಿ ದರ ವರ್ಷದಿಂದ ವರ್ಷಕ್ಕೆ ಕುಸಿತ

ಕಳೆದ ಆರು ತಿಂಗಳ ಅವಧಿಯಲ್ಲಿ ಏಪ್ರಿಲ್ -ಸೆಪ್ಟೆಂಬರ್ 2019ರಲ್ಲಿ ಭಾರತದ ಆರ್ಥಿಕ ಪ್ರಗರ್ತಿ 4.8%ರಷ್ಟು ಪ್ರಗತಿ ಕಂಡಿದೆ. ಕಳೆದ ವರ್ಷ ಇದೇ ಅವಧಿಗೆ 7.5% ನಷ್ಟಿತ್ತು.

India’s GDP growth slumps to 4.5% in July-September quarter

ರಾಯಿಟರ್ಸ್ ಸುದ್ದಿ ಸಂಸ್ಥೆಯು ನಡೆಸಿದ ಆರ್ಥಿಕ ತಜ್ಞರ ಅಭಿಪ್ರಾಯ ಸಂಗ್ರಹದಲ್ಲಿ, ವರ್ಷದ ಮೊದಲ ತ್ರೈ ಮಾಸಿಕದಲ್ಲಿ ದೇಶದ GDP 5.7% ಆಗಬಹುದು ಎಂದು ಅಂದಾಜಿಸಿತ್ತು. ಆದರೆ ಮೊದಲ ತ್ರೈಮಾಸಿಕದಲ್ಲೂ ಜಿಡಿಪಿ ನಿರೀಕ್ಷಿತ ಮಟ್ಟ ಮುಟ್ಟಿರಲಿಲ್ಲ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಸರಕು ಮತ್ತು ಸೇವೆಗಳ ಒಟ್ಟಾರೆ ಉತ್ಪಾದನೆಯ ಹೆಚ್ಚಳ ಶೇ 6ಕ್ಕಿಂತ ಅಧಿಕವಾಗಲಾರದು ಎಂದು ವರದಿಯಲ್ಲಿ ಹೇಳಲಾಗಿದೆ. 2017-18ನೇ ಸಾಲಿನಲ್ಲಿ ಶೇ 7.2ರಷ್ಟಿದ್ದ ಜಿಡಿಪಿ 2018-19ರಲ್ಲಿ ಶೇ 6.8ಕ್ಕೆ ಕುಸಿದಿತ್ತು. ಈಗ ಮತ್ತಷ್ಟು ಕುಸಿತ ಕಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಶೇ 6.1ರಷ್ಟು ದರವನ್ನು ಅಂದಾಜಿಸಿತ್ತು. ವಿಶ್ವಬ್ಯಾಂಕ್ ವರದಿ ಅದಕ್ಕೂ ಕಡಿಮೆ ಜಿಡಿಪಿ ಇರಲಿದೆ ಎಂದು ಹೇಳಿತ್ತು.

ಭಾರತಕ್ಕೆ ಆಘಾತ! ಜಿಡಿಪಿ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಕುಸಿತಭಾರತಕ್ಕೆ ಆಘಾತ! ಜಿಡಿಪಿ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಕುಸಿತ

ಕೃಷಿ, ನಿರ್ಮಾಣ ಹಾಗೂ ಉತ್ಪಾದನಾ ವಲಯದಲ್ಲಿ ನಿಧಾನ ಗತಿಯ ಪ್ರಗತಿಯ ಕಾರಣಕ್ಕೆ ಜಿಡಿಪಿ ಮೇಲೆ ದೊಡ್ಡ ಮಟ್ಟದಲ್ಲಿ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ಪಡಲಾಗಿದೆ. ಈ ಬಾರಿ ಐದು ಪರ್ಸೆಂಟ್ ಗೆ ಜಿಡಿಪಿ ಕುಸಿಯುವ ಮೂಲಕ ಐದು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ.

English summary
India's economic growth slipped further to hit an over six-year low of 4.5 per cent in July-September, according to official data released on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X