ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವಿದೇಶಿ ವಿನಿಮಯ ಮೀಸಲು ದಾಖಲೆಯ ಏರಿಕೆ: 493.48 ಬಿಲಿಯನ್ ಡಾಲರ್

|
Google Oneindia Kannada News

ನವದೆಹಲಿ, ಜೂನ್ 6: ಭಾರತದ ವಿದೇಶಿ ವಿನಿಮಯ ಮೀಸಲು ಮೇ.29 ರಂದು ಮುಕ್ತಾಯಗೊಂಡ ವಾರದವರೆಗೆ ದಾಖಲೆಯ ಏರಿಕೆ ಕಂಡಿದೆ. ಆರ್ಬಿಐ ನೀಡಿರುವ ಮಾಹಿತಿಯ ಪ್ರಕಾರ ವಿದೇಶಿ ವಿನಿಮಯ ಮೀಸಲು 3.43 ಬಿಲಿಯನ್ ಡಾಲರ್ ನಷ್ಟು ಏರಿಕೆಯಾಗಿದ್ದು 493.48 ಬಿಲಿಯನ್ ಡಾಲರ್ ಆಗಿದೆ.

ಕೋವಿಡ್-19 ಸಮಯದಲ್ಲಿ ದೇಶ ಆರ್ಥಿಕ ಸಮಸ್ಯೆ ಎದುರಿಸುತ್ತಿರುವಾಗ ವಿದೇಶಿ ವಿನಿಮಯ ಮೀಸಲು ಏರಿಕೆಯಾಗಿರುವುದು ದೇಶಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

ಲಾಕ್‌ಡೌನ್ ದೇಶದಲ್ಲಿ ವೈರಸ್ ನಿಯಂತ್ರಿಸಿಲ್ಲ, ಜಿಡಿಪಿಯನ್ನು ತಗ್ಗಿಸಿದೆ: ರಾಜೀವ್ ಬಜಾಜ್ಲಾಕ್‌ಡೌನ್ ದೇಶದಲ್ಲಿ ವೈರಸ್ ನಿಯಂತ್ರಿಸಿಲ್ಲ, ಜಿಡಿಪಿಯನ್ನು ತಗ್ಗಿಸಿದೆ: ರಾಜೀವ್ ಬಜಾಜ್

ಮೇ 29 ಕ್ಕೆ ಕೊನೆಗೊಂಡ ವಾರದಲ್ಲಿ, ಒಟ್ಟಾರೆ ನಿಕ್ಷೇಪಗಳ ಪ್ರಮುಖ ಅಂಶವಾದ ವಿದೇಶಿ ಕರೆನ್ಸಿ ಆಸ್ತಿಗಳು 3.50 ಬಿಲಿಯನ್‌ ಡಾಲರ್‌ನಿಂದ 455.21 ಬಿಲಿಯನ್ ಡಾಲರ್‌ಗೆ ಏರಿದೆ ಎಂದು ಆರ್‌ಬಿಐನ ಅಂಕಿ ಅಂಶಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

Indias Forex Reserves All Time High Of 493.48 Billion Dollar

ಉನ್ನತ ಕೈಗಾರಿಕಾ ಸಂಸ್ಥೆಗಳ ಜೊತೆ ಮೋದಿ ಚರ್ಚೆ: ಪ್ರಮುಖ ಅಂಶಗಳು ಉನ್ನತ ಕೈಗಾರಿಕಾ ಸಂಸ್ಥೆಗಳ ಜೊತೆ ಮೋದಿ ಚರ್ಚೆ: ಪ್ರಮುಖ ಅಂಶಗಳು

ಮೇ 22 ರಂದು ಕೊನೆಗೊಂಡ ಹಿಂದಿನ ವಾರದಲ್ಲಿ, ವಿದೇಶಿ ನೇರ ಹೂಡಿಕೆಗಳು (ಎಫ್‌ಡಿಐ), ದೇಶೀಯ ಷೇರುಗಳಲ್ಲಿ ಎಫ್‌ಪಿಐಗಳಿಂದ ಹಣದ ನಿವ್ವಳ ಒಳಹರಿವು ಮತ್ತು ಆಮದು ವೆಚ್ಚದಲ್ಲಿ ತೀವ್ರ ಕುಸಿತದಿಂದಾಗಿ ಮೀಸಲು ಸಾರ್ವಕಾಲಿಕ ಗರಿಷ್ಠ 490 ಶತಕೋಟಿಗೆ ಏರಿದೆ. ಜಾಗತಿಕ ವ್ಯಾಪಾರದ ಮೇಲೆ ಸಾಂಕ್ರಾಮಿಕ ರೋಗ ಕೋವಿಡ್-19 ಪರಿಣಾಮ ಬೀರಿದೆ.

English summary
India’s foreign exchange reserves surged $3.43 billion to a fresh all-time high of $493.48 billion in the week-ended May 29
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X