ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿತ್ತೀಯ ಕೊರತೆ ವಾರ್ಷಿಕ ಗುರಿ 7 ತಿಂಗಳಲ್ಲೇ ಮುಟ್ಟಿದ ಭಾರತ

|
Google Oneindia Kannada News

ನವದೆಹಲಿ, ನವೆಂಬರ್ 29: ಭಾರತದ ವಿತ್ತೀಯ ಕೊರತೆಯ ವಾರ್ಷಿಕ ಗುರಿಯನ್ನು ಪ್ರಸಕ್ತ ಆರ್ಥಿಕ ವರ್ಷದ 7 ತಿಂಗಳಲ್ಲೇ ಮುಟ್ಟಲಾಗಿದೆ. ವಿತ್ತೀಯ ಕೊರತೆ 7 ಟ್ರಿಲಿಯನ್ ರುಪಾಯಿ ದಾಟಿದೆ. ವಿತ್ತೀಯ ಕೊರತೆಯೆಂದರೆ, ಸರಕಾರದ ಆದಾಯ ಹಾಗೂ ಖರ್ಚಿನ ಮಧ್ಯದ ವ್ಯತ್ಯಾಸ.

ಜುಲೈ -ಸೆಪ್ಟೆಂಬರ್ ತ್ರೈಮಾಸಿಕ ಆರ್ಥಿಕ ಪ್ರಗತಿ ವರದಿಯನ್ನು ಶುಕ್ರವಾರದಂದು ಪ್ರಕಟಿಸಲಾಗಿದೆ. ಭಾರತದ ಆರ್ಥಿಕ ಪ್ರಗತಿ ಮತ್ತೊಮ್ಮೆ ಕುಸಿತ ಕಂಡಿದೆ. 2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಪ್ರಗತಿ ದರ ಶೇ4.5ಕ್ಕೆ ಕುಸಿತವಾಗಿದೆ. 2013ರಿಂದ ಇಲ್ಲಿ ತನಕ ಈ ಪ್ರಮಾಣದಲ್ಲಿ ಜಿಡಿಪಿ ಕುಸಿತ ಕಂಡಿರಲಿಲ್ಲ.

2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಪ್ರಗತಿ ದರ ಶೇ4.5ಕ್ಕೆ ಕುಸಿತ2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಪ್ರಗತಿ ದರ ಶೇ4.5ಕ್ಕೆ ಕುಸಿತ

ಇದರ ಜೊತೆಗೆ ವಿತ್ತೀಯ ಕೊರತೆ ಪ್ರಮಾಣವನ್ನು ಶುಕ್ರವಾರದಂದು ಪ್ರಕಟಿಸಲಾಗಿದೆ. 7.2 ಟ್ರಿಲಿಯನ್ ರು(100.32 ಬಿಲಿಯನ್ ಡಾಲರ್) ಅಥವಾ ಪ್ರಸಕ್ತ ಆರ್ಥಿಕ ವರ್ಷದ ಬಜೆಟ್ಟಿನ ಗುರಿಯ 102.4% ರಷ್ಟಾಗಿದೆ.

Indias fiscal deficit touches Rs 7 trillion

ಸರ್ಕಾರ ಪ್ರಕಟಿಸಿರುವ ಅಂಕಿ ಅಂಶದ ಪ್ರಕಾರ, ಏಪ್ರಿಲ್-ಅಕ್ಟೋಬರ್ ಅವಧಿಗೆ ನಿವ್ವಳ ತೆರಿಗೆ ಮೊತ್ತ 6.83 ಟ್ರಿಲಿಯನ್ ಆಗಿದ್ದಾರೆ, ಒಟ್ಟಾರೆ ಖರ್ಚು ವೆಚ್ಚ 16. 55 ಟ್ರಿಲಿಯನ್ ಆಗಿದೆ.

ಕೃಷಿ, ನಿರ್ಮಾಣ ಹಾಗೂ ಉತ್ಪಾದನಾ ವಲಯದಲ್ಲಿ ನಿಧಾನ ಗತಿಯ ಪ್ರಗತಿಯ ಕಾರಣಕ್ಕೆ ಜಿಡಿಪಿ ಮೇಲೆ ದೊಡ್ಡ ಮಟ್ಟದಲ್ಲಿ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ಪಡಲಾಗಿದೆ. ಈ ಬಾರಿ ಐದು ಪರ್ಸೆಂಟ್ ಗೆ ಜಿಡಿಪಿ ಕುಸಿಯುವ ಮೂಲಕ ಐದು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ. ಸತತ ಏಳು ತ್ರೈಮಾಸಿಕದಿಂದ ಜಿಡಿಪಿ ಪ್ರಗತಿ ದರ ಕುಸಿತ ಕಂಡಿದೆ.

English summary
The government of India's fiscal deficit has surpassed the annual target within the first seven months of the current financial year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X