• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಮೊಟ್ಟ ಮೊದಲ ಪೇಮೆಂಟ್ ವಾಚ್: ವೇಗವಾಗಿ, ಸುರಕ್ಷಿತವಾಗಿ ವಾಚ್‌ನಲ್ಲೇ ಬಿಲ್ ಪಾವತಿಸಿ

|

ನವದೆಹಲಿ, ಸೆಪ್ಟೆಂಬರ್ 17: ನಿಮಗೆ ಇನ್ಮುಂದೆ ಯಾವುದಾದರು ಬಿಲ್ ಪಾವತಿಸಲು, ಶಾಪಿಂಗ್ ತೆರಳಿದ್ದಾಗ ಹಣ ಪಾವತಿಸಲು ಡೆಬಿಟ್ ಕಾರ್ಡ್ ಇಲ್ಲವೇ ಯುಪಿಐ ಆಧಾರಿತ ಆ್ಯಪ್‌ಗಳ ಅವಶ್ಯಕತೆ ಬರದು. ಏಕೆಂದರೆ ನಿಮ್ಮ ಒಂದು ಕೈಗಡಿಯಾರ ಈ ಎಲ್ಲಾ ಕೆಲಸವನ್ನು ಮಾಡಲಿದೆ.

ಆಶ್ಚರ್ಯವಾಗ್ತಿದ್ಯಾ.. ಹೌದು ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ ಹಾಗೂ ಗಡಿಯಾರ ನಿರ್ಮಾಣದ ದೈತ್ಯ ಕಂಪನಿ ಟೈಟಾನ್ ಸೇರಿಕೊಂಡು ಹೀಗೊಂದು ಸ್ಮಾರ್ಟ್‌ ಕೈಗಡಿಯಾರವನ್ನು ಪರಿಚಯಿಸಿದ್ದು, 'ಟೈಟಾನ್ ಪೇ' ಎಂದು ಹೆಸರಿಡಲಾಗಿದೆ.

SBI Yono ಮೂಲಕ ಕಾರು ಬುಕ್ ಮಾಡಿ: 22,000 ರೂಪಾಯಿವರೆಗೆ ಬಿಡಿಭಾಗ ಪಡೆಯಿರಿ

ಟೈಟಾನ್ ಪೇ ಮೂಲಕ ನೀವು ಯಾವುದೇ ಸಂಪರ್ಕವಿಲ್ಲದೆ ಸುರಕ್ಷಿತವಾಗಿ ಹಣ ಪಾವತಿಸಬಹುದಾಗಿದೆ. ಇದಕ್ಕಾಗಿಯೇ ಟೈಟಾನ್ ಹಣ ಪಾವತಿಯನ್ನು ಬೆಂಬಲಿಸುವ 5 ಕೈಗಡಿಯಾರಗಳನ್ನು ಬಿಡುಗಡೆ ಮಾಡಿದೆ. ಇದಕ್ಕೆ ಎಸ್‌ಬಿಐ ಬ್ಯಾಂಕ್ ಕೈ ಜೋಡಿಸಿದೆ.

ನೀವು ಯಾವುದೇ ವಸ್ತು ಅಥವಾ ಸೇವೆಗೆ ಹಣ ಪಾವತಿಗಾಗಿ ನೀವು ಕೌಂಟರ್ ಬಳಿಗೆ ಹೋದಾಗ, ನೀವು ಕೇವಲ PoS ಯಂತ್ರದ ಬಳಿ ಹೋಗಿ Titan Pay Powered Watch ಮೇಲೆ ಟ್ಯಾಪ್ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಕಾಂಟಾಕ್ಟ್ ಲೆಸ್ ಹಣ ಪಾವತಿಯಾಗಲಿದೆ. ಸಾಮಾನ್ಯವಾಗಿ WiFi ಸೌಲಭ್ಯವಿರುವ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಯಾಗುವ ರೀತಿ ಇದರಲ್ಲಿಯೂ ಕೂಡ ಹಣ ಪಾವತಿಯಾಗಲಿದೆ. ಆದರೆ, ಕೇವಲ ಎಸ್‌ಬಿಐ ಡೆಬಿಟ್ ಕಾರ್ಡ್ ಹೊಂದಿದವರಿಗಾಗಿ ಮಾತ್ರ ಈ ಸೌಲಭ್ಯ ನೀಡಲಾಗಿದೆ.

ಎಸ್‌ಬಿಐ ಡೆಬಿಟ್ ಕಾರ್ಡ್ ಹೊಂದಿರುವವರು ಮಾತ್ರ ಟೈಟಾನ್ ಪೇ ಕೈಗಡಿಯಾರದ ಸೌಲಭ್ಯವನ್ನು ಪಡೆಯಬಹುದು. ನೀವು 2,000 ರೂಪಾಯಿಗಳವರೆಗಿನ ಹಣ ಪಾವತಿಯನ್ನು ಇದರಲ್ಲಿ ಟ್ಯಾಪ್ ಮಾಡುವ ಮೂಲಕ ನಿರ್ವಹಿಸಬಹುದು.

ಟೈಟಾನ್‌ ಈ ಹೊಸ ಕೈಗಡಿಯಾರದ ಸರಣಿ ಪುರುಷರಿಗಾಗಿ ಮೂರು ರೂಪಾಂತರಗಳನ್ನು ಮತ್ತು ಮಹಿಳೆಯರಿಗಾಗಿ ಎರಡು ರೂಪಾಂತರಗಳನ್ನು ಬಿಡುಗಡೆ ಮಾಡಲಾಗಿದೆ. ಟೈಟಾನ್ ಪೇ ಕೈಗಡಿಯಾರದ ಬೆಲೆ 2,995, ರಿಂದ 5,995 ರೂ. ನಿಗದಿಪಡಿಸಲಾಗಿದೆ.

English summary
SBI and Titan Company have launch India's first contactless payment watches called Titan Pay.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X