ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್‌ನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ ಶೇಕಡಾ 1ರಷ್ಟು ಬೆಳವಣಿಗೆ

|
Google Oneindia Kannada News

ನವದೆಹಲಿ, ಫೆಬ್ರವರಿ 12: ಕೋವಿಡ್-19 ಸಾಂಕ್ರಾಮಿಕದ ನಡುವೆ ವಿವಿಧ ವಲಯಗಳು ಚೇತರಿಸಿಕೊಳ್ಳುತ್ತಿದ್ದು, ಭಾರತದ ಕಾರ್ಖಾನೆ ಉತ್ಪಾದನೆಯು ಡಿಸೆಂಬರ್‌ನಲ್ಲಿ ಬೆಳೆದಿದೆ.

ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ಪ್ರಕಾರ ನವೆಂಬರ್‌ನಲ್ಲಿ ಶೇಕಡಾ 1.9ರಷ್ಟು ಸಂಕೋಚನದೊಂದಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಶೇಕಡಾ 1ರಷ್ಟು ಏರಿಕೆಯಾಗಿದೆ ಎಂದು ಅಂಕಿಅಂಶ ಕಚೇರಿ ಬಿಡುಗಡೆ ಮಾಡಿದೆ. ಉತ್ಪಾದನೆಯು ಶೇಕಡಾ 1.6ರಷ್ಟು ಏರಿಕೆಯಾದರೆ, ಗಣಿಗಾರಿಕೆ ಉತ್ಪಾದನೆಯು ಶೇಕಡಾ 4.8ರಷ್ಟು ಸಂಕುಚಿತಗೊಂಡಿದೆ.

ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ಮುಂದಾದ ಸಣ್ಣ ಕೈಗಾರಿಕಾ ಇಲಾಖೆ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ಮುಂದಾದ ಸಣ್ಣ ಕೈಗಾರಿಕಾ ಇಲಾಖೆ

ಬಂಡವಾಳ ಸರಕುಗಳು ಶೇಕಡಾ 0.6ರಷ್ಟು ಬೆಳೆದರೆ, ಗ್ರಾಹಕ ಬಾಳಿಕೆ ಬರುವ ಸರಕುಗಳ ಉತ್ಪಾದನೆ ಶೇಕಡಾ 4.6ರಷ್ಟು ಪ್ರಬಲವಾಗಿ ಬೆಳೆದಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7.5ರಷ್ಟು ಸಂಕುಚಿತಗೊಂಡರೆ, ಇದು ಏಪ್ರಿಲ್-ಜೂನ್ ಅವಧಿಯಲ್ಲಿ ದಾಖಲಾದ ಶೇಕಡಾ 23.9 ಕುಸಿತಕ್ಕಿಂತ ನಿಧಾನವಾಗಿದೆ.

Indias factory output grows 1 Percent in December

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಇತ್ತೀಚಿನ ಹಣಕಾಸು ನೀತಿಯಲ್ಲಿ, ಬೆಳವಣಿಗೆಯ ದೃಷ್ಟಿಕೋನವು ಗಮನಾರ್ಹವಾಗಿ ಸುಧಾರಿಸಿದೆ. ಸಕಾರಾತ್ಮಕ ಬೆಳವಣಿಗೆಯ ಪ್ರಚೋದನೆಗಳು ಹೆಚ್ಚು ವಿಶಾಲ ಆಧಾರಿತವಾಗಿವೆ ಎಂದು ಹೇಳಿದೆ.

English summary
India’s Factory output grew in December, having contracted in the previous month, indicating a gradual recovery in industrial activity from the pandemic-induced disruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X