ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್‌ನಲ್ಲಿ ಭಾರತದ ರಫ್ತು ಶೇಕಡಾ 12.6ರಷ್ಟು ಕುಸಿತ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ಆಗಸ್ಟ್‌ನಲ್ಲೂ ಕೊರೊನಾವೈರಸ್‌ ಪರಿಣಾಮದಿಂದಾಗಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದ್ದು ಭಾರತವು 6.77 ಶತಕೋಟಿ ಡಾಲರ್ ಸರಕುಗಳ ವ್ಯಾಪಾರದ ಕೊರತೆಯನ್ನು ದಾಖಲಿಸಿದೆ ಎಂದು ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.

ವ್ಯಾಪಾರ ಕೊರತೆ ಜುಲೈನಲ್ಲಿ 4.83 ಬಿಲಿಯನ್ ಡಾಲರ್ ಆಗಿತ್ತು. ಆದರೆ ಆಗಸ್ಟ್‌ನಲ್ಲಿ ಇದರ ಪ್ರಮಾಣವು 6.77 ಶತಕೋಟಿ ಡಾಲರ್‌ನಷ್ಟಾಗಿದೆ ಎಂದು ತಿಳಿದುಬಂದಿದೆ.

ಆಗಸ್ಟ್‌ನಲ್ಲಿ ಚಿನ್ನದ ಆಮದು ಏರಿಕೆ: ಕಳೆದ 8 ತಿಂಗಳಿನಲ್ಲೇ ಅತಿ ಹೆಚ್ಚುಆಗಸ್ಟ್‌ನಲ್ಲಿ ಚಿನ್ನದ ಆಮದು ಏರಿಕೆ: ಕಳೆದ 8 ತಿಂಗಳಿನಲ್ಲೇ ಅತಿ ಹೆಚ್ಚು

ಮರ್ಚಂಡೈಸ್ ಆಮದು ಆಗಸ್ಟ್‌ನಲ್ಲಿ ಶೇ. 26.04ರಷ್ಟು ಕುಸಿದಿದ್ದು, ಒಂದು ವರ್ಷದ ಹಿಂದೆ 29.47 ಶತಕೋಟಿ ಡಾಲರ್‌ಗೆ ತಲುಪಿದೆ. ರಫ್ತು ಶೇ. 12.66ರಷ್ಟು ಇಳಿದು 22.70 ಶತಕೋಟಿ ಡಾಲರ್‌ಗೆ ತಲುಪಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದೆ.

Indias Export Down 12.6 Percent In August

ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಒಟ್ಟು ಸರಕುಗಳ ಆಮದು ಶೇ. 43.73 ರಷ್ಟು ಇಳಿದು 118.38 ಶತಕೋಟಿ ಡಾಲರ್‌ಗೆ ತಲುಪಿದೆ. ಇದೇ ಅವಧಿಯಲ್ಲಿ ಒಟ್ಟು ಸರಕುಗಳ ರಫ್ತು ಶೇ. 26.65ರಷ್ಟು ಇಳಿದು 97.66 ಬಿಲಿಯನ್ ಡಾಲರ್‌ಗೆ ತಲುಪಿದೆ.

English summary
India posted a trade deficit of $6.77 billion in goods in August, data released by the government showed on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X