ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಆರ್ಥಿಕತೆ ನಿರೀಕ್ಷೆಗಿಂತ ವೇಗವಾಗಿ ಸಾಮಾನ್ಯ ಸ್ಥಿತಿಗೆ ಬರಲಿದೆ: ಬಾರ್ಕ್ಲೇಸ್

|
Google Oneindia Kannada News

ನವದೆಹಲಿ, ನವೆಂಬರ್ 19: ಕೋವಿಡ್-19 ಸಾಂಕ್ರಾಮಿಕದಿಂದಾಗಿ ಹದಗೆಟ್ಟಿರುವ ಭಾರತದ ಆರ್ಥಿಕತೆಯು ನಿರೀಕ್ಷೆಗಿಂತ ಅತಿ ವೇಗವಾಗಿ "ಸಾಮಾನ್ಯ ಸ್ಥಿತಿಗೆ ಬರುತ್ತದೆ" ಎಂದು ಬಾರ್ಕ್ಲೇಸ್ ಹೇಳಿದೆ.

ಬಾರ್ಕ್ಲೇಸ್ ತನ್ನ 2022ರ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಹಿಂದಿನ ಶೇ. 7ರಿಂದ, ಶೇ.8.5ಕ್ಕೆ ಏರಿಸಿತು. ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲಿ ಕೋವಿಡ್-19 ಪ್ರಭಾವವು ನಿರೀಕ್ಷೆಗಿಂತ ವೇಗವಾಗಿ ಸಾಮಾನ್ಯ ಸ್ಥಿತಿಗೆ ಬರುತ್ತದೆ ಎಂದು ಹೇಳಿದೆ.

ಲಾಕ್‌ಡೌನ್ ಬಳಿಕ ಆರ್ಥಿಕತೆ ಪ್ರಬಲ ಚೇತರಿಕೆ: ನಿರ್ಮಲಾ ಸೀತಾರಾಮನ್ಲಾಕ್‌ಡೌನ್ ಬಳಿಕ ಆರ್ಥಿಕತೆ ಪ್ರಬಲ ಚೇತರಿಕೆ: ನಿರ್ಮಲಾ ಸೀತಾರಾಮನ್

ಅಮೆರಿಕಾ ನಂತರದಲ್ಲಿ ಅತಿ ಹೆಚ್ಚು ಕೋವಿಡ್-19 ಪಾಸಿಟಿವ್ ಕೇಸ್‌ಗಳನ್ನು ಭಾರತವು ಹೊಂದಿದ್ದಲ್ಲದೆ, 9 ಮಿಲಿಯನ್ ದೃಢಪಡಿಸಿತ್ತು. ಆದರೆ ಸೆಪ್ಟೆಂಬರ್ ಮಧ್ಯದಲ್ಲಿ ಗರಿಷ್ಠವಾದ ನಂತರ ಹೊಸ ದೈನಂದಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ.

 Indias Economy To Return To Normal Faster Than Expected: Barclays

"ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಲಸಿಕೆಯ ನಿರೀಕ್ಷೆ ಮತ್ತು ಜನಸಂಖ್ಯೆಯಾದ್ಯಂತ ಹೆಚ್ಚಿನ ಆ್ಯಂಟಿಬಾಡಿ ಕಂಡುಬರುತ್ತಿರುವುದು ಆರ್ಥಿಕ ಚೇತರಿಕೆಯನ್ನು ಬೆಂಬಲಿಸುತ್ತಿದೆ" ಎಂದು ಬಾರ್ಕ್ಲೇಸ್ ಟಿಪ್ಪಣಿಯಲ್ಲಿ ತಿಳಿಸಿದೆ.

ಮೋಟಾರು ಸೈಕಲ್ ತಯಾರಕ ಹೀರೋ ಮೊಟೊಕಾರ್ಪ್ ಮತ್ತು ಆಭರಣ ತಯಾರಕ ಟೈಟಾನ್ ಕಂಪನಿಯಂತಹ ಕಂಪನಿಗಳು ಹಬ್ಬದ ಋತುವಿನಲ್ಲಿ ಬಲವಾದ ಮಾರಾಟವನ್ನು ವರದಿ ಮಾಡಿರುವುದರಿಂದ, ವಿಶ್ವದ ಕಟ್ಟುನಿಟ್ಟಾದ ಲಾಕ್‌ಡೌನ್‌ಗಳಲ್ಲಿ ಒಂದನ್ನು ಸರಾಗಗೊಳಿಸಿದ ನಂತರ ವ್ಯವಹಾರಗಳು ತೆರೆದಿವೆ ಮತ್ತು ಆರ್ಥಿಕ ಚಟುವಟಿಕೆಗಳು ಭಾರತದಲ್ಲಿ ಹೆಚ್ಚಿವೆ.

ಆದಾಗ್ಯೂ, ಹಣಕಾಸು ಸಂಸ್ಥೆಯು ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಮುನ್ಸೂಚನೆಯನ್ನು ಋಣಾತ್ಮಕ ಶೇ. 6 ರಿಂದ ಶೇ. 6.4ಕ್ಕೆ ಪರಿಷ್ಕರಿಸಿದೆ. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 8.5ರಷ್ಟು ಕುಸಿಯುತ್ತದೆ ಎಂದು ಅದು ನಿರೀಕ್ಷಿಸುತ್ತದೆ. ಇದು ಬಹುತೇಕ ಭಾರತೀಯ ಕೇಂದ್ರ ಬ್ಯಾಂಕಿನ ಮುನ್ಸೂಚನೆಗೆ ಅನುಗುಣವಾಗಿರುತ್ತದೆ.

ಕಳೆದ ವಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿಯನ್ನು ಶೇ. 8.6 ರಷ್ಟು ಸಂಕುಚಿತಗೊಳಿಸುತ್ತದೆ ಎಂದು ಅಂದಾಜಿಸಿದೆ. ಇದರ ಅರ್ಥ, ವರ್ಷದ ಮೊದಲಾರ್ಧದಲ್ಲಿ ದೇಶವು ತನ್ನ ಆರ್ಥಿಕ ಇತಿಹಾಸದಲ್ಲಿ ಮೊದಲ ಬಾರಿಗೆ ತಾಂತ್ರಿಕ ಹಿಂಜರಿತವನ್ನು ಪ್ರವೇಶಿಸುವ ಸಾಧ್ಯತೆಯಿದೆ.

English summary
Barclays said on Thursday, it expects growth in GDP will resume in the third quarter of the current financial year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X