ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ ಏಳನೇ ತಿಂಗಳು ದೇಶದ ಕಚ್ಛಾ ತೈಲ ಆಮದು ಇಳಿಕೆ

|
Google Oneindia Kannada News

ನವದೆಹಲಿ, ನವೆಂಬರ್ 23: ಭಾರತದಲ್ಲಿ ಕಚ್ಚಾ ತೈಲ ಆಮದು ಸತತ ಏಳನೇ ತಿಂಗಳು ಕುಸಿತಗೊಂಡಿದ್ದು, ಅಕ್ಟೋಬರ್‌ನಲ್ಲಿ ಆಮದು ಪ್ರಮಾಣ ತೀವ್ರ ಇಳಿಕೆಯಾಗಿದೆ. ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳು ಜನರನ್ನು ಸೀಮಿತ ಚಲನಶೀಲತೆಗೆ ಮತ್ತು ತೈಲ ಬಳಕೆಯನ್ನು ನಿಗ್ರಹಿಸಿವೆ ಎಂದು ಸರ್ಕಾರದ ಅಂಕಿ ಅಂಶಗಳು ಸೋಮವಾರ ತೋರಿಸಿದೆ.

ವಿಶ್ವದಲ್ಲಿ ಮೂರನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾದ ಭಾರತದಲ್ಲಿ ಕಚ್ಚಾ ತೈಲ ಆಮದು ಶೇ. 21.6ರಷ್ಟು ಇಳಿದು 15.14 ದಶಲಕ್ಷ ಟನ್ ಅಥವಾ ದಿನಕ್ಕೆ 3.58 ಮಿಲಿಯನ್ ಬ್ಯಾರೆಲ್ (ಬಿಪಿಡಿ), ಇಳಿಕೆಯಾಗಿದೆ ಎಂದು ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ತೈಲ ದರ ಮತ್ತೆ ಹೆಚ್ಚಳ: ಸತತ 4ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆತೈಲ ದರ ಮತ್ತೆ ಹೆಚ್ಚಳ: ಸತತ 4ನೇ ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ

ತೈಲ ಉತ್ಪನ್ನಗಳ ಆಮದು ಶೇ. 53ರಷ್ಟು ಕುಸಿದು, 1.65 ದಶಲಕ್ಷ ಟನ್‌ಗಳಿಗೆ ತಲುಪಿದೆ. ಏತನ್ಮಧ್ಯೆ, ಸಂಸ್ಕರಿಸಿದ ಉತ್ಪನ್ನಗಳ ರಫ್ತು ಅಕ್ಟೋಬರ್‌ನಲ್ಲಿ ಶೇ. 35.7 ರಷ್ಟು ಕುಸಿದು 3.84 ದಶಲಕ್ಷ ಟನ್‌ಗಳಿಗೆ ಇಳಿದಿದೆ ಮತ್ತು ಸೆಪ್ಟೆಂಬರ್‌ನಲ್ಲಿ 4.80 ದಶಲಕ್ಷ ಟನ್‌ಗಳಿಂದ ಶೇ. 20 ರಷ್ಟು ಕುಸಿದಿದೆ.

Indias Crude Oil Import Down Since July

ಡೀಸೆಲ್ ಸಾಗಣೆಗಳು ಒಟ್ಟು ರಫ್ತಿನ ಪ್ರಮುಖ ಪಾಲನ್ನು ಹೊಂದಿದ್ದವು ಆದರೆ ಈ ವರ್ಷದಲ್ಲಿ ಶೇ. 24 ರಷ್ಟು ಇಳಿದು 2.37 ದಶಲಕ್ಷ ಟನ್‌ಗಳಿಗೆ ಇಳಿದವು. ಗ್ಯಾಸೋಲಿನ್ ಅಥವಾ ಪೆಟ್ರೋಲ್ ರಫ್ತು ಶೇ. 19.8 ರಷ್ಟು ಇಳಿದು 7,97,000 ಟನ್‌ಗಳಿಗೆ ತಲುಪಿದೆ.

ಕಾರ್ಖಾನೆಯ ಚಟುವಟಿಕೆಗಳು ಕ್ರಮೇಣ ಹೆಚ್ಚಾಗುತ್ತಿವೆ ಮತ್ತು ಮುಂದಿನ ಎರಡು, ಮೂರು ತಿಂಗಳಲ್ಲಿ ತೈಲ ಬೇಡಿಕೆ ಹೆಚ್ಚಾಗಬೇಕು ಎಂದು ಅಂದಾಜಿಸಲಾಗಿದೆ.

English summary
India's october crude oil imports posted their steepest fall since july and 7th consecutive monthly year on year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X