ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 10,990 ಟನ್‌ ಕರಿಮೆಣಸು ಆಮದು ಮಾಡಿಕೊಂಡ ಭಾರತ

|
Google Oneindia Kannada News

ನವದೆಹಲಿ, ಡಿಸೆಂಬರ್ 08: ಪ್ರಸಕ್ತ ಹಣಕಾಸು ವರ್ಷದಲ್ಲಿ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಭಾರತವು ಸುಮಾರು 10,990 ಟನ್ ಕರಿಮೆಣಸು ಆಮದು ಮಾಡಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಅತಿ ಹೆಚ್ಚು ಅಂದರೆ ವಿಯೆಟ್ನಾಂನಿಂದ 6,657 ಟನ್‌ನಷ್ಟು ಆಮದು ಮಾಡಲಾಗಿದೆ.

ಲೋಕಸಭೆಯಲ್ಲಿ ಸಂಸತ್ ಸದಸ್ಯರಾದ ಶೋಭಾ ಕರಂದ್ಲಾಜೆ ಮತ್ತು ಮಗುಂತ ಶ್ರೀನಿವಾಸಲು ರೆಡ್ಡಿ ಅವರಿಗೆ ಲಿಖಿತ ಉತ್ತರದಲ್ಲಿ ತಿಳಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು 2016-17, 2017-18, 2018-19ರ ಆಮದು ವಿವರಗಳನ್ನು ನೀಡಿದರು.

ವಿಯೆಟ್ನಾಂನಿಂದ ಅತಿ ಹೆಚ್ಚು ಆಮದು

ವಿಯೆಟ್ನಾಂನಿಂದ ಅತಿ ಹೆಚ್ಚು ಆಮದು

ವಿಯೆಟ್ನಾಂ ನಿಂದ ಅತಿ ಹೆಚ್ಚು (6,657 ಟನ್‌) ಕರಿಮೆಣಸು ಆಮದು ಆಗಿದ್ದು ನಂತರದಲ್ಲಿ ಶ್ರೀಲಂಕಾ ಮತ್ತು ಇಂಡೋನೇಷ್ಯಾದ ಪಾಲು ಕ್ರಮವಾಗಿ 2003 ಟನ್ ಮತ್ತು 1034 ಟನ್ ಎಂದು ಅಂದಾಜಿಸಲಾಗಿದೆ.

ನವೆಂಬರ್‌ನಲ್ಲಿ ಭಾರತದ ಚಿನ್ನದ ಆಮದು ಕುಸಿತ: ಆಭರಣಗಳಿಗೆ ಇರಲಿಲ್ಲ ಡಿಮ್ಯಾಂಡ್ನವೆಂಬರ್‌ನಲ್ಲಿ ಭಾರತದ ಚಿನ್ನದ ಆಮದು ಕುಸಿತ: ಆಭರಣಗಳಿಗೆ ಇರಲಿಲ್ಲ ಡಿಮ್ಯಾಂಡ್

2016-17ರಲ್ಲಿ ದೇಶವು 20,265 ಟನ್ ಕರಿಮೆಣಸನ್ನು ಆಮದು ಮಾಡಿಕೊಂಡಿದೆ ಮತ್ತು 2017-18ರಲ್ಲಿ 29,650 ಟನ್ , 2018-19ರಲ್ಲಿ (ತಾತ್ಕಾಲಿಕ) ಭಾರತದ ಕರಿಮೆಣಸು ಆಮದು 24,950 ಟನ್ ಆಗಿತ್ತು.

ನೇಪಾಳ ಮತ್ತು ಬಾಂಗ್ಲಾದೇಶದ ಗಡಿಗಳ ಮೂಲಕ ಕಳ್ಳಸಾಗಣೆ

ನೇಪಾಳ ಮತ್ತು ಬಾಂಗ್ಲಾದೇಶದ ಗಡಿಗಳ ಮೂಲಕ ಕಳ್ಳಸಾಗಣೆ

ಇದರ ನಡುವೆ ನೇಪಾಳ ಮತ್ತು ಬಾಂಗ್ಲಾದೇಶದ ಗಡಿಗಳ ಮೂಲಕ ಇತರ ಮೂಲಗಳಿಂದ ಭಾರತಕ್ಕೆ ಕಡಿಮೆ ಬೆಲೆಯ ಕರಿಮೆಣಸನ್ನು ಕಳ್ಳಸಾಗಣೆ ಮಾಡುವ ಬಗ್ಗೆ ಕೆಲವು ಪ್ರಾತಿನಿಧ್ಯಗಳನ್ನು ಸ್ವೀಕರಿಸಲಾಗಿದೆ ಎಂದು ಸಚಿವರು ಹೇಳಿದರು. ಈ ನಿಟ್ಟಿನಲ್ಲಿ, ಇತರ ದೇಶಗಳಿಂದ ಭಾರತಕ್ಕೆ ಕಳಪೆ ಗುಣಮಟ್ಟದ ಮೆಣಸು ಪ್ರವೇಶಿಸುವುದನ್ನು ಪತ್ತೆಹಚ್ಚಲು ಮತ್ತು ತಡೆಗಟ್ಟಲು ಕಸ್ಟಮ್ಸ್ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ ಎಚ್ಚರಿಸಲಾಗಿದೆ.

ಕರಿಮೆಣಸು ಆಮದು ಏಕೆ ಹೆಚ್ಚಾಗಿದೆ?

ಕರಿಮೆಣಸು ಆಮದು ಏಕೆ ಹೆಚ್ಚಾಗಿದೆ?

ಕಳೆದ ಮೂರು ವರ್ಷಗಳಲ್ಲಿ ಕರಿಮೆಣಸಿನ ದೇಶೀಯ ಬೆಲೆ ಕುಸಿದಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಉತ್ಪಾದನೆ ಮತ್ತು ಮೆಣಸು ಪೂರೈಕೆಯಿಂದಾಗಿ ಅಂತರರಾಷ್ಟ್ರೀಯ ಬೆಲೆಗಳ ಕುಸಿತವು ಸೇರಿದ ಪರಿಣಾಮ, ಇತರ ದೇಶಗಳಿಂದ ಭಾರತಕ್ಕೆ ಮೆಣಸು ಆಮದು ಹೆಚ್ಚಿದೆ.

ಮೊದಲ ಬಾರಿಗೆ ಭಾರತದಿಂದ ಅಕ್ಕಿ ಖರೀದಿಸಿದ ಚೀನಾಮೊದಲ ಬಾರಿಗೆ ಭಾರತದಿಂದ ಅಕ್ಕಿ ಖರೀದಿಸಿದ ಚೀನಾ


ಅವರ ಹೇಳಿಕೆಯು ಕರಿಮೆಣಸಿನ ಸರಾಸರಿ ದೇಶೀಯ ಬೆಲೆ 2016-17ರಲ್ಲಿ ಒಂದು ಕೆ.ಜಿ.ಗೆ 694.77 ರೂ., 2017-18ರಲ್ಲಿ ಒಂದು ಕೆ.ಜಿ.ಗೆ 473.73 ರೂ, ಮತ್ತು ಕೊಚ್ಚಿಯಲ್ಲಿ 2018-19ರಲ್ಲಿ ಒಂದು ಕೆ.ಜಿ.ಗೆ 378.21 ರೂ. ದಾಖಲಾಗಿದೆ.

ಭಾರತದಲ್ಲಿ ಕರಿಮೆಣಸಿಗೆ ಹೆಚ್ಚಿನ ಬೇಡಿಕೆ

ಭಾರತದಲ್ಲಿ ಕರಿಮೆಣಸಿಗೆ ಹೆಚ್ಚಿನ ಬೇಡಿಕೆ

ಕಳೆದ ಮೂರು ವರ್ಷಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಕರಿಮೆಣಸಿನ ಬೇಡಿಕೆ ಹೆಚ್ಚುತ್ತಿದೆ. ದೇಶೀಯ ಬಳಕೆ 2017 ರಲ್ಲಿ 55,000 ಟನ್, 2018 ರಲ್ಲಿ 56,000 ಟನ್ ಮತ್ತು 2019 ರಲ್ಲಿ 57,000 ಟನ್ (ಅಂದಾಜು) ಎಂದು ಅವರು ಹೇಳಿದರು. ದೇಶದಲ್ಲಿ ಕರಿಮೆಣಸಿನ ಉತ್ಪಾದನೆ 2016-17ರಲ್ಲಿ 62,080 ಟನ್, 2017-18ರಲ್ಲಿ 71,488 ಟನ್ ಮತ್ತು 2018-19ರಲ್ಲಿ 62,425 ಟನ್ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

English summary
The import of black pepper has been estimated at 10,990 tonnes during April-August FY20 .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X