ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಕ್ಕೆ ಹೊಡೆತ, ಕಲರ್ ಟಿವಿ ಆಮದಿಗೆ ಭಾರತ ನಿರ್ಬಂಧ

|
Google Oneindia Kannada News

ನವದೆಹಲಿ, ಜುಲೈ 31: ದೇಶಿ ಉತ್ಪನ್ನ, ತಂತ್ರಜ್ಞಾನಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪ್ರಮುಖ ನಿರ್ಧಾರ ಕೈಗೊಂಡಿದೆ. ಕಲರ್ ಟಿವಿ ಆಮದು ಮೇಲೆ ನಿರ್ಬಂಧ ವಿಧಿಸಲಾಗಿದೆ. ಇದರಿಂದ ಚೀನಾ ಸೇರಿದಂತೆ ಹಲವು ದೇಶಗಳಿಗೆ ಭಾರಿ ನಷ್ಟವಾಗಲಿದೆ.

ವಿದೇಶಿ ವ್ಯಾಪಾರ ಪ್ರಧಾನ ನಿರ್ದೇಶನಾಲಯ(ಡಿಜಿಎಫ್ ಟಿ) ಈ ಕುರಿತಂತೆ ಪ್ರಕಟಣೆ ಹೊರಡಿಸಿದೆ. ನಿರ್ಬಂಧಿತ ಪಟ್ಟಿಗೆ ಸೇರಿದ ವಸ್ತುಗಳನ್ನು ಆಮದು ಮಾಡಿಕೊಳ್ಳುವಂತಿಲ್ಲ. ಆಮದು ಮಾಡಿಕೊಳ್ಳಬೇಕಾದರೆ ವಾಣಿಜ್ಯ ಇಲಾಖೆಯಡಿಯಲ್ಲಿರುವ ಡಿಜಿಎಫ್ ಟಿಯಿಂದ ಅನುಮತಿ, ಲೈಸನ್ಸ್ ಅಗತ್ಯ.

ಕಪ್ಪು-ಬಿಳುಪು ಟಿವಿಗಳಿಗೆ ಭಾರೀ ಬೇಡಿಕೆ ಹಿಂದಿನ ರಹಸ್ಯ ಬಯಲು!ಕಪ್ಪು-ಬಿಳುಪು ಟಿವಿಗಳಿಗೆ ಭಾರೀ ಬೇಡಿಕೆ ಹಿಂದಿನ ರಹಸ್ಯ ಬಯಲು!

ಚೀನಾ ಅಲ್ಲದೆ, ವಿಯೆಟ್ನಾಂ, ಮಲೇಶಿಯಾ, ಹಾಂಗ್ ಕಾಂಗ್, ಕೊರಿಯಾ, ಇಂಡೋನೇಶಿಯಾ, ಥೈಲ್ಯಾಂಡ್ ಹಾಗೂ ಜರ್ಮನಿಯಿಂದ ಹೆಚ್ಚಾಗಿ ಟಿವಿ ಆಮದು ಮಾಡಿಕೊಳ್ಳಲಾಗುತ್ತಿದೆ. 36 ಸೆಂ.ಮೀ ನಿಂದ 105 ಸೆಂ.ಮೀ ತನಕದ ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ(ಎಲ್ ಸಿಡಿ) ಟೆಲಿವಿಷನ್ ಸೆಟ್ ಗಳ ಮೇಲೆ ನಿರ್ಬಂಧ ಹೇರಲಾಗಿದೆ.

India restricts import of colour television sets, China most-affected

2019-20ರ ಅವಧಿಯಲ್ಲಿ ಸುಮಾರು 781 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಕಲರ್ ಟಿವಿ ಆಮದು ಮಾಡಿಕೊಳ್ಳಲಾಗಿದೆ. ಈ ಪೈಕಿ ಚೀನಾ ಹಾಗೂ ವಿಯೆಟ್ನಾಂನಿಂದ 428 ಮಿಲಿಯನ್ ಯುಎಸ್ ಡಾಲರ್ ನಷ್ಟು ಮಿಕ್ಕ ಕಡೆಗಳಿಂದ 293 ಮಿಲಿಯನ್ ಯುಎಸ್ ಡಾಲರ್ ವಹಿವಾಟು ನಡೆಸಲಾಗಿದೆ.

ನಿಮಗೆ ಬೇಕಾದ ಟಿವಿ ಚಾನೆಲ್ ನೀವೆ ಆಯ್ಕೆ ಮಾಡಿಕೊಳ್ಳಿ: ಟ್ರಾಯ್ನಿಮಗೆ ಬೇಕಾದ ಟಿವಿ ಚಾನೆಲ್ ನೀವೆ ಆಯ್ಕೆ ಮಾಡಿಕೊಳ್ಳಿ: ಟ್ರಾಯ್

ಆಮದು ನಿರ್ಬಂಧದಿಂದ ದೇಶದಲ್ಲಿ ಅಸೆಂಬ್ಲಿಂಗ್ ಟಿವಿಗೆ ಬೇಡಿಕೆ ಹೆಚ್ಚಾಗಲಿದ್ದು, ಉತ್ತಮ ಗುಣಮಟ್ಟದ ಟಿವಿಗಳನ್ನು ನಿರೀಕ್ಷಿಸಬಹುದು ಎಂದು ಪ್ಯಾನಾಸೋನಿಕ್ ಇಂಡಿಯಾ ಸಿಇಒ ಮನೀಶ್ ಶರ್ಮ ಹೇಳಿದ್ದಾರೆ.

English summary
The government on Thursday imposed restrictions on imports of colour television, a move aimed at promoting domestic manufacturing and cut inbound shipments of non-essential items from countries like China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X