ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಶೇ.20.1 ಬೆಳವಣಿಗೆ ಕಂಡ ಭಾರತ

|
Google Oneindia Kannada News

ನವದೆಹಲಿ, ಆಗಸ್ಟ್ 31: ಭಾರತ 2021-22ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ.20.1ರಷ್ಟು ಬೆಳವಣಿಗೆ ಕಂಡಿದೆ.

ಕೊವಿಡ್-19 ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್‌ಡೌನ್‌ ಹೇರಿದ್ದರಿಂದ ಕಳೆದ ವರ್ಷದ, ಅಂದರೆ FY21ರ ಏಪ್ರಿಲ್​ನಿಂದ ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡಾ 24.4ರಷ್ಟು ಕುಗ್ಗಿತ್ತು. ಭಾರತ ಸ್ವಾತಂತ್ರ್ಯ ಪಡೆದ ನಂತರದಲ್ಲಿ ಇದು ಭಾರೀ ಪ್ರಮಾಣದ ಕುಸಿತ ಎಂದು ಹೇಳಲಾಗಿತ್ತು.

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯಲ್ಲಿ ಶೇ.18.5ರಷ್ಟು ಬೆಳವಣಿಗೆಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯಲ್ಲಿ ಶೇ.18.5ರಷ್ಟು ಬೆಳವಣಿಗೆ

ಕಳೆದ ವರ್ಷ ಕಡಿಮೆ ಮೂಲಾಂಶ ಹಿನ್ನೆಲೆಯಲ್ಲಿ ಈ ತ್ರೈಮಾಸಿಕದಲ್ಲಿ ದಾಖಲೆಯ ಬೆಳವಣಿಗೆ ಆಗಿದೆ ಎಂಬುದು ಆಗಸ್ಟ್ 31ರಂದು ಬಿಡುಗಡೆಯಾದ ದತ್ತಾಂಶದಿಂದ ತಿಳಿದುಬಂದಿದೆ.

India Records a GDP growth of 20.1% In Q1 of FY 2021-22

ರಾಯಿಟರ್ಸ್‌ ಸಮೀಕ್ಷೆ ಸತ್ಯವಾಗಿದ್ದು, 41 ಅರ್ಥಶಾಸ್ತ್ರಜ್ಞರ ಸಮೀಕ್ಷೆಯಂತೆ, 2021 ರ ಏಪ್ರಿಲ್-ಜೂನ್ ನಲ್ಲಿ ಭಾರತದ ಜಿಡಿಪಿ 20 ಪ್ರತಿಶತ ಏರಿಕೆಯಾಗುವ ನಿರೀಕ್ಷೆಯಿದೆ ಎನ್ನಲಾಗಿತ್ತು.

ಕಳೆದ ಹಣಕಾಸು ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ ಕೊರೊನಾವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್ ವಿಧಿಸಿದ್ದರಿಂದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ 24.4 ಪ್ರತಿಶತದಷ್ಟು ಕುಗ್ಗಿತ್ತು. ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಆರ್ಥಿಕತೆಯಲ್ಲಿ ಕಂಡಂತಹ ಅತ್ಯಂತ ಕಡಿಮೆ ತ್ರೈಮಾಸಿಕ ಜಿಡಿಪಿ ದರವಾಗಿತ್ತು.

ಜೂನ್ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 21.6 ರಷ್ಟು ಬೆಳವಣಿಗೆಯನ್ನು ಆರ್ ಬಿಐ ಅಂದಾಜಿಸಿತ್ತು. ಜಿಡಿಪಿ ದರ ಭಾರೀ ಏರಿಕೆಗೆ ಪ್ರಮುಖ ಕಾರಣ ಕಳೆದ ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ ಭಾರೀ ಕುಸಿತವು ಕಾರಣವಾಗಿದೆ.

ರಾಯಿಟರ್ಸ್ ಸಮೀಕ್ಷೆಯ ಪ್ರಕಾರ, ಆಗಸ್ಟ್ 20 ರಿಂದ 25 ರವರೆಗಿನ 41 ಅರ್ಥಶಾಸ್ತ್ರಜ್ಞರ ಸಮೀಕ್ಷೆಯು ಭಾರತದ ಜಿಡಿಪಿ ಮೂರು ತಿಂಗಳ ಅವಧಿಯಲ್ಲಿ ಶೇಕಡಾ 20.0 ರಷ್ಟು ಬೆಳವಣಿಗೆಯಾಗಬಹುದೆಂದು ಭವಿಷ್ಯ ನುಡಿದಿದ್ದು, ಇದೀಗ ಆ ಅಂಕಿ ಅಂಶಗಳು ನಿಜವಾಗಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ದಾಖಲೆಯ ಶೇ. 24.4ರಷ್ಟು ಇಳಿಕೆಯಾಗಿದೆ.

English summary
The Indian economy grew at a record pace in the April-June 2021 quarter, compared to the same quarter last year, which is when the country was in the midst of an unprecedented national lockdown due to the COVID-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X