ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ 7 ಚೀನಿ ಮೂಲದ ಕಂಪನಿಗಳ ವಿರುದ್ಧ ಕ್ರಮ?

By ಅನಿಕೇತ್
|
Google Oneindia Kannada News

ನವದೆಹಲಿ, ಜುಲೈ 19: ಲಡಾಖ್ ಸಂಘರ್ಷದ ಬಳಿಕ ಚೀನಾಗೆ ಮೊದಲ ಬಾರಿ ಗುನ್ನಾ ಇಟ್ಟಿದ್ದ ಭಾರತ, 59 ಚೀನಿ ಆ್ಯಪ್‌ಗಳಿಗೆ ಗೇಟ್ ಪಾಸ್ ಕೊಟ್ಟಿತ್ತು. ಇದೀಗ 2ನೇ ಬಾರಿಗೆ ಪಂಚ್ ಕೊಡಲು ಸಜ್ಜಾಗಿದೆ. ಚೀನಾ ಸೇನೆ ಜೊತೆಗೆ ಸಂಪರ್ಕ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಚೀನಾ ಮೂಲದ 7 ಕಂಪನಿಗಳ ವಿರುದ್ಧ ಕ್ರಮಕ್ಕೆ ಚಿಂತನೆ ನಡೆಸಿದೆ.

Recommended Video

Twitter Hackers ಮಾಡಿದ್ದೇನು , ಕದ್ದಿದ್ದೆಷ್ಟು ? | Oneindia Kannada

ಈ ಏಳು ಕಂಪನಿಗಳು ಭಾರತದಲ್ಲಿ ಚೀನಿ ಸೇನೆ ಪರ ಕಾರ್ಯಾಚರಣೆ ನಡೆಸುತ್ತಿವೆ ಎಂಬ ಮಾಹಿತಿ ಸಿಕ್ಕಿದ್ದರಿಂದ ತೀವ್ರ ನಿಗಾಯಿಟ್ಟಿರುವ ಭಾರತ ಸರ್ಕಾರ, ಪ್ರತಿಯೊಂದನ್ನೂ ಪರಿಶೀಲಿಸುತ್ತಿದೆ. ಭಾರತದಿಂದಲೇ ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸುತ್ತಿರುವ ಹುವೈ ಕಂಪನಿ ಸ್ಥಾಪಕ ರೆನ್ ಜೆಂಗ್ ಫೀ ಚೀನಾ ಸೇನೆಯಲ್ಲಿದ್ದವನು. ಈಗಾಗಲೇ ಅಮೆರಿಕ, ಬ್ರಿಟನ್, ಜಪಾನ್, ಆಸ್ಟ್ರೇಲಿಯಾ ದೇಶಗಳು ಹುವೈ ಕಂಪನಿಯ 5G ನೆಟ್ವರ್ಕ್ ಬ್ಯಾನ್ ಮಾಡಿವೆ. ಈ ಬೆನ್ನಲ್ಲೇ ಭಾರತ ಕೂಡ ಹುವೈ ಮೇಲೆ ತೀವ್ರ ನಿಗಾ ಇಟ್ಟಿದೆ.

ಚೀನಾ ಕಂಪನಿ ಹ್ಯುವೈ ಮೇಲೆ ನಿಷೇಧ ಹೇರಿದ ಯುಕೆಚೀನಾ ಕಂಪನಿ ಹ್ಯುವೈ ಮೇಲೆ ನಿಷೇಧ ಹೇರಿದ ಯುಕೆ

ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ನಿಯಮಿತ (ಬಿಎಸ್ ಎನ್ ಎಲ್) 4ಜಿ ಟೆಲಿಕಾಂ ನೆಟ್ವರ್ಕ್ ಅಪ್ ಗ್ರೇಡ್ ಟೆಂಡರ್ ಪ್ರಕ್ರಿಯೆಯಲ್ಲಿ ಚೀನಾ ಕಂಪನಿಗಳಿಗೆ ಪಾಲ್ಗೊಳ್ಳದಂತೆ ನಿರ್ಬಂಧಿಸಲಾಗಿದೆ. ಇದರಿಂದ ಸುಮಾರು 7000-8000 ಕೋಟಿ ರೂ. ವೆಚ್ಚದ ಪ್ರಕ್ರಿಯೆಯಿಂದ ಹೊರಗುಳಿಯಲಿದೆ. ಇದರ ಬೆನ್ನಲ್ಲೇ ಯುಕೆಯಲ್ಲಿ 5ಜಿ ಟೆಂಡರ್ ನಿಂದ ಹ್ಯುವೈಗೆ ನಿರ್ಬಂಧ ಹೇರಲಾಗಿದೆ.

 ಯಾವ ಯಾವ ಕಂಪನಿಗಳ ಮೇಲೆ ಕ್ರಮ

ಯಾವ ಯಾವ ಕಂಪನಿಗಳ ಮೇಲೆ ಕ್ರಮ

ಈ 7 ಕಂಪನಿಗಳು ಚೀನಾ ಸೇನೆ ಜೊತೆ ಪ್ರತ್ಯಕ್ಷ ಅಥವಾ ಪರೋಕ್ಷ ಸಂಪರ್ಕ ಹೊಂದಿವೆ ಎಂಬ ಆರೋಪವಿದೆ. ಆಲಿಬಾಬಾ, ಹುವೈ, ಕ್ಸಿಂಡಿಯಾ ಸ್ಟೀಲ್, ಕ್ಸಿಕ್ಸಿಂಗ್ ಕ್ಯಾಥೆ ಇಂಟರ್ ನ್ಯಾಷನಲ್, ಚೀನಾ ಎಲೆಕ್ಟ್ರಾನಿಕ್ ಟೆಕ್ನಾಲಜಿ ಗ್ರೂಪ್, ಟೆನ್ಸೆಂಟ್ ಕಂಪನಿ ಹಾಗೂ SAIC ಮೋಟಾರ್ ಕಾರ್ಪೊರೇಷನ್ ವಿರುದ್ಧ ಮೋದಿ ಸರ್ಕಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

 ಮೊದಲ ಏಟನ್ನೇ ಸುಧಾರಿಸಿಕೊಂಡಿಲ್ಲ..!

ಮೊದಲ ಏಟನ್ನೇ ಸುಧಾರಿಸಿಕೊಂಡಿಲ್ಲ..!

ಲಡಾಖ್‌ ಗಡಿ ಒಳಗೆ ನುಗ್ಗಿ ಭಾರತೀಯ ಸೇನೆ ಜೊತೆ ಘರ್ಷಣೆಗೆ ಇಳಿದಿದ್ದ ಕಿರಾತಕ ಚೀನಾ ಮಿಲಿಟರಿ, ಭಾರತದ 20 ಸೈನಿಕರ ಸಾವಿಗೆ ಕಾರಣವಾಗಿತ್ತು. ಈ ಘಟನೆ ಬೆನ್ನಲ್ಲೇ ಭಾರತದಲ್ಲಿ ಚೀನಾ ವಸ್ತುಗಳು ಹಾಗೂ ಆ್ಯಪ್‌ಗಳ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಈ ಆಕ್ರೋಶದ ನಡುವೆಯೇ, ಚೀನಿ ಆ್ಯಪ್‌ಗಳ ಭದ್ರತಾ ಲೋಪ ಎತ್ತಿಹಿಡಿದಿದ್ದ ಪ್ರಧಾನಿ ಮೋದಿ ಚೀನಾ ಮೂಲದ 59 ಆ್ಯಪ್‌ಗಳಿಗೆ ಕೊನೆ ಮೊಳೆ ಹೊಡೆದಿದ್ದರು. ಇದಾದ ಬಳಿಕ ರೊಚ್ಚಿಗೆದ್ದ ಚೀನಾ, ಭಾರತದ ನಡೆಯನ್ನು ದುರದೃಷ್ಟಕರ ಎಂದಿತ್ತು.

 ವಿಶ್ವದಾದ್ಯಂತ ಇಂತಹದ್ದೇ ನಿರ್ಧಾರಕ್ಕೆ ಚಿಂತನೆ

ವಿಶ್ವದಾದ್ಯಂತ ಇಂತಹದ್ದೇ ನಿರ್ಧಾರಕ್ಕೆ ಚಿಂತನೆ

ಹೀಗೆ ಭಾರತದಲ್ಲಿ ಚೀನಿ ಆ್ಯಪ್‌ಗಳ ಕತೆ ಮುಗಿಸಿದ ಬಳಿಕ, ವಿಶ್ವದಾದ್ಯಂತ ಇಂತಹದ್ದೇ ನಿರ್ಧಾರಕ್ಕೆ ಚಿಂತನೆ ನಡೆಯುತ್ತಿದೆ. ಮೊದಲ ಪೆಟ್ಟನ್ನೇ ಸುಧಾರಿಸಿಕೊಳ್ಳಲು ಪರದಾಡುತ್ತಿರುವ ಚೀನಾಗೆ ಮತ್ತೆ ಶಾಕ್ ಕೊಡಲು ಭಾರತ ಸಜ್ಜಾಗಿದೆ. ಈ ಬಾರಿ ಚೀನಿ ಕಂಪನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಭಾರತ ಚಿಂತನೆ ನಡೆಸುತ್ತಿರುವುದು ಡ್ರ್ಯಾಗನ್ ನಾಡಿಗೆ ಹೃದಯಾಘಾತ ತಂದಿದೆ.

 ಚೀನಾ ವಿರುದ್ಧ ಮುಗಿಬಿದ್ದ ಟ್ರಂಪ್..!

ಚೀನಾ ವಿರುದ್ಧ ಮುಗಿಬಿದ್ದ ಟ್ರಂಪ್..!

ಚೀನಾ ಭಾರತ ಜೊತೆ ಮಾತ್ರ ಕಿರಿಕ್ ಮಾಡಿಕೊಳ್ಳುತ್ತಿಲ್ಲ, ವಿಶ್ವದ ಘಟಾನುಘಟಿ ರಾಷ್ಟ್ರಗಳ ಜೊತೆಗೂ ಈ ದೇಶಕ್ಕೆ ಕಿರಿಕಿರಿ ಇದ್ದಿದ್ದೇ. ಕೊರೊನಾ ವಿಚಾರದಲ್ಲಿ ಚೀನಾ ನಡೆದುಕೊಂಡ ರೀತಿ ಈಗಲೂ ವಿಶ್ವದ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಆರಂಭದಲ್ಲೇ ಡೆಡ್ಲಿ ವೈರಸ್ ಕುರಿತು ಚೀನಾ ತಲೆಕೆಡಿಸಿಕೊಳ್ಳದಿರುವ ಪರಿಣಾಮ ಇಂದು ಇಡೀ ಜಗತ್ತಿಗೆ ಕೊರೊನಾ ಕಂಟಕವಾಗಿದೆ. ಇದರ ನಡುವೆಯೇ ಗಡಿಯಲ್ಲಿ ಕಿರಿಕ್ ಮಾಡುತ್ತಾ, ಬೇರೆ ಬೇರೆ ರಾಷ್ಟ್ರಗಳಲ್ಲಿ ಗೂಢಾಚಾರಿಕೆ ನಡೆಸುತ್ತಿರುವ ಆರೋಪವೂ ಚೀನಾ ಮೇಲಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಚೀನಾ ಜೊತೆಗೆ ಮತ್ತೊಮ್ಮೆ ವಾಣಿಜ್ಯ ಸಮರಕ್ಕೆ ಸಿದ್ಧರಾಗಿದ್ದಾರೆ. ಈ ಬೆನ್ನಲ್ಲೇ ಭಾರತ ಕೂಡ ಚೀನಿ ಅಹಂಕಾರಕ್ಕೆ ಸರಿಯಾಗೇ ಪೆಟ್ಟು ಕೊಡಲು ಸಜ್ಜಾಗಿದೆ. ಚೀನಿಯರ ವಿರುದ್ಧದ ಈ ವಾಣಿಜ್ಯ ಸಮರಕ್ಕೆ ಭಾರತವೇ ನಾಂದಿ ಹಾಡಿದರೂ ಅಚ್ಚರಿಪಡಬೇಕಿಲ್ಲ.

English summary
Indian government keeps an eye on Alibaba, Tencent, Huawei, Xindia Steels Ltd, Xinxing Cathay International Group, China Electronics Technology Group Corporation and SAIC Motor Corporation Limited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X