ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲಕ್ಕಾಗಿ ಸೌದಿ ಅರೇಬಿಯಾ, ಅಮೆರಿಕ ಅವಲಂಬಿಸುವಂತಾದ ಭಾರತ

|
Google Oneindia Kannada News

ಲಂಡನ್, ಜುಲೈ 2: ಇರಾನ್‌ನಿಂದ ಅತಿ ಹೆಚ್ಚು ಪ್ರಮಾಣದಲ್ಲಿ ತೈಲ ಖರೀದಿ ಮಾಡುವ ದೇಶಗಳಲ್ಲಿ ಒಂದಾದ ಭಾರತವು ಈಗ ಇರಾನ್ ಮೇಲಿನ ಅಮೆರಿಕದ ನಿರ್ಬಂಧದಿಂದಾಗಿ ಅನಿವಾರ್ಯವಾಗಿ ಸೌದಿ ಅರೇಬಿಯಾ ಮತ್ತು ಅಮೆರಿಕವನ್ನು ಹೆಚ್ಚು ಅವಲಂಬಿಸುವಂತಾಗಿದೆ.

ಇರಾನ್‌ನಿಂದ ಸರಬರಾಜು ಅಗುತ್ತಿದ್ದ ತೈಲವನ್ನೆಲ್ಲ ಇತರೆ ದೇಶಗಳೊಂದಿಗೆ ಹಂಚಿಕೊಳ್ಳಲಾಗುತ್ತಿತ್ತು ಎಂದು ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮದ (ಐಓಸಿ) ಮುಖ್ಯಸ್ಥ ಸಂಜೀವ್ ಸಿಂಗ್ ತಿಳಿಸಿದ್ದಾರೆ.

ಇರಾನ್‌, ಭಾರತಕ್ಕೆ ಕಚ್ಚಾ ತೈಲವನ್ನು ರವಾನಿಸುವ ಮೂರನೇ ಅತಿದೊಡ್ಡ ದೇಶವಾಗಿದೆ. ತನ್ನ ಬೆಳೆಯುತ್ತಿರುವ ಆರ್ಥಿಕತೆಯನ್ನು ಉತ್ತೇಜಿಸಲು ಭಾರಿ ಪ್ರಮಾಣದ ತೈಲವನ್ನು ಅದು ಆಮದು ಮಾಡಿಕೊಳ್ಳುತ್ತಿದೆ. ಇರಾಕ್ ಮತ್ತು ಸೌದಿ ಅರೇಬಿಯಾ ಮಾತ್ರ ಭಾರತಕ್ಕೆ ಹೆಚ್ಚು ತೈಲ ರಫ್ತು ಮಾಡುತ್ತಿವೆ.

ಕಚ್ಚಾ ತೈಲ ಬೆಲೆ ಏರಿಕೆ, ಇಂಧನ ದರ ಸತತ 5ನೇ ದಿನವೂ ಹೆಚ್ಚಳ ಕಚ್ಚಾ ತೈಲ ಬೆಲೆ ಏರಿಕೆ, ಇಂಧನ ದರ ಸತತ 5ನೇ ದಿನವೂ ಹೆಚ್ಚಳ

ಆದರೆ, ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಇರಾನ್‌ನ ತೈಲ ರಫ್ತಿನ ಮೇಲೆ ನಿರ್ಬಂಧಗಳನ್ನು ವಿಧಿಸಿದ ಬಳಿಕ ಭಾರತವು ತೈಲ ಆಮದಿಗಾಗಿ ಬೇರೆ ಮೂಲಗಳನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿತ್ತು.

ನಿರ್ಬಂಧದ ನಡುವೆಯೂ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ಭಾರತ ಸೇರಿದಂತೆ ಕೇವಲ ಎಂಟು ದೇಶಗಳಿಗೆ ಅಮೆರಿಕ ಅವಕಾಶ ನೀಡಿತ್ತು. ಈ ವಿನಾಯಿತಿ ಕೂಡ ಮೇ 2ಕ್ಕೆ ಅಂತ್ಯಗೊಂಡಿತ್ತು.

ಇತರೆ ಮೂಲಗಳತ್ತ ಗಮನ

ಇತರೆ ಮೂಲಗಳತ್ತ ಗಮನ

ವಿಶ್ವಸಂಸ್ಥೆಯು ವಿಧಿಸಿದ ನಿರ್ಬಂಧಗಳನ್ನು ಮಾತ್ರ ತಾನು ಪರಿಗಣಿಸುವುದಾಗಿ ಭಾರತ ಹೇಳಿತ್ತು. ಈ ಮೂಲಕ ಅಮೆರಿಕದ ನಿರ್ಬಂಧ ನಿಯಮದ ಬೆದರಿಕೆಗೆ ತಿರುಗೇಟು ನೀಡಿತ್ತು. ಅದರ ನಡುವೆಯೂ ಏಪ್ರಿಲ್‌ನಲ್ಲಿ ಪೆಟ್ರೋಲಿಯಂ ಸಚಿವರು ಇತರೆ ಪ್ರಮುಖ ತೈಲ ಉತ್ಪಾದಕ ದೇಶಗಳಿಂದ ಹೆಚ್ಚುವರಿ ತೈಲ ಆಮದಿಗೆ ಪ್ರಯತ್ನ ನಡೆಸಿರುವುದಾಗಿ ತಿಳಿಸಿದ್ದರು. ಆದರೆ, ಈಗ ಇರಾನ್‌ನಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸಿದೆ.

ಬಳಸಿದ ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸಿದ ಹೈದರಾಬಾದ್ ಇಂಜಿನಿಯರ್ ಬಳಸಿದ ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸಿದ ಹೈದರಾಬಾದ್ ಇಂಜಿನಿಯರ್

ಆಮದು ಸಂಪೂರ್ಣ ಸ್ಥಗಿತ

ಆಮದು ಸಂಪೂರ್ಣ ಸ್ಥಗಿತ

ಇರಾನ್‌ನಿಂದ ಪಡೆದುಕೊಳ್ಳುತ್ತಿದ್ದ ಎಲ್ಲ ಆಮದು ಉತ್ಪನ್ನಗಳನ್ನು ಭಾರತ ಸ್ಥಗಿತಗೊಳಿಸಿರುವುದಾಗಿ ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ವಕ್ತಾರರು ಖಚಿತಪಡಿಸಿದ್ದಾರೆ. ಇರಾನ್‌ನಿಂದ ತೈಲ ಆಮದು ಕಡಿತಗೊಳಿಸಿರುವುದು ಸರ್ಕಾರದ ಸೂಚನೆಯ ಮೇರೆಗೆ ತೆಗೆದುಕೊಂಡ ಸಮಗ್ರ ನಿರ್ಧಾರ. ಇದು ಈ ಸಂದರ್ಭದಲ್ಲಿ ದೇಶದ ಹಿತಾಸಕ್ತಿಯಿಂದ ಕೈಗೊಂಡಿರುವುದು ಎಂದು ಅವರು ಹೇಳಿದ್ದಾರೆ.

ಅಮೆರಿಕದ ಜತೆ ಸಂಬಂಧ ಉಳಿಸಿಕೊಳ್ಳಲು ಕಸರತ್ತು

ಅಮೆರಿಕದ ಜತೆ ಸಂಬಂಧ ಉಳಿಸಿಕೊಳ್ಳಲು ಕಸರತ್ತು

ವ್ಯಾಪಾರದ ವಿಚಾರವಾಗಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಇತ್ತೀಚೆಗೆ ಕೊಂಚ ಹಳಸಿತ್ತು. ತನ್ನ ವಸ್ತುಗಳ ಮೇಲೆ ಭಾರತ ದುಬಾರಿ ತೆರಿಗೆ ವಿಧಿಸುತ್ತಿದೆ. ಆದರೆ, ಆ ದೇಶದ ಉತ್ಪನ್ನಗಳಿಗೆ ನಾವು ತೆರಿಗೆ ವಿನಾಯಿತಿ ನೀಡುತ್ತಿದ್ದೇವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಕಿಡಿಕಾರಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಇರಾನ್‌ನಿಂದ ತೈಲ ಆಮದಿಗೆ ಭಾರತ ಕಡಿವಾಣ ಹಾಕಿದೆ. ತನ್ನ ಅತಿ ದೊಡ್ಡ ರಫ್ತು ಮಾರುಕಟ್ಟೆಯಾದ ಅಮೆರಿಕದ ಮುನಿಸಿನಿಂದ ಭಾರತ ಚಿಂತೆಗೀಡಾಗಿದೆ.

ಇರಾನ್‌ನಿಂದ ಭಾರತ ತೈಲ ಖರೀದಿ ಮಾಡಲು ಅಡ್ಡಿಯಿಲ್ಲ: ಅಮೆರಿಕ ಸಮ್ಮತಿಇರಾನ್‌ನಿಂದ ಭಾರತ ತೈಲ ಖರೀದಿ ಮಾಡಲು ಅಡ್ಡಿಯಿಲ್ಲ: ಅಮೆರಿಕ ಸಮ್ಮತಿ

ದೊಡ್ಡಣ್ಣನಿಗೆ ಕಿಮ್ಮತ್ತು ಕೊಡದ ಚೀನಾ

ದೊಡ್ಡಣ್ಣನಿಗೆ ಕಿಮ್ಮತ್ತು ಕೊಡದ ಚೀನಾ

ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಟರ್ಕಿ ಸೇರಿದಂತೆ ಇತರೆ ದೇಶಗಳು ಸಹ ಸ್ಥಗಿತಗೊಳಿಸಿವೆ. ಆದರೆ, ಇರಾನ್‌ನ ಅತಿ ದೊಡ್ಡ ತೈಲ ಆಮದುದಾರ ಚೀನಾ, ಅಮೆರಿಕದ ನಿರ್ಬಂಧವನ್ನು ಕಡೆಗಣಿಸಿ ಆಮದನ್ನು ಮುಂದುವರಿಸಿದೆ. ಅಮೆರಿಕದೊಂದಿಗೆ ನೇರವಾಗಿ ವ್ಯಾಪಾರ ಸಮರ ನಡೆಸುತ್ತಿದೆ. ಅದು ಮೇ ತಿಂಗಳಿನಲ್ಲಿ ಇರಾನ್‌ನಿಂದ 585 ಮಿಲಿಯನ್ ಡಾಲರ್ ಮೊತ್ತದ ತೈಲ ಖರೀದಿಸಿದೆ. ಜೂನ್‌ನಲ್ಲಿ ಇನ್ನೂ ಹೆಚ್ಚಿನ ತೈಲವನ್ನು ಚೀನಾಕ್ಕೆ ಇರಾನ್ ಪೂರೈಕೆ ಮಾಡಿದೆ.

English summary
India is buying more petrolium products from USA and Saudi Arabia after US sanctions have forced it to cease its imports from Iran.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X