• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಎಂಸಿ 2019: ಜಿಯೋ ಮತ್ತು ಸ್ಯಾಮ್‌ಸಂಗ್ 5G ಮತ್ತು LTE ಪ್ರದರ್ಶನ

|

ನವದೆಹಲಿ, ಅಕ್ಟೋಬರ್ 15: ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ) ಮತ್ತು ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಮುಂದಿನ ತಲೆಮಾರಿನ ತಂತ್ರಜ್ಞಾನದ ಸಹಾಯದಿಂದ ಹೇಗೆ ನಮ್ಮ ಜೀವನದಲ್ಲಿ ಯಾವ ಬದಲಾವಣೆಗಳು ಸಾಧ್ಯವಾಗಲಿದೆ ಎಂಬುದನ್ನು ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) 2019 ರಲ್ಲಿ ಪ್ರಸ್ತುತಪಡಿಸಿದೆ. ಇದು ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿನ ಡಿಜಿಟಲ್ ತಂತ್ರಜ್ಞಾನದ ಕ್ಷೇತ್ರಕ್ಕೆ ಸಂಭಂದಿಸುವಂತೆ ನಡೆಯುವ ಅತಿದೊಡ್ಡ ವಾರ್ಷಿಕ ಕಾರ್ಯಕ್ರಮವಾಗಿದೆ, ಅಕ್ಟೋಬರ್ 14 ರಿಂದ 16 ರವರೆಗೆ ನವದೆಹಲಿಯಲ್ಲಿ ನಡೆಯುತ್ತಿದೆ.

ಸ್ಯಾಮ್‌ಸಂಗ್ ನೆಟ್‌ವರ್ಕ್‌ಗಳ ಸಹಭಾಗಿತ್ವದಲ್ಲಿ ಜಿಯೋ ವಿಶ್ವದ ಅತಿದೊಡ್ಡ ಹಸಿರು-ಕ್ಷೇತ್ರ ಮತ್ತು ಎಲ್ಲಾ IP ಆಧಾರಿತ 4G LTE ನೆಟ್‌ವರ್ಕ್ ಅನ್ನು ನಿರ್ಮಿಸಿದೆ, ಇದು ಆಗಸ್ಟ್ 2019 ರ ಹೊತ್ತಿಗೆ 340 ಮಿಲಿಯನ್ LTE ಚಂದಾದಾರರನ್ನು ತನ್ನ ಕುಟುಂಬದಲ್ಲಿ ಸೇರಿಸಿಕೊಂಡಿದೆ.

ಐಎಂಸಿ 2019: ವಿಶ್ವದ ಮೊದಲ ಎಐ ಆಧಾರಿತ ಕಾಲ್ ಅಸಿಸ್ಟೆಂಟ್ ಅನಾವರಣ

ಈ ಕಾರ್ಯಕ್ರಮದಲ್ಲಿ ಎರಡು ಕಂಪನಿಗಳು 5G NSA ಮೋಡ್ ಅನ್ನು ಬಳಸಿಕೊಂಡು ಹೊಸ ವ್ಯಾಪಾರ ಅವಕಾಶಗಳನ್ನು ಪ್ರಸ್ತುತಪಡಿಸುತ್ತವೆ, ಸುಧಾರಿತ 4G LTE ಮತ್ತು 5G ತಂತ್ರಜ್ಞಾನವನ್ನು ಡ್ಯುಯಲ್-ಕನೆಕ್ಟ್ ಮೋಡ್ ನೆಟ್ವರ್ಕ್ ಆಗಿ ಸಂಯೋಜನೆಯಲ್ಲಿ ಬಳಸಲಾಗುತ್ತದೆ. ಇತ್ತೀಚಿನ ತಂತ್ರಜ್ಞಾನದ ಆವಿಷ್ಕಾರಗಳು ಗ್ರಾಹಕರಿಗೆ, ಉದ್ಯಮಗಳಿಗೆ ಮತ್ತು ಸಮಾಜಕ್ಕೆ ಹೇಗೆ ಪ್ರಯೋಜನವನ್ನು ಮಾಡುತ್ತವೆ ಎಂಬುದನ್ನು ಇಲ್ಲಿ ತೋರಿಸುತ್ತದೆ.

"ಜಿಯೋ ತಂದ ಅಭೂತಪೂರ್ವ ದತ್ತಾಂಶ ಬೆಳವಣಿಗೆ ಮತ್ತು ಮೊಬೈಲ್ ಇಂಟರ್ನೆಟ್ ಅಳವಡಿಕೆ ಮತ್ತು ಕ್ರಾಂತಿ ಪ್ರತಿಯೊಬ್ಬ ಭಾರತೀಯರ ಜೀವನವನ್ನು ಮೂಲಭೂತವಾಗಿ ಬದಲಿಸಿದೆ" ಎಂದು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷ ಮ್ಯಾಥ್ಯೂ ಒಮ್ಮನ್ ಹೇಳಿದ್ದಾರೆ, ನಾವುಯ ಎಂಡ್-ಟು-ಎಂಡ್ ಫೈಬರ್, 5G ಮತ್ತು IoT ವ್ಯವಸ್ಥೆಯಂತಹ ಡಿಜಿಟಲ್ ಮೂಲಸೌಕರ್ಯಗಳನ್ನು ಕಲ್ಪಿಸಿ ಎಲ್ಲಾ ಭಾರತೀಯರು ನಮ್ಮ ವ್ಯವಹಾರಗಳು ಮತ್ತು ಡಿಜಿಟಲ್ ಆರ್ಥಿಕತೆಯನ್ನು ವೇಗಗೊಳಿಸಲು ಮತ್ತು ಭಾರತಕ್ಕೆ ಡಿಜಿಟಲ್ ಸ್ವಾತಂತ್ರ್ಯವನ್ನು ನೀಡಲು ಬಯಸುತ್ತವೆ ಎಂದರು.

5G ಯುಗದತ್ತ ಸಾಗಲು ಜಿಯೋಗೆ ಸಹಾಯ

5G ಯುಗದತ್ತ ಸಾಗಲು ಜಿಯೋಗೆ ಸಹಾಯ

"ಉತ್ತಮವಾದ LTE ನೆಟ್ವರ್ಕ್ ಗಳನ್ನು ಹೊಂದಿರುವುದರಿಂದ 5G ಯುಗದತ್ತ ಸಾಗಲು ಜಿಯೋಗೆ ಸಹಾಯವಾಗಿದೆ, ಆ ಬಲವಾದ ಸಾಮರ್ಥ್ಯವನ್ನು ಜಿಯೋ ಹೊಂದಿದೆ" ಎಂದು ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ನೆಟ್ವರ್ಕ್ಸ್ ಬಿಸಿನೆಸ್ ಮುಖ್ಯಸ್ಥ ಪಾಲ್ ಕ್ಯುಂಗ್ ವೂನ್ ಚೆಯುನ್ ಹೇಳಿದ್ದಾರೆ. "ಸ್ಯಾಮ್‌ಸಂಗ್ ಏಳು ವರ್ಷಗಳಿಂದ ಭಾರತದಾದ್ಯಂತ 4G ಗೆ ಪರಿವರ್ತನೆ ಸೇರಿದಂತೆ ಡಿಜಿಟಲ್ ರೂಪಾಂತರವನ್ನು ತರಲು ಜಿಯೋ ಜೊತೆ ನಿಕಟ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸ್ಯಾಮ್ಸಂಗ್ ಮತ್ತು ಜಿಯೋ ದೇಶಾದ್ಯಂತ ಮುಂದಿನ ಪೀಳಿಗೆಯ ಆವಿಷ್ಕಾರಗಳನ್ನು ತರುವಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.

ಡಿಜಿಟಲ್ ಇಂಡಿಯಾಕ್ಕಾಗಿ 5G ಬಳಕೆ

ಡಿಜಿಟಲ್ ಇಂಡಿಯಾಕ್ಕಾಗಿ 5G ಬಳಕೆ

ಸ್ಯಾಮ್‌ಸಂಗ್ ಮತ್ತು ಜಿಯೋ ಜಂಟಿಯಾಗಿ 5G ಇಮರ್ಸಿವ್ ಮತ್ತು ಲೈವ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿ ಪಡಿಸುತ್ತಿವೆ, ಇದು ಭಾರತದಲ್ಲಿ 5G ಸೇವೆಯ ಪ್ರಯೋಗಕ್ಕೆ ಸಾಕಷ್ಟು ಸಹಾಯವನ್ನು ಮಾಡಲಿದೆ. ಸ್ಯಾಮ್‌ಸಂಗ್ ನೆಟ್‌ವರ್ಕ್‌ಗಳ 5G ಉತ್ಪನ್ನ ಪೋರ್ಟ್ಫೋಲಿಯೊದಿಂದ ಪರಿಹಾರಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ 5G ಮ್ಯಾಸಿವ್ MIMO ಯುನಿಟ್ (MMU), 28GHz ಆಕ್ಸೆಸ್ ಯುನಿಟ್ (AU) ಮತ್ತು CPE ಸಾಧನ, ಅದರ ವರ್ಚುವಲೈಸ್ಡ್ ರೇಡಿಯೋ ಆಕ್ಸಿಸ್ (vRAN) ಮತ್ತು ಕೋರ್, ಮತ್ತು 5G ಮೊಬೈಲ್ ಸಾಧನಗಳ ಪ್ರದರ್ಶನಗಳು ಒಳಗೊಂಡಿವೆ.

* ವರ್ಚುವಲ್ ಕ್ಲಾಸ್‌ರೂಮ್ ಪಾಲ್ಗೊಳ್ಳುವವರಿಗೆ ಮುಂಬೈನ ಜಿಯೋ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ನ (RCP) 360 ಡಿಗ್ರಿ ವರ್ಚುವಲ್ ಉಪನ್ಯಾಸವನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.

* ಮ್ಯಾಸಿವ್ ಫುಲ್ಹೈ-ಡೆಫಿನಿಷನ್ (HD) ಕಂಟೆಂಟ್ ಸ್ಟ್ರೀಮಿಂಗ್ ಏಕಕಾಲದಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳಲ್ಲಿ (ಗ್ಯಾಲಕ್ಸಿ ಎಸ್ 10 5G) FHD ವಿಡಿಯೋ ಸ್ಟ್ರೀಮಿಂಗ್ ಮತ್ತು ಅನೇಕ 5G ಟ್ಯಾಬ್ಲೆಟ್‌ಗಳನ್ನು ಬಳಸಿಕೊಂಡು 4K ವಿಡಿಯೋ ಸ್ಟ್ರೀಮಿಂಗ್ ಅನ್ನು ತೋರಿಸಲಿದೆ. ಇದು 5G ಚಾಲಿತ ಮನರಂಜನಾ ಅನುಭವವನ್ನು ತೋರಿಸುತ್ತದೆ.

ಸಾರ್ವಜನಿಕ ಸುರಕ್ಷತಾ ಸಂವಹನಕ್ಕಾಗಿ 4G ಬಳಕೆ ಪ್ರಕರಣ

ಸಾರ್ವಜನಿಕ ಸುರಕ್ಷತಾ ಸಂವಹನಕ್ಕಾಗಿ 4G ಬಳಕೆ ಪ್ರಕರಣ

ಮಿಷನ್-ಕ್ರಿಟಿಕಲ್-ಪುಶ್-ಟು-ಎಕ್ಸ್ ((MCPTX)) ಸಂವಹನವನ್ನು ಒಳಗೊಂಡ "ಎಲ್‌ಟಿಇ ಮೂಲಕ ಸಾರ್ವಜನಿಕ ಸುರಕ್ಷತಾ ನೆಟ್‌ವರ್ಕ್" ಅನ್ನು ಎರಡು ಕಂಪನಿಗಳು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಿದೆ. ಭಾರತಕ್ಕಾಗಿ ತುರ್ತು ಸಂವಹನ ನೆಟ್‌ವರ್ಕ್‌ನ "ಒನ್‌ನೆಟ್" ಪರಿಕಲ್ಪನೆ ಅಭಿವೃದ್ಧಿ ಮಾಡಲಾಗಿದ್ದು, ಇದು ಮೊದಲ ರೆಡಸ್‌ಪಾಂಡರ್ಸ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಬಳಸಿ ನಿಯಂತ್ರಿತ ಮತ್ತು "ಜಿಯೋ-ಫೇನ್ಸ್" ರೀತಿಯಲ್ಲಿ ಪರಸ್ಪರ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ.

ಸಾರ್ವಜನಿಕ ಸುರಕ್ಷತಾ LTE

ಸಾರ್ವಜನಿಕ ಸುರಕ್ಷತಾ LTE

MCPTX ಅನ್ನು ಬಳಸುವ ಮೂಲಕ ಸಾರ್ವಜನಿಕ ಸುರಕ್ಷತಾ LTE (PS-LTE)ಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗುತ್ತಿದೆ, ತುರ್ತು ಸಂದರ್ಭಗಳಲ್ಲಿ ವೀಡಿಯೊಗಳ ನೈಜ-ಸಮಯದ ಸ್ಟ್ರೀಮಿಂಗ್ ಮತ್ತು ಹೈ-ಡೆಫಿನಿಷನ್ ಚಿತ್ರಗಳಿಗಾಗಿ LTE ಬಳಕೆಯನ್ನು ಹೈಲೈಟ್ ಮಾಡುವ ಮೂಲಕ, ಮಲ್ಟಿಕಾಸ್ಟ್ ತಂತ್ರಜ್ಞಾನವನ್ನು ಬಳಸಿಕೊಂಡು ಏಕಕಾಲದಲ್ಲಿ ವೀಡಿಯೊ, ಚಿತ್ರಗಳು ಮತ್ತು ಧ್ವನಿಯನ್ನು ವರ್ಗಾಯಿಸಲು ಬಹು-ಪಾರ್ಶ್ವ ಸಂವಹನಗಳನ್ನು ಏಕಕಾಲದಲ್ಲಿ ಸಂಪರ್ಕಿಸಲು ಇದರಲ್ಲಿ ಸಾಧ್ಯವಾಗುತ್ತದೆ. ಮೊದಲ ಪ್ರತಿಸ್ಪಂದಕರು ಮತ್ತು ನಿಯಂತ್ರಣ ಗೋಪುರಗಳು ಹೆಚ್ಚು ಪರಿಣಾಮಕಾರಿಯಾದ ಸಂವಹನಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುವಂತೆ, PS-LTE ಅಂತಿಮವಾಗಿ ಸಮಯ-ನಿರ್ಣಾಯಕ ಸಂದರ್ಭಗಳಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

ಅತ್ಯಾಧುನಿಕ LTE ನೆಟ್‌ವರ್ಕ್

ಅತ್ಯಾಧುನಿಕ LTE ನೆಟ್‌ವರ್ಕ್

ಜಿಯೋ ಈಗಾಗಲೇ ಪ್ಯಾನ್-ಇಂಡಿಯಾದ ಪ್ರತಿಯೊಂದು ಮೂಲೆಯನ್ನೂ ತಲುಪುವ ಅತಿದೊಡ್ಡ ಮತ್ತು ಅತ್ಯಾಧುನಿಕ LTE ನೆಟ್‌ವರ್ಕ್ ಅನ್ನು ನಿರ್ಮಿಸಿರುವುದರಿಂದ, PS-LTE MCPTX 1.3 ಬಿಲಿಯನ್ ಜನರಿಗೆ ಸಾರ್ವಜನಿಕ ಸುರಕ್ಷತೆಗಾಗಿ ಪ್ರಸ್ತುತ LTE ನೆಟ್‌ವರ್ಕ್ ಅನ್ನು ಗರಿಷ್ಠಗೊಳಿಸಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ.

ಕೊರಿಯಾದಲ್ಲಿ ಮತ್ತು ಅಮೆರಿಕಾದಲ್ಲಿ 5G ವಾಣಿಜ್ಯ ನೆಟ್‌ವರ್ಕ್ ಪ್ರಾರಂಭಿಸಿದ ಮೊದಲ ಕಂಪನಿಗಳಲ್ಲಿ ಸ್ಯಾಮ್‌ಸಂಗ್, ಚಿಪ್‌ಸೆಟ್‌ಗಳು, ರೇಡಿಯೊಗಳು, ಕೋರ್ ನೆಟ್‌ವರ್ಕ್ ಪರಿಹಾರಗಳು ಮತ್ತು ಮಿಡ್‌-ಬ್ಯಾಂಡ್ ಮತ್ತು ಎಂಎಂ ವೇವ್ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಎಂಡ್-ಟು-ಎಂಡ್ ಸೇವೆಯನ್ನು ಆಂಭಿಸಿತ್ತು.

English summary
India Mobile Congress (IMC) 2019: Samsung and Jio jointly showcased live applications of 5G that will demonstrate the value that 5G has to offer in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X