ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಸೌರಶಕ್ತಿ ಉತ್ಪನ್ನಗಳ ಮೇಲೆ ಆಮದು ಸುಂಕ ಹೆಚ್ಚಳ!

|
Google Oneindia Kannada News

ನವದೆಹಲಿ, ಜೂನ್ 26: ಲಡಾಕ್ ನ ಪೂರ್ವ ಭಾಗದ ಗಾಲ್ವಾನ್ ಕಣಿವೆಯಲ್ಲಿ ಚೀನಾ ಹಾಗೂ ಭಾರತ ನಡುವೆ ನಡೆದ ಸಂಘರ್ಷದ ಬೆನ್ನಲ್ಲೇ ಚೀನಾ ವಿರುದ್ಧ ಪರೋಕ್ಷವಾಗಿ ಆರ್ಥಿಕ ಸಮರ ಆರಂಭವಾಗಿರುವ ಸಾಧ್ಯತೆಯಿದೆ. ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ಭಾರಿ ಪ್ರಮಾಣದ ಅಬಕಾರಿ ಸುಂಕ ವಿಧಿಸಲು ಭಾರತ ಸರ್ಕಾರ ಮುಂದಾಗಿದೆ ಎಂಬ ಸುದ್ದಿಗೆ ಬಲವಾದ ಸಾಕ್ಷಿ ಸಿಕ್ಕಿದೆ.

Recommended Video

ಟೀ ಕುಡಿಯ ಬೇಕಾದ್ರೆ ಹುಟ್ಟಿದ್ದು IPLನ ಈ ಐಡಿಯಾ | Oneindia Kannada

ಚೀನಾದಿಂದ ಆಮದಾಗುವ ಸೌರಶಕ್ತಿ ಉತ್ಪನ್ನಗಳ ಮೇಲೆ ಶೇ 20 ರಿಂದ 25ರಷ್ಟು, ಸೋಲರ್ ಸೆಲ್ ಗಳ ಮೇಲೆ ಶೇ 15 ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲು ಇಂಧನ ಇಲಾಖೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ಚೀನಾಕ್ಕೆ ಭಾರಿ ಪೆಟ್ಟು, ಆಮದು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಚಿಂತನೆಚೀನಾಕ್ಕೆ ಭಾರಿ ಪೆಟ್ಟು, ಆಮದು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಚಿಂತನೆ

ಭಾರತದ ಒಟ್ಟು ಆಮದು ಪ್ರಮಾಣದಲ್ಲಿ ಚೀನಾ ಶೇ 14ರಷ್ಟು ಪಾಲು ಹೊಂದಿದೆ. ಏಪ್ರಿಲ್ 2019ರಿಂದ ಫೆಬ್ರವರಿ 2020ರ ಅವಧಿಯಲ್ಲಿ ಭಾರತವು ಸುಮಾರು 62.4 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಇದೇ ಅವಧಿಯಲ್ಲಿ ಭಾರತದಿಂದ 15.5 ಬಿಲಿಯನ್ ಡಾಲರ್ ನಷ್ಟು ಮೌಲ್ಯದ ಉತ್ಪನ್ನ ರಫ್ತಾಗಿದೆ.

ಚೀನಾದಿಂದ ಸೌರಶಕ್ತಿ ಉತ್ಪನ್ನ ಆಮದು ಏಕೆ?

ಚೀನಾದಿಂದ ಸೌರಶಕ್ತಿ ಉತ್ಪನ್ನ ಆಮದು ಏಕೆ?

ಆಗಸ್ಟ್ ತಿಂಗಳಿನಿಂದ ಈ ನೂತನ ಸುಂಕಗಳನ್ನು ಜಾರಿಗೆ ತರಲಾಗುತ್ತದೆ. ಮುಂದಿನ ವರ್ಷದಿಂದ ಶೇ 40ರಷ್ಟು ಸುಂಕ ವಿಧಿಸಲಾಗುವುದು ಎಂದು ಇಂಧನ ಸಚಿವ ಆರ್ ಕೆ ಸಿಂಗ್ ಗುರುವಾರದಂದು ತಿಳಿಸಿದರು.

2022ರ ವೇಳೆಗೆ 100 ಗಿಗಾವ್ಯಾಟ್ಸ್ ಸೌರಶಕ್ತಿ ಉತ್ಪಾದನೆ, ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಪ್ರಧಾನಿ ಮೋದಿ ಅವರ ಕನಸು ನನಸಾಗಿಸಲು ಅಪಾರ ಪ್ರಮಾಣದ ಮೂಲ ವಸ್ತುಗಳ ಅಗತ್ಯವಿದೆ.

ಒಂದೊಂದೇ ಕ್ಷೇತ್ರಗಳ ಟಾರ್ಗೆಟ್

ಒಂದೊಂದೇ ಕ್ಷೇತ್ರಗಳ ಟಾರ್ಗೆಟ್

ಎಲೆಕ್ಟ್ರಾನಿಕ್ ಕಚ್ಚಾವಸ್ತು, ವಾಚ್, ಗಡಿಯಾರ, ಸಂಗೀತ ಉಪಕರಣ, ಆಟಿಕೆ, ಕ್ರೀಡಾ ಸಾಧನ, ಪೀಠೋಪಕರಣ, ನೆಲಹಾಸು, ಪ್ಲಾಸ್ಟಿಕ್ ಉತ್ಪನ್ನಗಳು, ಎಲೆಕ್ಟ್ರಿಕಲ್ ಮಷಿನ್, ರಾಸಾಯನಿಕ ಕಚ್ಚಾವಸ್ತು, ಕಬ್ಬಿಣ, ಉಕ್ಕು, ರಸಗೊಬ್ಬರ, ಲೋಹದ ವಸ್ತು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೇ 73ರಷ್ಟು ಚೀನಾ ಮೂಲದ ಶಿಯೋಮಿ, ಒಪ್ಪೋ, ಒನ್ ಪ್ಲಸ್ ಒನ್, ರಿಯಲ್ ಮಿ, ವಿವೋ ಫೋನ್ ಗಳು ಸೇಲ್ ಆಗಿವೆ. ಭಾರತದ ಪ್ರಮುಖ 30 ಬಿಲಿಯನ್ ಡಾಲರ್ ಸ್ಟಾರ್ ಅಪ್ ಕಂಪನಿಗಳ ಪೈಕಿ 18ರಲ್ಲಿ ಚೀನಾ ಹೂಡಿಕೆ ಹೊಂದಿದೆ ಆಟೋಮೊಬೈಲ್ ಕ್ಷೇತ್ರದಲ್ಲಿ ಶೇ 30ರಷ್ಟು, ಬೊಂಬೆ, ಆಟಿಕೆ, ಟಾಯ್ಸ್ ಗೇಮ್ಸ್ ಕ್ಷೇತ್ರದಲ್ಲಿ ಶೇ 90ರಷ್ಟು ಪಾಲು, ಬೈಸಿಕಲ್ ನಿರ್ಮಾಣಕ್ಕೆ ಶೇ 50ರಷ್ಟು ಚೀನಾ ಪಾಲು ಅಗತ್ಯ. ಈ ಪೈಕಿ ಒಂದೊಂದೇ ಕ್ಷೇತ್ರವನ್ನು ಆಯ್ದುಕೊಂಡು ಅಗತ್ಯವಿರುವ ಕಡೆ ಮಾತ್ರ ಆಮದು ಉಳಿಸಿಕೊಂಡು, ಉಳಿದೆಡೆ ಆಮದು ಸುಂಕ ಹೆಚ್ಚಳಕ್ಕೆ ಸರ್ಕಾರ ಚಿಂತಿಸಿದೆ.

ವರ್ಷದಿಂದ ವರ್ಷಕ್ಕೆ ವ್ಯಾಪಾರ ವಹಿವಾಟು ಕೊರತೆ

ವರ್ಷದಿಂದ ವರ್ಷಕ್ಕೆ ವ್ಯಾಪಾರ ವಹಿವಾಟು ಕೊರತೆ

ಎಚ್ ಸಿಕ್ಯೂ ತಯಾರಿಕೆಗೆ ಬೇಕಾದ Active Pharmaceutical Ingredients (APIs), ಪಿಪಿಇ ಕಿಟ್ಸ್ ಚೀನಾದಿಂದ ಮಾತ್ರ ಪೂರೈಕೆಯಾಗುತ್ತಿದೆ. ಚೀನಾ ಮಾರುಕಟ್ಟೆ ಪ್ರಾಬಲ್ಯ, ವಿಸ್ತರಣಾ ಜಾಲವನ್ನು ತುಂಡರಿಸಬಹುದು.

ಆಮದು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ

ಆಮದು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ

ವ್ಯಾಪಾರ, ವಹಿವಾಟು ನಿಷೇಧ, ನಿರ್ಬಂಧ ಹೇರದೆ, ಆಮದು ಉತ್ಪನ್ನಗಳ ಮೇಲೆ ಹೆಚ್ಚಿನ ಪ್ರಮಾಣದ ಅಬಕಾರಿ ಸುಂಕ ಹೇರಬಹುದು. ಇದರಿಂದ ಚೀನಾ ಕಂಪನಿಗಳು ತಾವಾಗೇ ಹಿಂದೆ ಸರಿಯಬಹುದು. ಸ್ಥಳೀಯ ಕಂಪನಿಗಳು ಪೈಪೋಟಿಗೆ ಬಿದ್ದು ಉತ್ತಮ ಗುಣಮಟ್ಟದ ಸ್ವದೇಶಿ ಉತ್ಪನ್ನಗಳನ್ನು ಚೀನಿ ವಸ್ತುಗಳ ಬದಲಿಗೆ ಮಾರುಕಟ್ಟೆಗೆ ಪರಿಚಯಿಸಬಹುದು. ಈ ಮೂಲಕ ಪ್ರಧಾನಿ ಮೋದಿ ಕರೆ ನೀಡಿದಂತೆ ಆತ್ಮ ನಿರ್ಭರ ಭಾರತ, ವೋಕಲ್ ಫಾರ್ ಲೋಕಲ್, ಮೇಕ್ ಇನ್ ಇಂಡಿಯಾ ಯೋಜನೆಗಳನ್ನು ಸಾಧಿಸಬಹುದು ಜೊತೆಗೆ ಚೀನಾಗೂ ಬಿಸಿ ಮುಟ್ಟಿಸಬಹುದು

ನಿರ್ಬಂಧ, ನಿಷೇಧ ಕುರಿತಂತೆ ವಾಣಿಜ್ಯ ಸಂಸ್ಥೆಗಳು, ಕೈಗಾರಿಕಾ ಮಂಡಳಿಗಳಿಂದಲೂ ಒತ್ತಡ ಬಂದಿದೆ. ಆದರೆ, ಸರ್ಕಾರ ಈ ಬಗ್ಗೆ ಇನ್ನೂ ತನ್ನ ರೂಪುರೇಷೆ ಪ್ರಕಟಿಸಬೇಕಿದೆ.

English summary
India is likely to impose an import tax of 20-25% on solar modules and 15% on solar cells from China from August power ministery sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X