• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಉದ್ಯಮ ಸ್ನೇಹಿ' ಸೂಚ್ಯಂಕದಲ್ಲಿ 100ಸ್ಥಾನಕ್ಕೆ ಜಿಗಿದ ಭಾರತ

By Sachhidananda Acharya
|

ನವದೆಹಲಿ, ನವೆಂಬರ್ 1: ವಿಶ್ವ ಬ್ಯಾಂಕ್ ಪ್ರಕಟಿಸಿರುವ 'ಈಸ್ ಆಫ್ ಡೂಯಿಂಗ್ ಬಿಸಿನೆಸ್' ಸೂಚ್ಯಂಕದಲ್ಲಿ ಭಾರತ 30ಸ್ಥಾನ ಮೇಲಕ್ಕೇರಿ 100ನೇ ಸ್ಥಾನದಲ್ಲೇ ನೆಲೆನಿಂತಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟಕ್ಕೆ ಭಾರತದ ಸೂಚ್ಯಂಕ ಮೇಲಕ್ಕೇರಿದ್ದು ಮಾತ್ರವಲ್ಲದೆ ಐತಿಹಾಸಿಕವಾಗಿ 100ನೇ ಸ್ಥಾನ ತಲುಪಿದೆ.

ಜೇಬಿನ ತುಟಿ ಕಚ್ಚುವಷ್ಟು ತುಟ್ಟಿಯಾಗಲಿದೆ ನವೆಂಬರ್ ತಿಂಗಳು, ಏಕೆ?

ತೆರಿಗೆ ಪದ್ಧತಿ ಸುಧಾರಣೆ, ಸಂಕೀರ್ಣ ಪರವಾನಿಗೆ ಪದ್ಧತಿಯ ನಿರ್ಮೂಲನೆ, ಹೂಡಿಕೆದಾರರ ರಕ್ಷಣೆಗೆ ಕ್ರಮ ಮತ್ತು ದಿವಾಳಿತನಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಯಲ್ಲಿನ ಸುಧಾರಣೆಯಿಂದ ಭಾರತದಲ್ಲಿ ಉತ್ತಮ ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣವಾಗಿದೆ ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯಪಟ್ಟಿದೆ.

ಅಪನಗದೀಕರಣ ಮತ್ತು ಜಿಎಸ್ಟಿ ಜಾರಿಯಲ್ಲಿ ಗೊಂದಲಗಳಾಗಿವೆ ಎಂಬ ಅಪಸ್ವರಗಳ ಮಧ್ಯೆ ಈ ರ‍್ಯಾಂಕಿಂಗ್‌ ಹೊರ ಬಿದ್ದಿದ್ದು ನರೇಂದ್ರ ಮೋದಿ ಸರಕಾರವನ್ನು ತುಸು ನಿರಾಳವಾಗಿಸಿದೆ.

ಉದ್ಯೋಗ ಸೃಷ್ಟಿಸುವ ವಿಚಾರದಲ್ಲಿ 2003ರಿಂದ ತೆಗೆದುಕೊಂಡ 37 ಸುಧಾರಣಾ ಕ್ರಮಗಳಿಗೆ ಹೋಲಿಸಿದರೆ ಅದರ ಅರ್ಧದಷ್ಟು ಕ್ರಮಗಳನ್ನು ಕಳೆದ 4 ವರ್ಷಗಳಲ್ಲಿ ತೆಗೆದುಕೊಳ್ಳಲಾಗಿದೆ ಎಂದು 'ಡೂಯಿಂಗ್ ಬಿಸಿನೆಸ್ 2018'ರ ವರದಿ ಹೇಳಿದೆ.

ಭಾರತದ ರ‍್ಯಾಂಕಿಂಗ್‌ ನಲ್ಲಿ ಪ್ರಗತಿಯಾಗಿದ್ದರೂ ಉದ್ಯಮದ ಆರಂಭ, ಒಪ್ಪಂದಗಳ ಜಾರಿ ಮತ್ತು ನಿರ್ಮಾಣಕ್ಕೆ ನೀಡುವ ಪರವಾನಿಗೆ ವಿಚಾರದಲ್ಲಿ ಇನ್ನೂ ಭಾರತದಲ್ಲಿ ನಿಧಾನಗತಿಯ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ವರದಿ ಬೆಟ್ಟು ಮಾಡಿದೆ.

ಇನ್ನು ಭಾರತದ ರ‍್ಯಾಂಕಿಂಗ್‌ನಲ್ಲಿ ಪ್ರಗತಿಯಾಗಿದ್ದರೆ ಪ್ರತಿಸ್ಪರ್ಧಿ ಚೀನಾದ ರ‍್ಯಾಂಕಿಂಗ್‌ 78ರಲ್ಲೇ ತಟಸ್ಥವಾಗಿದೆ.

"ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಈಸ್ ಆಫ್ ಡೂಯಿಂಗ್ ಬಿಸಿನೆಸ್ ರ‍್ಯಾಂಕಿಂಗ್‌ನಲ್ಲಿ ಕಂಡಿರುವ ಐತಿಹಾಸಿಕ ಜಿಗಿತ ಟೀಂ ಇಂಡಿಯಾದ ಸಮಗ್ರ ಹಾಗೂ ಬಹು ಆಯಾಮದ ಸುಧಾರಣೆಗಳ ಫಲ," ಎಂದು ಹೇಳಿದ್ದಾರೆ.

English summary
India has jumped 30 places to rank 100th in the World Bank's ease of doing business ranking, helped by a slew of reforms in taxation, licensing, investor protection and bankruptcy resolution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more