ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತವು ಬೆಳವಣಿಗೆಯ ಬೃಹತ್‌ ಮಾರುಕಟ್ಟೆಯಾಗಿದೆ: ಐಕಿಯಾ ಸಿಇಒ

|
Google Oneindia Kannada News

ಬೆಂಗಳೂರು, ಜೂ. 22: ಬುಧವಾರ ನಾಗಸಂದ್ರದಲ್ಲಿ ಜನಪ್ರಿಯ ಗೃಹಪಯೋಗಿ ವಸ್ತುಗಳ ಮಾರಾಟ ಮಳಿಗೆ ಐಕಿಯಾ ಉದ್ಘಾಟನೆಗೊಂಡಿದೆ.

ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆದಿರುವ ಸ್ವೀಡಿಷ್ ಗೃಹೋಪಕರಣಗಳ ಮಳಿಗೆ ಐಕಿಯಾ, ಕರ್ನಾಟಕದಲ್ಲಿ 3,000 ಕೋಟಿ ರೂಪಾಯಿ ಹೂಡಿಕೆ ಮಾಡಲು ಮತ್ತು 2030ರ ವೇಳೆಗೆ ರಾಜ್ಯದಲ್ಲಿ ಸುಮಾರು 10,000 ಜನರಿಗೆ ಉದ್ಯೋಗ ನೀಡಲು ಯೋಜನೆ ಹಾಕಿಕೊಂಡಿದೆ.

ಬೆಂಗಳೂರಿನಲ್ಲಿ IKEA ಮೊದಲ ಮಾರಾಟ ಮಳಿಗೆ : ಜೂನ್ 22ಕ್ಕೆ ಆರಂಭಬೆಂಗಳೂರಿನಲ್ಲಿ IKEA ಮೊದಲ ಮಾರಾಟ ಮಳಿಗೆ : ಜೂನ್ 22ಕ್ಕೆ ಆರಂಭ

ಸುಮಾರು 12.2 ಎಕರೆಗಳಲ್ಲಿ ನಾಗಸಂದ್ರದಲ್ಲಿರುವ 4,60,000-ಚದರ ಅಡಿ ಮಳಿಗೆ ಐಕಿಯಾ 7,000ಕ್ಕೂ ಹೆಚ್ಚು ಪೀಠೋಪಕರಣಗಳನ್ನು ಸಂಗ್ರಹವನ್ನು ಹೊಂದಿದೆ. ಸ್ಮಾಲ್ಯಾಂಡ್ ಎಂದು ಕರೆಯಲ್ಪಡುವ ದೊಡ್ಡ ಮಕ್ಕಳ ಆಟದ ಪ್ರದೇಶ ಮತ್ತು 1,000 ಆಸನಗಳ ರೆಸ್ಟೋರೆಂಟ್ ಮತ್ತು ಬಿಸ್ಟ್ರೋ ಇದರ ವೈಶಿಷ್ಟ್ಯವಾಗಿದೆ.

India is Huge Growth Market Says IKEA CEO

2020ರಲ್ಲಿ ತೆರೆಯಬೇಕಿದ್ದ ಐಕಿಯಾ ಅಂಗಡಿಯು ನಾಗಸಂದ್ರ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕವಾಗಿ ಇದ್ದು, ಕೋವಿಡ್‌ ಸಾಂಕ್ರಮಿಕ ರೋಗವು ಅದರ ಯೋಜನೆಯನ್ನು ವಿಳಂಬಗೊಳಿಸಿತು. ಇಂಗ್ಕಾ ಗ್ರೂಪ್-ಮಾಲೀಕತ್ವದ ಐಕಿಯಾ ಮೊದಲು ಬೆಂಗಳೂರು ನಗರದಲ್ಲಿ ತನ್ನ ಇ ಕಾಮರ್ಸ್ ವಿತರಣಾ ವ್ಯವಸ್ಥೆಯನ್ನು ಅನ್ನು ಮಾತ್ರ ಪ್ರಾರಂಭ ಮಾಡಿತ್ತು.

IKEA in Bengaluru : ಬುಧವಾರ ಬೆಂಗಳೂರಿನಲ್ಲಿ ಐಕಿಯಾ ಸ್ಟೋರ್ ಉದ್ಘಾಟನೆ IKEA in Bengaluru : ಬುಧವಾರ ಬೆಂಗಳೂರಿನಲ್ಲಿ ಐಕಿಯಾ ಸ್ಟೋರ್ ಉದ್ಘಾಟನೆ

"ಕೋವಿಡ್‌ ಕಾರಣದಿಂದ ಬಹುಪಾಲು ಜನರು ಮನೆಯಿಂದ ಕೆಲಸಗಳನ್ನು ನಿರ್ವಹಿಸುತ್ತಿದ್ದು, ಉತ್ತಮ ನಿದ್ರೆಯನ್ನು ಮಾಡಲು ತಮ್ಮ ಮಲಗುವ ಕೋಣೆಗೆ ಕೆಲವು ಅಗತ್ಯವಾದ ವಸ್ತುಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ನಮ್ಮ ವಸ್ತುಗಳಿಗೆ ಬೇಡಿಕೆಗಳು ಹೆಚ್ಚಾಗಿವೆ" ಎಂದು ಐಕಿಯಾ ಸಿಇಒ ಸುಸಾನೆ ಪುಲ್ವೆರೆರ್ ತಿಳಿಸಿದ್ದಾರೆ.

India is Huge Growth Market Says IKEA CEO

"ನಾವು ಜನರ ಬೇಡಿಕೆಗಳನ್ನು ನಮ್ಮ ಮಾರುಕಟ್ಟೆಯಾಗಿ ನೋಡುತ್ತಿದ್ದೇವೆ. ಹೀಗಾಗಿ ಇದನ್ನು ಆರಂಭಿಕ ಹಂತದಲ್ಲಿ ಶುರು ಮಾಡಿದ್ದೇವೆ. ಐಕಿಯಾದ ಮಾತೃಸಂಸ್ಥೆ ಇಂಗ್ಕಾದ ಇಟ್ಟು ಆದಾಯವನ್ನು ನೋಡಿದರೆ ಇದು ಚಿಕ್ಕ ಪ್ರಮಾಣದಲ್ಲಿ ಇದೆ. ಹಾಗಾಗಿ ನಾವು ದೀರ್ಘಾವಧಿ ಹೂಡಿಕೆ ಮಾಡಲು ಮುಂದೆ ಬಂದಿದ್ದೇವೆ" ಎಂದು ಹೇಳಿದ್ದಾರೆ.

"ಕೋವಿಡ್‌ ಬಳಿಕ ಪ್ರತಿಯೊಬ್ಬರೂ ಬೆಲೆ ಏರಿಕೆ ಮತ್ತು ಕಚ್ಚಾ ವಸ್ತುಗಳು ಮತ್ತು ಸಾರಿಗೆ ಅಡಚಣೆಯನ್ನು ಅನುಭವಿಸಿದ್ದಾರೆ. ಅದಕ್ಕೆ ನಾವು ಕೂಡ ಹೊರತಲ್ಲ. ಆದ್ದರಿಂದ ನಾವು ಅದನ್ನು ನೀಗಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ಜನರ ವೆಚ್ಚವನ್ನು ಉಳಿಸಲು ಪ್ರಯತ್ನಿಸುತ್ತಿದ್ದೇವೆ ಹಾಗೂ ಬೆಲೆಗಳನ್ನು ಸರಿ ಹೊಂದಿಸುತ್ತಿದ್ದೇವೆ" ಎಂದು ಐಕಿಯಾ ಸಿಇಒ ಸುಸಾನೆ ಪುಲ್ವೆರೆರ್ ಹೇಳಿದ್ದಾರೆ.

"ನಾವು ಇಂದಿನ ದಿನಗಳಲ್ಲಿ ನಮ್ಮ ವ್ಯವಹಾರದಲ್ಲಿ ತುಂಬಾ ಚುರುಕಾಗಿರಬೇಕಾಗುತ್ತದೆ. ಮಾರುಕಟ್ಟೆಯ ಪರಿಸ್ಥಿತಿಗಳು ಹೇಗೆ ಬದಲಾಗಬಹುದು ಎಂಬುದರ ಕುರಿತು ನಾವು ಸಾಕಷ್ಟು ಕಲಿತಿದ್ದೇವೆ. ಆದ್ದರಿಂದ ಇದು ಅವಲಂಬನೆಗಳನ್ನು ಹೊಂದಿದೆ. ಹಾಗಾಗಿ, ಎಲ್ಲೋ ಒಂದು ಘಟನೆ ನಡೆದರೆ, ಅದರ ಪರಿಣಾಮವು ಇತರ ಭೌಗೋಳಿಕ ಪ್ರದೇಶಗಳಲ್ಲೂ ಕೂಡ ಈಗ ಕಂಡುಬರುತ್ತದೆ. ಹಾಗಾಗಿ ನಾವು ಸನ್ನದ್ಧವಾಗಿದ್ದೇವೆ" ಎಂದು ಅವರು ಹೇಳಿದರು.

"ಕೋವಿಡ್‌ ಸಾಂಕ್ರಮಿಕವು ಬಹಳಷ್ಟು ಬದಲಾವಣೆಗಳನ್ನು ಬರುವಂತೆ ಮಾಡಿದೆ. ಇದು ನಿಮ್ಮ ಏಕಾಂತತೆ ಹಾಗೂ ಮನೆಯಲ್ಲಿ ಮಕ್ಕಳ ಅಧ್ಯಯನ ವಿಚಾರದಲ್ಲಿ ಅವರ ಅಧ್ಯಯನಕ್ಕೆ ಬೇಕಾದ ಸ್ಥಳವನ್ನು ಅದಕ್ಕೆ ಅಗತ್ಯವಾದ ಸೌಕರ್ಯದ ವಸ್ತುಗಳನ್ನು ಹೊಂದಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಾವು ಆಲೋಚನೆ ನಡೆಸಿದ್ದೇವೆ" ಎಂದು ಐಕಿಯಾ ವಿನ್ಯಾಸಗಾರ ಎರಿಕ್ ಜಾನ್ ಮಿಡೆಲ್ಹೋವನ್ ತಿಳಿಸಿದ್ದಾರೆ.

Recommended Video

Narendra Modi ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಜ್ಯೋತಿಷಿಗಳು ಹೇಳಿದ್ದೇನು | *India | OneIndia Kannada

English summary
Swedish furniture store Ikea, which opened its first store in Bangalore, plans to invest Rs 3,000 crore in Karnataka and provide employment to around 10,000 people in the state by 2030.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X