ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರ್ಕಾರವನ್ನು ಟೀಕಿಸುವ ಬಗ್ಗೆ ಕಿರಣ್ ಶಾ ಮಹತ್ವದ ಹೇಳಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 02: ಬಯೋಕಾನ್ ಅಧ್ಯಕ್ಷೆ, ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮುಜಂದಾರ್ ಶಾ ಅವರು ಸೋಮವಾರದಂದು ಹಿರಿಯ ಉದ್ಯಮಿ ರಾಹುಲ್ ಬಜಾಜ್ ಪರ ನಿಂತು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವುದಕ್ಕೆ ಭಾರತದಲ್ಲಿರುವ ಅಂತಾರಾಷ್ಟ್ರೀಯ ಸಂಸ್ಥೆ(ಐಎನ್ ಸಿ)ಗಳು ಹೆದರುತ್ತವೆ ಎಂಬ ಹೇಳಿಕೆಯನ್ನು ರಾಹುಲ್ ಬಜಾಜ್ ನೀಡಿದ್ದರು.

ರಾಹುಲ್ ಬಜಾಜ್ ಅವರ ಹೇಳಿಕೆಯನ್ನು ಬೆಂಬಲಿಸಿದ ಬಯೋಕಾನ್ ಅಧ್ಯಕ್ಷೆ ಕಿರಣ್, ಭಾರತದ ಐಎನ್ ಸಿಗಳು ''ರಾಷ್ಟ್ರವಿರೋಧಿ ಅಥವಾ ಸರ್ಕಾರ ವಿರೋಧಿಯಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ ಭಾರತ ಐಎನ್ ಸಿಗಳನ್ನು ಸರ್ಕಾರವು ಪರದೇಶಿಗಳಂತೆ ಕಾಣುತ್ತಿದೆ ಎಂದು ಕಿರಣ್ ಟೀಕಿಸಿದ್ದರು. ಭಾರತದ ಆರ್ಥಿಕ ಪರಿಸ್ಥಿತಿ ಬಗ್ಗೆ ಟೀಕೆ ಟಿಪ್ಪಣಿ ಮಾಡುವಂತಿಲ್ಲ ಎಂದಿದ್ದರು.

Were neither anti-national nor anti-govt: Kiran Mazumdar Shaw on Rahul Bajajs advice to Shah

ಬಜಾಜ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈ ರೀತಿ ತಮ್ಮ ವೈಯಕ್ತಿಕ ಅಭಿಪ್ರಾಯ ಮಂಡಿಸುವುದರಿಂದ ರಾಷ್ಟ್ರೀಯ ಹಿತಾಸಕ್ತಿಗೆ ಮಾರ್ಕವಾಗಬಹುದು ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆಯೆಂಬಂತೆ ಕಿರಣ್ ಅವರು ಎನ್ಡಿಟಿವಿಯ ಚರ್ಚೆಯಲ್ಲಿ ಭಾಗವಹಿಸಿ ಮೇಲ್ಕಂಡ ಹೇಳಿಕೆ ನೀಡಿದ್ದಾರೆ.

ನಿರ್ಮಲಾ ಅವರನ್ನು ಉದ್ದೇಶಿಸಿ ಮಾತನಾಡಿ, "ಮೇಡಂ ನಾವು ರಾಷ್ಟ್ರವಿರೋಧಿ ಅಥವಾ ಸರ್ಕಾರದ ವಿರೋಧಿಗಳಲ್ಲ, ಜಾಗತಿಕ ಆರ್ಥಿಕ ಲೀಗ್ ನಲ್ಲಿ ನಮ್ಮ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಆರ್ಥಿಕತೆಯನ್ನು ನೀವು ಕೊಂಡೊಯ್ದು ಸೇರಿಸುವಲ್ಲಿ ಯಶಸ್ವಿಯಾಗಬೇಕು ಎಂದು ಬಯಸುವವರು ನಾವು. ನಾನು ರಾಜಕೀಯೇತರ ವ್ಯಕ್ತಿಯಾಗಿದ್ದು, ಸರ್ಕಾರದಿಂದ ಉತ್ತಮ ಯೋಜನೆಗಳನ್ನು ರಾಜ್ಯಮಟ್ಟದಲ್ಲೂ ನಿರೀಕ್ಷಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

English summary
Biocon Chairperson and Managing Director Kiran Mazumdar Shaw on Monday said India Inc is "neither anti-national nor anti-government",
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X