ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಯಾವ್ಯಾವ ಕಂಪನಿಗಳಿವೆ?

|
Google Oneindia Kannada News

ವಾಷಿಂಗ್ಟನ್, ಮೇ. 7: ಭಾರತದ 56 ಕಂಪನಿಗಳು ಫೋರ್ಬ್ಸ್ ಬಿಡುಗಡೆ ಮಾಡಿರುವ ವಿಶ್ವದ 2,000 ಅತಿ ದೊಡ್ಡ ಕಂಪನಿಗಳ ಪಟ್ಟಿಯಲ್ಲ ಸ್ಥಾನ ಪಡೆದುಕೊಂಡಿದೆ. ಮುಖೇಶ್ ಅಂಬಾನಿ ಒಡೆತನದ ರಿಲಯನಸ್ಸ್ ಇಂಡಸ್ಟ್ರೀಸ್ 142 ನೇ ಸ್ಥಾನ ಪಡೆದುಕೊಂಡಿದ್ದು ಭಾರತದ ಉಳಿದೆಲ್ಲ ಕಂಪನಿಗಳಿಗಿಂತ ಮುಂದೆ ಇದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶ್ವದ 152ನೇ ದೊಡ್ಡ ಕಂಪನಿಯಾಗಿ ಗುರುತಿಸಿಕೊಂಡಿದೆ. ಅಲ್ಲದೇ ರಿಲಯನ್ಸ್ ನಂತರ ಎಸ್ ಬಿಐ ಭಾರತದ ಅತಿದೊಡ್ಡ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.[ಫೋರ್ಬ್ಸ್ 100 ಪಟ್ಟಿ: ಮುಕೇಶ್ ಟಾಪ್, ಮಲ್ಯ ಔಟ್]

ambani

ಇನ್ನು ಉಳಿದಂತೆ, ಇಂಡಿಯನ್ ಆಯಿಲ್(349), ಕೋಲ್ ಇಂಡಿಯಾ( 490), ಬ್ಯಾಂಕ್ ಆಫ್ ಇಂಡಿಯಾ(982), ಗೈಲ್ ಲಿ.(1,018), ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿ.(1,383), ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ(1,432), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ( 1,663), ಇಂಡಿಯನ್ ಓವರ್​ಸಿಸ್ ಬ್ಯಾಂಕ್(1,711) ಹಾಗೂ ಇಂಡಿಯನ್ ಬ್ಯಾಂಕ್(1,894) ಗಳು ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡುವೆ.

ಕಂಪನಿಯ ಮಾರಾಟ, ಲಾಭ, ಆಸ್ತಿ ಹಾಗೂ ಮಾರುಕಟ್ಟೆ ಮೌಲ್ಯ ಮತ್ತು ಬಂಡವಾಳದ ಆಧಾರದ ಮೇಲೆ ಶ್ರೇಯಾಂಕ ನೀಡಲಾಗಿದೆ. ಅಮೇರಿಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೇ, ಚೀನಾ, ಜಪಾನ್, ಬ್ರಿಟನ್, ದಕ್ಷಿಣ ಕೋರಿಯಾ ನಂತರದ ಸ್ಥಾನ ಪಡೆದುಕೊಂಡಿವೆ. ಏಷ್ಯಾ ಖಂಡದಲ್ಲಿ ಚೀನಾ, ಜಪಾನ್ ನಂತರದ ಸ್ಥಾನವನ್ನು ಭಾರತ ಪಡೆದುಕೊಂಡಿದೆ.[ಮೋದಿ ಫೋರ್ಬ್ಸ್ ಪಟ್ಟಿ ಸೇರಿದ್ದರ ಮಹತ್ವವೇನು?]

ಸಾಮಾಜಿಕ ಜಾಲತಾಣ ಫೇಸ್ ಬುಕ್ ಪಟ್ಟಿಯಲ್ಲಿ 121 ನೇ ಸ್ಥಾನ ಪಡೆದುಕೊಂಡಿದೆ. ಏಕಾಏಕಿ 200 ಕಂಪನಿಗಳನ್ನು ಹಿಂದಿಕ್ಕಿರುವ ಫೇಸ್ ಬುಕ್ ಅಗ್ರ ಕ್ರಮಾಂಕದಲ್ಲಿ ಕಾಣಿಸಿಕೊಂಡಿದೆ.

English summary
India is home to 56 of the world's 2000 largest and most powerful public companies, according to the Forbes's annual list which is topped by the US with its share of 579 companies. Mukesh Ambani-led Reliance Industries leads the pack of 56 Indian companies in the 2015 Forbes 'Global 2000' list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X