2020ರ ವೇಳೆಗೆ ದೇಶದಲ್ಲಿನ ಚಿನ್ನದ ಬೇಡಿಕೆ 950 ಟನ್ ಗೆ ಏರಿಕೆ!

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 8: ಆರ್ಥಿಕ ಬೆಳವಣಿಗೆ ಹಾಗೂ ಪಾರದರ್ಶಕತೆ ದೇಶದ ಚಿನ್ನದ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೇಡಿಕೆಯನ್ನು 2020ರ ವೇಳೆಗೆ 950 ಟನ್ ವರೆಗೆ ಹೆಚ್ಚಿಸಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿಯಲ್ಲಿ ಮಂಗಳವಾರ ಹೇಳಿದೆ. ಕಳೆದ ಕೆಲಸ ಸಮಯದಿಂದ ಚಿನ್ನದ ಬೇಡಿಕೆಯಲ್ಲಿ ಇಳಿಕೆಯಾಗಿತ್ತು.

ಚಿನ್ನದ ಮೇಲೆ ಹಿಡಿತ ತರಬೇಕೆಂಬ ಪ್ರಯತ್ನ ಕೂಡ ಸಫಲವಾಗಲಿಲ್ಲ. ಏಕೆಂದರೆ ಸಮಾಜದಲ್ಲಿ ಹಳದಿ ಲೋಹದ ಬಗ್ಗೆ ಇರುವ ಪ್ರೀತಿ ಕಡಿಮೆ ಮಾಡುವುದು ಅಷ್ಟು ಸಲೀಸಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. 2017ರಲ್ಲಿ ಗ್ರಾಹಕರು 650ರಿಂದ 750 ಟನ್ ಚಿನ್ನ ಖರೀದಿಸುವ ಸಾಧ್ಯತೆ ಇದೆ.[2 ಲಕ್ಷ ರುಪಾಯಿ ಮೇಲಿನ ಆಭರಣದ ನಗದು ಖರೀದಿಗೆ ಶೇ 1ರಷ್ಟು ತೆರಿಗೆ]

Gold

ಆರ್ಥಿಕ ಬೆಳವಣಿಗೆ ಹಾಗೂ ಪಾರದರ್ಶಕತೆ ಕಾರಣಕ್ಕೆ ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ, 2020ರ ವೇಳೆಗೆ ಭಾರತೀಯ ಗ್ರಾಹಕರು 850ರಿಂದ 950 ಟನ್ ಚಿನ್ನ ಖರೀದಿಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಸಮೀಕ್ಷೆಯೊಂದರ ಪ್ರಕಾರ, ನೋಟು ನಿಷೇಧದ ನಂತರ ಜನರು ಚಿನ್ನದ ಮೇಲಿನ ಹೂಡಿಕೆಯೆಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರಂತೆ.

ಸಮಯ ಕಳೆದಂತೆ ಗ್ರಾಹಕರು ನಗದು ವ್ಯವಹಾರದಿಂದ ಡಿಜಿಟಲ್ ವ್ಯವಹಾರದ ಕಡೆಗೆ ಸಾಗುತ್ತಾರೆ. ಇದರಿಂದ ಸಂಘಟಿತ ವ್ಯಾಪಾರಸ್ಥರಿಗೆ ಹೆಚ್ಚು ಅನುಕೂಲವಾಗಲಿದೆ. ಇದರಿಂದ ಪಾರದರ್ಶಕತೆ ಬರುತ್ತದೆ. ಚಿನ್ನದ ಗುಣಮಟ್ಟದಲ್ಲಿ ವಂಚನೆ ಮಾಡುವುದು ಕಡಿಮೆಯಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Economic growth and greater transparency within the country’s gold market will boost demand for the yellow metal up to 950 tonnes level by 2020, World Gold Council said in a report on Tuesday.
Please Wait while comments are loading...