ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಜಿಡಿಪಿ ಶೇ. 8.6ಕ್ಕೆ ಕುಸಿಯುವ ಸಾಧ್ಯತೆ, ಹಣಕಾಸಿನ ಉತ್ತೇಜನ ಅಗತ್ಯವಿದೆ : USB ಸೆಕ್ಯುರಿಟೀಸ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ 8.6ಕ್ಕೆ ಸಂಕುಚಿತಗೊಳ್ಳಬಹುದು ಎಂದು ಸ್ವಿಸ್ ಬ್ರೋಕರೇಜ್ ಸಂಸ್ಥೆ ಯುಬಿಎಸ್ ಸೆಕ್ಯುರಿಟೀಸ್ ಹೇಳಿದೆ.

ಇದು ತನ್ನ ಹಿಂದಿನ ಮುನ್ಸೂಚನೆಯ ಶೇಕಡಾ 5.8ಕ್ಕೆ ಹೋಲಿಸಿದರೆ ತನ್ನ ಅಂದಾಜಿನ ದರವನ್ನು ಪರಿಷ್ಕರಿಸಲು ಕಾರಣ ಸರ್ಕಾರದ'' ಸಾಧಾರಣ'' ಪ್ರತಿಕ್ರಿಯೆಯಾಗಿದೆ ಎಂದು ಉಲ್ಲೇಖಿಸಿದೆ.

ಕೇಂದ್ರದ ಕೊವಿಡ್ ನಿರ್ವಹಣೆ ಭಾರತದ ಜಿಡಿಪಿಯನ್ನು ಪ್ರಪಾತಕ್ಕೆ ತಳ್ಳಿದೆ :ರಾಹುಲ್ಕೇಂದ್ರದ ಕೊವಿಡ್ ನಿರ್ವಹಣೆ ಭಾರತದ ಜಿಡಿಪಿಯನ್ನು ಪ್ರಪಾತಕ್ಕೆ ತಳ್ಳಿದೆ :ರಾಹುಲ್

ದೇಶದ ಸಂಭಾವ್ಯ ಬೆಳವಣಿಗೆಯ ದರವು ಅದರ ಅಂದಾಜಿನ ಪ್ರಕಾರ ಶೇಕಡಾ 5.75-6.25 ಕ್ಕೆ ಇಳಿದಿದೆ ಎಂದು ಅದು ಹೇಳಿದೆ. ಬೆಳವಣಿಗೆಯ ದರ ಇಳಿಕೆಯು ಸರ್ಕಾರದ ದುರ್ಬಲ ಪ್ರತಿಕ್ರಿಯೆ ಸೇರಿದಂತೆ ಪ್ರಮುಖ ಅಂಶಗಳಿಂದ ಪ್ರೇರಿತವಾಗಿದೆ.

India GDP To Contract By 8.6 Percent In FY21: USB Securities

''ಹೆಚ್ಚಿನ ಆವರ್ತನ ದತ್ತಾಂಶದಲ್ಲಿ ಕೆಲವು ಸುಧಾರಣೆಗಳನ್ನು ಗಮನಿಸಲಾಗುತ್ತಿದೆ, ಆದರೆ ಅದರಲ್ಲಿ ಹೆಚ್ಚಿನವು ಬೇಡಿಕೆಯಾಗಿದೆ ಮತ್ತು ಸೆಪ್ಟೆಂಬರ್ ತ್ರೈಮಾಸಿಕದ ನಂತರ ಆರ್ಥಿಕ ಚೇತರಿಕೆ ಕ್ರಮೇಣ ಆಗಲಿದೆ'' ಎಂದು ಯುಎಸ್‌ಬಿ ಸೆಕ್ಯುರಿಟೀಸ್ ಮುಖ್ಯ ಅರ್ಥಶಾಸ್ತ್ರಜ್ಞ ತನ್ವೀ ಗುಪ್ತಾ ಜೈನ್ ಸುದ್ದಿಗಾರರಿಗೆ ತಿಳಿಸಿದರು.

Recommended Video

RCB ಈ ಸಲ ಕಪ್ ಗೆದ್ದೇ ಗೆಲ್ತಾರೆ , ಯಾಕೆ ಗೊತ್ತಾ | Oneindia Kannada

ಕೋವಿಡ್-19 ಸಾಂಕ್ರಾಮಿಕ ಪ್ರೇರಿತ ಲಾಕ್‌ಡೌನ್ ಆರ್ಥಿಕ ಚಟುವಟಿಕೆಯ ಕುಸಿತಕ್ಕೆ ಕಾರಣವಾಗಿದ್ದರಿಂದ ಜೂನ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಸುಮಾರು ನಾಲ್ಕನೇ ಒಂದು ಭಾಗದಷ್ಟು ಕುಗ್ಗಿದೆ ಎಂದು ಗಮನಿಸಬಹುದು. ಕೋವಿಡ್-19 ಸೋಂಕುಗಳು ಹೆಚ್ಚುತ್ತಲೇ ಇದ್ದು, ಭಾರತವನ್ನು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಪೀಡಿತ ರಾಷ್ಟ್ರವನ್ನಾಗಿ ಮಾಡಿದೆ.

English summary
Swiss brokerage USB Securities said it forecasts a GDP contraction of 8.6 per cent in FY21 as against its earlier prediction of 5.8 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X