ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 7.5ರಷ್ಟು ಕುಸಿತ

|
Google Oneindia Kannada News

ನವದೆಹಲಿ, ನವೆಂಬರ್ 27: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದಾಖಲೆಯ ಕುಸಿತದ ನಂತರ ಭಾರತದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಬೆಳವಣಿಗೆಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 7.5ರಷ್ಟು ಕುಗ್ಗಿದೆ. ಈ ಮೂಲಕ ಭಾರತವು ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದೆ.

ತಾಂತ್ರಿಕವಾಗಿ ದೇಶದ ಜಿಡಿಪಿ ದರವು ಸತತ ಎರಡು ತ್ರೈಮಾಸಿಕದಲ್ಲಿ ಋಣಾತ್ಮಕವಾಗಿದ್ದರೆ ಆರ್ಥಿಕತೆಯು ಹಿಂಜರಿತದಲ್ಲಿದೆ ಎಂದು ಹೇಳಲಾಗುತ್ತದೆ. ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರವು ಶೇ. 23.9 ರಷ್ಟು ದಾಖಲೆಯ ಕುಸಿತಕ್ಕೆ ಸಾಕ್ಷಿಯಾಗಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರೇರಿತ ಲಾಕ್‌ಡೌನ್ ಪರಿಣಾಮವಾಗಿ ಜಿಡಿಪಿಯು ದಶಕಗಳಲ್ಲೇ ಭಾರೀ ಇಳಿಕೆಗೆ ಕಾರಣವಾಗಿತ್ತು.

 India GDP Q2 Data: Economic growth slips -7.5% in Q2

ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ 7.5% ಕುಸಿತ ದಾಖಲಾಗಿದೆ. ಆದರೆ ಇದು ರೇಟಿಂಗ್ ಏಜೆನ್ಸಿಗಳು ಸೇರಿದಂತೆ ಆರ್‌ಬಿಐ ಅಂದಾಜುಗಳಿಗಿಂತಲೂ ಹೆಚ್ಚಾಗಿದೆ. ಈ ಪ್ರವೃತ್ತಿ ಮುಂದುವರಿದರೆ, ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಜಿಡಿಪಿಯ ನಷ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ದ್ವಿತೀಯ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ದರವನ್ನು ಶೇ. 8.6ಕ್ಕೆ ಕುಸಿಯಬಹುದು ಎಂದು ಅಂದಾಜಿಸಲಾಗಿತ್ತು.

ಪ್ರಸಕ್ತ 2020-21ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ 33.14 ಲಕ್ಷ ಕೋಟಿ ರೂ. ಆಗಿದೆ. ಆದರೆ ಕಳೆದ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಈ ಜಿಡಿಪಿ 35.84 ಲಕ್ಷ ಕೋಟಿ ರೂ. ಹೀಗಾಗಿ ಇದು ಏಳೂವರೆ ಶೇಕಡಾ ಕುಸಿತವನ್ನು ದಾಖಲಿಸಿದೆ. ಕಳೆದ ವರ್ಷ ಇದೇ ಸಮಯದಲ್ಲಿ, ಜಿಡಿಪಿ ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 4.4 ರಷ್ಟು ಏರಿಕೆಯಾಗಿದೆ.

ಎಂಟು ಕೈಗಾರಿಕಾ ಬೆಳವಣಿಗೆ ದರವು ಅಕ್ಟೋಬರ್‌ನಲ್ಲಿ -2.5% ರಷ್ಟಿದ್ದು, ಸೆಪ್ಟೆಂಬರ್‌ನಲ್ಲಿ -0.1% (ಹಿಂದಿನ -0.8% ರಿಂದ ಪರಿಷ್ಕರಿಸಲಾಗಿದೆ)ರಿಂದ ಇಳಿಕೆಯಾಗಿದೆ.

ಜಿಡಿಪಿಯಲ್ಲಿ ಐಬಿಐ ಸೇರಿದಂತೆ ಹಲವಾರು ರೇಟಿಂಗ್ ಏಜೆನ್ಸಿಗಳು ಅಂದಾಜು ಜಿಡಿಪಿ ದರವನ್ನು ಬಿಡುಗಡೆ ಮಾಡಿವೆ. ಜಿಡಿಪಿ ಶೇಕಡಾ 8.6 ರಷ್ಟು ಕುಸಿಯುತ್ತದೆ ಎಂದು ಆರ್‌ಬಿಐ ಮುನ್ಸೂಚನೆ ನೀಡಿತ್ತು. ಮೂಡಿಸ್ ಶೇಕಡಾ 10.6, ಕೇರ್ ರೇಟಿಂಗ್ ಶೇ 9.9, ಕ್ರಿಸಿಲ್ ಶೇ 12, ಐಸಿಆರ್‌ಎ ಶೇ. 9.5 ಮತ್ತು ಎಸ್‌ಬಿಐ ರಿಸರ್ಚ್ ಶೇ .10.7 ರಷ್ಟು ಕುಸಿತವನ್ನು ಮುನ್ಸೂಚನೆ ನೀಡಿದೆ. ಉತ್ತಮ ಸಾಧನೆ ನಿರೀಕ್ಷಿಸಲಾಗಿದ್ದ ಕ್ಷೇತ್ರಗಳಲ್ಲಿ ಕೃಷಿ, ಬ್ಯಾಂಕಿಂಗ್ ಮತ್ತು ಹಣಕಾಸು ಮತ್ತು ಸೇವಾ ಕ್ಷೇತ್ರಗಳು ಸೇರಿವೆ.

English summary
India's gross domestic product (GDP) contracted -7.5 per cent in the Second quarter of financial year 2020-21, according to the government data released on Friday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X