ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 23.9 ರಷ್ಟು ಕುಸಿತ: 24 ವರ್ಷಗಳಲ್ಲಿ ಅತ್ಯಂತ ಕಳಪೆ

|
Google Oneindia Kannada News

ನವದೆಹಲಿ, ಆಗಸ್ಟ್‌ 31: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ರಾಷ್ಟ್ರಾದ್ಯಂತ ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಏಪ್ರಿಲ್‌-ಜೂನ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ತೀವ್ರ ಕುಸಿದಿದೆ. ಇದು 24 ವರ್ಷಗಳಲ್ಲಿ ಅತ್ಯಂತ ಕಳಪೆ ಸಾಧನೆಯಾಗಿದೆ.

ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಸೋಮವಾರ ಬಿಡುಗಡೆ ಮಾಡಿದ ತಾತ್ಕಾಲಿಕ ಅಂದಾಜಿನ ಪ್ರಕಾರ ಜಿಡಿಪಿ ಇಳಿಕೆ ಶೇ. 23.9 ರಷ್ಟು ತೀವ್ರವಾಗಿದೆ.

ಕೊರೊನಾ ಪರಿಣಾಮ: ಆರ್ಥಿಕ ಗುರಿ ಸಾಧನೆ ಕಷ್ಟಸಾಧ್ಯಕೊರೊನಾ ಪರಿಣಾಮ: ಆರ್ಥಿಕ ಗುರಿ ಸಾಧನೆ ಕಷ್ಟಸಾಧ್ಯ

ಬ್ಲೂಮ್‌ಬರ್ಗ್ ಸಮೀಕ್ಷೆ ನಡೆಸಿದ ಅರ್ಥಶಾಸ್ತ್ರಜ್ಞರ ಪ್ರಕಾರ, ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇಕಡಾ 18 ರಷ್ಟು ಕುಸಿದಿದೆ ಎಂದು ಅಂದಾಜಿಸಲಾಗಿದೆ. ಈ ತಿಂಗಳ ಆರಂಭದಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಇಕೋವ್ರಾಪ್ ವರದಿಯು ದೇಶದ ಜಿಡಿಪಿ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 16.5 ರಷ್ಟು ಸಂಕುಚಿತಗೊಳ್ಳಲಿದೆ ಎಂದು ಹೇಳಿದೆ.

India GDP Q1 Data: Economic growth slips 23.9% in Q1 Due to Covid-19

ಜೂನ್ ತ್ರೈಮಾಸಿಕ ಜಿಡಿಪಿ ದತ್ತಾಂಶವು ಭಾರತೀಯ ಆರ್ಥಿಕತೆಯ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಸಂಕೋಚನವಾಗಿದೆ. ಏಕೆಂದರೆ ಮುಖ್ಯವಾಗಿ ಮಾರ್ಚ್ 25 ರಂದು ಕೇಂದ್ರ ಸರ್ಕಾರವು ಕೋವಿಡ್-19 ಸಾಂಕ್ರಾಮಿಕ ಹರಡುವಿಕೆಯನ್ನು ತಪ್ಪಿಸಲು ಸಂಪೂರ್ಣ ಲಾಕ್‌ಡೌನ್ ಘೋಷಿಸಿದ ಪರಿಣಾಮ ಹೆಚ್ಚಿನ ಉತ್ಪಾದನಾ ಮತ್ತು ಸೇವಾ ಕ್ಷೇತ್ರಗಳು ಬಂದ್ ಆಗಿತ್ತು.

2019-20ರ ಹಿಂದಿನ ಜನವರಿ-ಮಾರ್ಚ್ ತ್ರೈಮಾಸಿಕದ (ಕ್ಯೂ 4) ಜಿಡಿಪಿ ಶೇಕಡಾ 3.1 ರಷ್ಟು ಬೆಳವಣಿಗೆ ಕಂಡಿದೆ.

English summary
India's gross domestic product (GDP) contracted 23.9 per cent in the first quarter of financial year 2020-21, lowest in 24 years, according to the government data released on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X