ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಡಿಜಿಟಲ್‌ ವಹಿವಾಟಿಗೆ ಅಡ್ಡಿಯಾದ ನೆಟ್‌ವರ್ಕ್‌

|
Google Oneindia Kannada News

ಕೊರೊನಾ ಸಾಂಕ್ರಾಮಿಕ ನಂತರ ಪ್ರಪಂಚ ಬಹಳಷ್ಟು ಬದಲಾಗಿದೆ. ವರ್ಕ್‌ ಫ್ರಂ ಹೋಂ ಸಂಸ್ಕೃತಿ ಹೆಚ್ಚಾಗಿದ್ದು, ಡಿಜಿಟಲ್ ಬ್ಯಾಂಕಿಂಗ್, ಆನ್‌ಲೈನ್ ವಹಿವಾಟು ಹೆಚ್ಚಾಗಿದೆ. ಅದರಲ್ಲೂ ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಪ್ರಮಾಣ ಸಾಕಷ್ಟು ಹೆಚ್ಚಾಗಿದೆ. ಆದರೆ ಅದಕ್ಕೆ ತಕ್ಕಂತೆ ಸೇವೆ ದೊರೆಯುತ್ತಿದೆಯಾ, ಮೊಬೈಲ್ ಡೇಟಾ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆ, ನೆಟವರ್ಕ್ ಸಮಸ್ಯೆ ಕುರಿತು ನಡೆದಿರುವ ಸಮೀಕ್ಷೆ ಸಾಕಷ್ಟು ವಿಚಾರಗಳನ್ನು ಬಹಿರಂಗಪಡಿಸಿದೆ.

ಲೋಕಲ್‌ಸರ್ಕಲ್ಸ್ ಎನ್ನುವ ಖಾಸಗಿ ಸಂಸ್ಥೆ ಭಾರತದಲ್ಲಿ ಡಿಜಿಟಲ್ ವಹಿವಾಟು ಬಳಸುವ ಸಮೀಕ್ಷೆ ನಡೆಸಿದೆ. 3 ಭಾರತೀಯ ಗ್ರಾಹಕರಲ್ಲಿ ಇಬ್ಬರಿಗೆ ನೆಟ್‌ವರ್ಕ್‌ ಸಮಸ್ಯೆಯಿಂದ ಪ್ರತಿ ತಿಂಗಳು 1 ಅಥವಾ ಹೆಚ್ಚಿನ ಬಾರಿ ವಹಿವಾಟು ನಡೆಸಲು ತೊಂದರೆ ಅನುಭವಿಸುತ್ತಾರೆ ಎಂದು ಹೇಳಿದೆ.

ವಿಮಾನ ದುರಂತಕ್ಕೆ 5ಜಿ ನೆಟ್‌ವರ್ಕ್‌ ಕಾರಣವಾಗಬಹುದು: ಎಚ್ಚರಿಕೆವಿಮಾನ ದುರಂತಕ್ಕೆ 5ಜಿ ನೆಟ್‌ವರ್ಕ್‌ ಕಾರಣವಾಗಬಹುದು: ಎಚ್ಚರಿಕೆ

ಭಾರತದಲ್ಲಿ ಸ್ಮಾರ್ಟ್‌ ಫೋನ್ ಬಳಕೆ ಹೆಚ್ಚಾದಂತೆ ಇಂಟರ್ನೆಟ್ ಸಂಪರ್ಕದ ಮೇಲೂ ಅವಲಂಬನೆ ಹೆಚ್ಚಾಗುತ್ತಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮತ್ತು ನಂತರ ಮೊಬೈಲ್ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. ಇದರಲ್ಲಿ ಶೇಕಡಾ 62ರಷ್ಟು ಜನ ಪ್ರತಿ ತಿಂಗಳು 1 ಅಥವಾ ಅದಕ್ಕಿಂತ ಹೆಚ್ಚಿನ ಬಾರಿ ಮೊಬೈಲ್ ಮೂಲಕ ಬ್ಯಾಂಕಿಂಗ್ ವಹಿವಾಟು ನಡೆಸುತ್ತಿದ್ದಾರೆ ಎಂದು ಹೇಳಿದೆ.

 ದೇಶದಲ್ಲಿ ಹೆಚ್ಚಾಗಿದೆ ಇಂಟರ್ನೆಟ್ ಬಳಕೆದಾರರ ಸಂಖ್ಯೆ

ದೇಶದಲ್ಲಿ ಹೆಚ್ಚಾಗಿದೆ ಇಂಟರ್ನೆಟ್ ಬಳಕೆದಾರರ ಸಂಖ್ಯೆ

2021ರಲ್ಲಿ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 830 ಮಿಲಿಯನ್ ದಾಟಿದೆ. ಅದರಲ್ಲೂ ವೈರ್‍‌ಲೆಸ್ ಇಂಟರ್ನೆಟ್ ಡೇಟಾ ಬಳಕೆ ಪ್ರಮಾಣ 7 ಪಟ್ಟು ಹೆಚ್ಚಾಗಿದೆ. 2021-22ರ ಆರ್ಥಿಕ ಸಮೀಕ್ಷೆಯ ಪ್ರಕಾರ 2018ರಲ್ಲಿ ತಿಂಗಳಿಗೆ 1.24 ಜಿಬಿ ಇದ್ದ ಸರಾಸರಿ ಇಂಟರ್ನೆಟ್ ಡೇಟಾ ಬಳಕೆ, 2021ರ ವೇಳೆಗೆ 14.1 ಜಿಬಿ ವರೆಗೆ ಹೆಚ್ಚಾಗಿದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ದ ಮಾಹಿತಿ ಪ್ರಕಾರ, ಜಿಯೊ ಸರಾಸರಿ 4ಜಿ ಡೇಟಾ ಡೌನ್‌ಲೋಡ್‌ನಲ್ಲಿ ಶೇಕಡಾ 10ರಷ್ಟು ಏರಿಕೆ ದಾಖಲಿಸಿದೆ. ವೇಗದಲ್ಲಿ ವೊಡಾಫೋನ್ ಮತ್ತು ಏರ್‌ಟೆಲ್‌ನ ವೇಗವು ಶೇಕಡಾ 8.9 ಮತ್ತು ಶೇಕಡಾ 5.3ರಷ್ಟು ಹೆಚ್ಚಾಗಿದೆ.

5ಜಿ ಯಾವಾಗ ಶುರು, ತರಂಗಾಂತರಗಳ ಹರಾಜು ಯಾವಾಗ? ಮೋದಿ ಹೇಳಿದ್ದಿಷ್ಟು5ಜಿ ಯಾವಾಗ ಶುರು, ತರಂಗಾಂತರಗಳ ಹರಾಜು ಯಾವಾಗ? ಮೋದಿ ಹೇಳಿದ್ದಿಷ್ಟು

 ಗ್ರಾಹಕರಿಗೆ ಹೆಚ್ಚಾಯ್ತು ಹೊರೆ

ಗ್ರಾಹಕರಿಗೆ ಹೆಚ್ಚಾಯ್ತು ಹೊರೆ

ಡೇಟಾ ಬಳಕೆ ಹೆಚ್ಚಾಗುತ್ತಿದ್ದಂತೆ ಏರ್‍‌ಟೆಲ್ ಮತ್ತು ವೊಡಾಫೋನ್‌ನಂತಹ ಭಾರತದ ಟೆಲಿಕಾಂ ಆಪರೇಟರ್‍‌ಗಳು ಪ್ರೀ-ಪೇಯ್ಡ್ ಮತ್ತು ಪೋಸ್ಟ್‌-ಪೇಯ್ಡ್ ಚಂದಾದಾರರಿಗೆ ದರವನ್ನು ಹೆಚ್ಚಿಸಿತು. 2 ವರ್ಷಗಳ ನಂತರ 2021ರ ನವೆಂಬರ್‍‌ನಲ್ಲಿ ಭಾರ್ತಿ ಏರ್‍‌ಟೆಲ್, ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಜಿಯೋ ರೀಚಾರ್ಜ್ ದರವನ್ನು ಶೇಕಡಾ 20 ರಿಂದ 25 ರಷ್ಟು ಹೆಚ್ಚಿಸಿವೆ.

ಈ ವರ್ಷ ಕೂಡ ಭಾರತೀಯ ಟೆಲಿಕಾಂಗಳು ರೀಚಾರ್ಜ್‌ ದರವನ್ನು ಶೇಕಡಾ 20 ರಿಂದ 25 ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

 ಡೇಟಾ ಸಂಪರ್ಕದಲ್ಲಿ ಅಡಚಣೆ

ಡೇಟಾ ಸಂಪರ್ಕದಲ್ಲಿ ಅಡಚಣೆ

ಸಮೀಕ್ಷೆ ನಡೆಸಿದ 10 ಗ್ರಾಹಕರಲ್ಲಿ 9 ಜನ ತಮ್ಮ 3ಜಿ ಅಥವಾ 4ಜಿ ಮೊಬೈಲ್ ಡೇಟಾ ಸಂಪರ್ಕದಲ್ಲಿ ಅಡಚಣೆ ಮತ್ತು ವೇಗದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಶೇಕಡಾ 46 ರಷ್ಟು ಮೊಬೈಲ್ ಡೇಟಾ ಗ್ರಾಹಕರು ಪ್ರತಿ ದಿನ 4 ಗಂಟೆ ಅಥವಾ ಅದಕ್ಕಿಂತ ಹೆಚ್ಚಿನ ಇಂಟರ್ನೆಟ್ ಬಳಸುತ್ತಿದ್ದಾರೆ ಎಂದು ಮಾಹಿತಿ ನೀಡಿದೆ.

ದೇಶದ 352 ಜಿಲ್ಲೆಗಳಿಂದ 38,000 ಕ್ಕೂ ಹೆಚ್ಚು ಗ್ರಾಹಕರಿಂದ ಅಭಿಪ್ರಾಯ ಸ್ವೀಕರಿಸಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇಕಡಾ 65 ಪುರುಷರು ಮತ್ತು ಶೇಕಡಾ 35 ಮಹಿಳೆಯರು ಇದ್ದರು.

8,210 ಗ್ರಾಹಕರನ್ನು ಲೋಕಲ್ ಸರ್ಕಲ್ಸ್‌ನಿಂದ ಸಮೀಕ್ಷೆಗೆ ಒಳಪಡಿಸಿದೆ. ಅದರಲ್ಲಿ ಶೇಕಡಾ 48 ರಷ್ಟು ಗ್ರಾಹಕರು ತಮ್ಮ ಮೊಬೈಲ್ ಸೇವೆಗಳಿಗೆ ಕಳಪೆ ನೆಟ್‌ವರ್ಕ್ ಲಭ್ಯತೆಯಿಂದಾಗಿ ಆಗಾಗ್ಗೆ ಅಡಚಣೆ ಆಗುವ ಬಗ್ಗೆ ದೂರಿದ್ದಾರೆ.

 5ಜಿ ನೆಟವರ್ಕ್‌ ಹೊರತರಲು ಸಿದ್ಧತೆ

5ಜಿ ನೆಟವರ್ಕ್‌ ಹೊರತರಲು ಸಿದ್ಧತೆ

ಮುಂದಿನ ಪೀಳಿಗೆಯ ಟಿಲಿಕಾಂ ನೆಟ್‌ವರ್ಕ್‌ಗಾಗಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ನಡೆಯಲಿದೆ. 2022ರಲ್ಲಿ ಹರಾಜು ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಭಾಷಣದ ವೇಳೆ ತಿಳಿಸಿದ್ದರು. 2022-23ರ ವೇಳೆಗೆ ಮುಂದಿನ ಪೀಳಿಗೆಯ ನೆಟ್‌ವರ್ಕ್‌ ಸೇವೆ ನೀಡಲು ಟೆಲಿಕಾಂ ಆಪರೇಟರ್ ಸಿದ್ಧತೆ ನಡೆಸಿದ್ದಾರೆ.

ಮುಂದಿನ ಕೆಲವು ವರ್ಷಗಳಲ್ಲಿ ಗ್ರಾಹಕರಿಗೆ 5ಜಿ ನೆಟ್‌ವರ್ಕ್ ಅನ್ನು ಹೊರತರುವ ಪ್ರಯತ್ನಗಳು ನಡೆಯುತ್ತಿರುವಾಗ, 3ಜಿ, 4ಜಿ ಇಂಟರ್ನೆಟ್ ಡೇಟಾವನ್ನು ಒದಗಿಸುವ ಮೊಬೈಲ್ ಆಪರೇಟರ್ ಬಳಕೆದಾರರು ಆಯ್ಕೆ ಮಾಡಿದ ಸೇವೆಗಳನ್ನು ಸರಿಯಾಗಿ ಒದಗಿಸುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ.

ಟೆಲಿಕಾಂ ಸೇವೆಗಳನ್ನು ಹೆಚ್ಚಿಸಲು ಮಾತ್ರವಲ್ಲದೆ, ಡಿಜಿಟಲ್ ಪಾವತಿಗಳನ್ನು ಹೆಚ್ಚಿಸಲು ಮೂಲಸೌಕರ್ಯದಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಅಗತ್ಯವನ್ನು ಸಮೀಕ್ಷೆ ತೋರಿಸಿದೆ. 2021 ರಲ್ಲಿ ಭಾರತವು 35 ಶತಕೋಟಿ ಡಿಜಿಟಲ್ ವಹಿವಾಟುಗಳನ್ನು ಮಾಡಿದೆ, ವೈರ್‌ಲೆಸ್ ನೆಟ್‌ವರ್ಕ್ ಸಮಸ್ಯೆಗಳನ್ನು ಸರಿಪಡಿಸಿದರೆ ವಹಿವಾಟುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಲೋಕಲ್ ಸರ್ಕಲ್ಸ್ ಹೇಳಿದೆ.

English summary
A private company called LocalCircles has conducted a survey of digital transactions in India. 2 out of 3 Indian customers say they have trouble dealing with network issues 1 or more times per month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X