ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್‌ನಿಂದ ತೈಲ ಆಮದು ಹೆಚ್ಚಿಸಿದ ಭಾರತ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 3: ಇರಾನ್ ಮೇಲೆ ಅಮೆರಿಕವು ಮತ್ತೆ ಹೇರಿರುವ ದಿಗ್ಬಂಧನವು ನವೆಂಬರ್‌ನಿಂದ ಜಾರಿಗೆ ಬರಲಿದ್ದು, ಅದರ ನಡುವೆಯೇ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ಭಾರತವು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆ ಅನುಮತಿ ನೀಡಿದೆ.

ಅತ್ತ ಚೀನಾ ಇರಾನ್‌ನಿಂದ ತೈಲ ಆಮದನ್ನು ಮುಂದುವರಿಸಲು ಪ್ರಯತ್ನ ನಡೆಸಿದ್ದು, ಇರಾನ್‌ನ ರಾಷ್ಟ್ರೀಯ ಟ್ಯಾಂಕರ್ ಕೋ ಸಂಸ್ಥೆಯ ಹಡಗುಗಳಿಂದ ಭಾರತದತ್ತ ತೈಲವನ್ನು ತರಿಸಿಕೊಳ್ಳಲು ಭಾರತ ಮುಂದಾಗಿದೆ.

ಡಾಲರ್ ಎದುರು ರೂಪಾಯಿ ಪಾತಾಳಕ್ಕೆ; ಪೆಟ್ರೋಲ್, ಡೀಸೆಲ್ ದರ ಗಗನಕ್ಕೆಡಾಲರ್ ಎದುರು ರೂಪಾಯಿ ಪಾತಾಳಕ್ಕೆ; ಪೆಟ್ರೋಲ್, ಡೀಸೆಲ್ ದರ ಗಗನಕ್ಕೆ

ನವೆಂಬರ್‌ನಿಂದ ಅಮೆರಿಕದ ನಿರ್ಬಂಧ ಜಾರಿಗೆ ಬಂದರೂ, ಜಗತ್ತಿನ ಮಾರುಕಟ್ಟೆಯ ಬೃಹತ್ ತೈಲ ಆಮದು ದೇಶಗಳಾದ ಭಾರತ ಮತ್ತು ಚೀನಾದ ನಡೆಯಿಂದ ಈ ನಿರ್ಬಂಧ ಸಂಪೂರ್ಣವಾಗಿ ಜಾರಿಗೆ ಬರುವುದು ಅನುಮಾನ.

india continue to import oil from iran

ಇರಾನ್ ಮೇಲೆ ಹೇರಲಾಗಿದ್ದ ಆರ್ಥಿಕ ದಿಗ್ಬಂಧನಗಳನ್ನು 2015ರಲ್ಲಿ ಇರಾನ್ ಮತ್ತು ಜಗತ್ತಿನ ಆರು ಶಕ್ತಿಶಾಲಿ ದೇಶಗಳ ನಡುವಣ ಪರಮಾಣು ಒಪ್ಪಂದದ ಬಳಿಕ ತೆರವುಗೊಳಿಸಲಾಗಿತ್ತು. ಆ ದಿಗ್ಬಂಧನವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹೇರಿದ್ದಾರೆ. ಇರಾನ್ ಜತೆ ತೈಲ ವ್ಯಾಪಾರ ನಡೆಸುವವರು ಅಮೆರಿಕ ಜತೆ ವ್ಯವಹಾರ ನಡೆಸುವಂತಿಲ್ಲ ಎಂದು ಟ್ರಂಪ್ ಹೇಳಿದ್ದರು.

ಪೆಟ್ರೋಲ್ ಬೆಲೆ ಏರಿಕೆ: ಬೆಂಗಳೂರಲ್ಲಿ ಲೀ.ಗೆ 81 ರೂ!ಪೆಟ್ರೋಲ್ ಬೆಲೆ ಏರಿಕೆ: ಬೆಂಗಳೂರಲ್ಲಿ ಲೀ.ಗೆ 81 ರೂ!

ಅಮೆರಿಕದ ನಿರ್ಬಂಧವು ಜಾರಿಗೆ ಬರುವ ವೇಳೆಯಲ್ಲಿ ಇರಾನ್‌ನಿಂದ ಹೆಚ್ಚಿನ ಆಮದುದಾರರು ತಮ್ಮ ಸೇವೆಗಳನ್ನು ಸ್ಥಗಿತಗೊಳಿಸುತ್ತಿರುವ ಬೆನ್ನಲ್ಲೇ ಭಾರತ, ಆಮದು ಹೆಚ್ಚಳಕ್ಕೆ ಸಿದ್ಧತೆ ನಡೆಸಿದೆ.

ಇರಾನ್ ಹೆಚ್ಚೂಕಡಿಮೆ ಉಚಿತ ಶಿಪ್ಪಿಂಗ್ ಮತ್ತು ವಿಸ್ತೃತ ಸಾಲದ ಅವಧಿ ನೀಡುತ್ತಿದ್ದು, ಒಪೆಕ್‌ನ ಸದಸ್ಯ ದೇಶದಿಂದ ಪೆಟ್ರೋಲಿಯಂ ಖರೀದಿಸುವುದನ್ನು ಭಾರತ ಮುಂದುವರಿಸಿದೆ.

ದೇಶದಲ್ಲಿ ಮತ್ತೆ ಏರಿದ ಪೆಟ್ರೋಲ್ ಬೆಲೆ, ವಾಹನ ಮಾಲೀಕರಿಗೆ ಆತಂಕದೇಶದಲ್ಲಿ ಮತ್ತೆ ಏರಿದ ಪೆಟ್ರೋಲ್ ಬೆಲೆ, ವಾಹನ ಮಾಲೀಕರಿಗೆ ಆತಂಕ

ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಜುಲೈನಲ್ಲಿ ದಿನಕ್ಕೆ 7,68,000 ಬ್ಯಾರೆಲ್ ತೈಲ ಆಮದು ಮಾಡಿಕೊಂಡಿದೆ. 2018-19ರ ಅವಧಿಯಲ್ಲಿ ಇದನ್ನು ದುಪ್ಪಟ್ಟು ಮಾಡುವ ಉದ್ದೇಶ ಹೊಂದಿದೆ.

English summary
The central government allowed state refiners to import Iranian oil with Tehran arranging tankers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X