ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿ ಉದ್ವಿಗ್ನತೆ: ಭಾರತದ ಪೇಟಿಎಂ ಪಾಲನ್ನು ಮಾರಾಟ ಮಾಡಲು ಯೋಜಿಸುತ್ತಿದೆ ಚೀನಾ ಕಂಪನಿ?

|
Google Oneindia Kannada News

ನವದೆಹಲಿ, ಡಿಸೆಂಬರ್ 02: ಭಾರತ-ಚೀನಾ ನಡುವಿನ ಗಡಿ ಉದ್ವಿಗ್ನತೆಯು ಉಭಯ ದೇಶಗಳ ನಡುವಿನ ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಚೀನಾದ ಫಿನ್‌ಟೆಕ್ ದೈತ್ಯ ಆ್ಯಂಟ್ ಗ್ರೂಪ್ ಭಾರತೀಯ ಡಿಜಿಟಲ್ ಪಾವತಿ ಅಪ್ಲಿಕೇಶನ್ ಪೇಟಿಎಂನಲ್ಲಿನ ತನ್ನ ಶೇಕಡಾ 30ರಷ್ಟು ಪಾಲನ್ನು ಮಾರಾಟ ಮಾಡಲು ಯೋಜಿಸುತ್ತಿದೆ ಎಂದು 'ಮನಿ ಕಂಟ್ರೋಲ್' ವರದಿ ಮಾಡಿದೆ.

ಈ ವ್ಯವಹಾರದ ಕುರಿತು ತಿಳಿದಿರುವ ಜನರು ಸಂಭವನೀಯ ವಹಿವಾಟಿನ ಹಣಕಾಸಿನ ವಿವರಗಳನ್ನು ದೃಢಪಡಿಸಿಲ್ಲ ಮತ್ತು ಅಲಿಬಾಬಾ ಬೆಂಬಲಿತ ಪಾವತಿ ಗ್ರಾಹಕ ಕ್ರೆಡಿಟ್ ಬೆಹೆಮೊಥ್ ಇನ್ನೂ ಔಪಚಾರಿಕ ಮಾರಾಟ ಪ್ರಕ್ರಿಯೆಯನ್ನು ಪ್ರಾರಂಭಿಸಿಲ್ಲ ಎಂದು ಇದರ ಬಗ್ಗೆ ತಿಳಿದ ನಾಲ್ಕು ಜನರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ತನ್ನ ಬಳಕೆದಾರರಿಗೆ ಐಪಿಒ ಹೂಡಿಕೆ ಅವಕಾಶ ತೆರೆಯಲಿರುವ ಪೇಟಿಎಂತನ್ನ ಬಳಕೆದಾರರಿಗೆ ಐಪಿಒ ಹೂಡಿಕೆ ಅವಕಾಶ ತೆರೆಯಲಿರುವ ಪೇಟಿಎಂ

ಸಾಫ್ಟ್‌ಬ್ಯಾಂಕ್ ಗ್ರೂಪ್ ಕಾರ್ಪ್ ಸಹ ಬೆಂಬಲಿಸುವ ಪೇಟಿಎಂ, ಒಂದು ವರ್ಷದ ಹಿಂದೆ ತನ್ನ ಇತ್ತೀಚಿನ ಖಾಸಗಿ ನಿಧಿಸಂಗ್ರಹದ ಸುತ್ತ ಸುಮಾರು16 ಬಿಲಿಯನ್ ಡಾಲರ್‌ ಮೌಲ್ಯವನ್ನು ಹೊಂದಿತ್ತು. ಆ ಮೌಲ್ಯಮಾಪನದಲ್ಲಿ, ಭಾರತೀಯ ಸಂಸ್ಥೆಯ ಚಿಕ್ಕದಾದ ಪಾಲು ಸುಮಾರು 4.8 ಬಿಲಿಯನ್ ಡಾಲರ್‌ನಷ್ಟಿದೆ.

India-China Border Tension: Chinas Ant Considers Paytm Stake Sale; Sources

''ನಮ್ಮ ಯಾವುದೇ ಪ್ರಮುಖ ಷೇರುದಾರರೊಂದಿಗೆ ಈವರೆಗೆ ಯಾವುದೇ ಚರ್ಚೆ ಮಾಡಿಲ್ಲ ಅಥವಾ ಯಾವುದೇ ತಮ್ಮ ಪಾಲನ್ನು ಮಾರಾಟ ಮಾಡುವ ಬಗ್ಗೆ ಚರ್ಚಿಸಿಲ್ಲ" ಎಂದು ಪೇಟಿಎಂ ವಕ್ತಾರರು ಹೇಳಿದ್ದಾರೆ.

ಇತರೆ ಎರಡು ಮೂಲಗಳ ಪ್ರಕಾರ ಚೀನಾದ ಆ್ಯಂಟ್ ಗ್ರೂಪ್ ಭಾರತದ ಪೇಟಿಎಂನಲ್ಲಿ ಒಂದು ಸಣ್ಣ ಪಾಲನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದೆ.

English summary
Chinese fintech giant Ant Group is considering selling its 30% stake in Indian digital payment processor Paytm amid tensions between the two Asian countries
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X