ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಾಂಡ್ ಮೌಲ್ಯ: ಯುಎಸ್ಎ ನಂ.1, ಭಾರತ ನಂ.7

By Mahesh
|
Google Oneindia Kannada News

ನವದೆಹಲಿ, ನ.೦2: ಬ್ರಾಂಡ್ ಫೈನಾನ್ಸ್ ಸಂಸ್ಥೆಯು ತನ್ನ ವಾರ್ಷಿಕ ವರದಿಯನ್ನು ಪ್ರಕಟಿಸಿದೆ. ಜಗತ್ತಿನ ಅತ್ಯಧಿಕ ಮೌಲ್ಯದ ರಾಷ್ಟ್ರೀಯ ಬ್ರಾಂಡ್‌ಗಳ ಪಟ್ಟಿಯಲ್ಲಿ ಯುಎಸ್ಎ ಅಗ್ರಸ್ಥಾನದಲ್ಲಿದ್ದೆ. ಭಾರತ ಹಾಗೂ ಫ್ರಾನ್ಸ್ ದೇಶಗಳು ಕಳೆದ ವರ್ಷಕ್ಕಿಂತ ತಲಾ ಒಂದು ಸ್ಥಾನ ಮೇಲಕ್ಕೇರಿವೆ.

ಆರ್ಥಿಕವಾಗಿ ದಾಪುಗಾಲಿಡುತ್ತಿರುವ ಭಾರತದ ಬ್ರಾಂಡ್ ವೌಲ್ಯವು ಈ ಸಾಲಿನಲ್ಲಿ 1,373 ಕೋಟಿ ರೂ. ಡಾಲರ್‌ಗೇರಿದ್ದು, ಶೇ.32ರಷ್ಟು ಹೆಚ್ಚಳವನ್ನು ಕಂಡಿದೆ ಹಾಗೂ ವಿಶ್ವದ 7ನೇ ಅತ್ಯಧಿಕ ಬ್ರಾಂಡ್ ಮೌಲ್ಯವಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ.

ಯುಎಸ್ಎ 19.7 ಶತಕೋಟಿ ಡಾಲರ್ ಬ್ರಾಂಡ್ ಮೌಲ್ಯದೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. ಚೀನಾ ಹಾಗೂ ಜರ್ಮನಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ.

India becomes world's 7th most valued 'nation brand'; US on top

ಮುಂದಿನ ಐದು ವರ್ಷಗಳಲ್ಲಿ ಜಗತ್ತಿನ ವಿವಿಧ ದೇಶಗಳ ಬೃಹತ್ ಕಂಪೆನಿಗಳ ಎಲ್ಲಾ ಬ್ರಾಂಡ್ ಉತ್ಪನ್ನಗಳ ಅಂದಾಜು ಮಾರಾಟ ವೌಲ್ಯದ ಆಧಾರದಲ್ಲಿ ಆಯಾ ದೇಶದ 'ರಾಷ್ಟ್ರೀಯ ಬ್ರಾಂಡ್' ವೌಲ್ಯವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ವನ್ನು ಇದಕ್ಕೆ ಮಾನದಂಡವಾಗಿ ಬಳಸಿಕೊಳ್ಳಲಾಗುತ್ತದೆ.

ಮೊದಲ 5 ಸ್ಥಾನಗಳಲ್ಲಿರುವ ಎಲ್ಲಾ ದೇಶಗಳು ತಮ್ಮ ಹಿಂದಿನ ಸ್ಥಾನವನ್ನು ಉಳಿಸಿಕೊಂಡಿವೆ.ರಾಷ್ಟ್ರೀಯ ಬ್ರಾಂಡ್ ಶ್ರೇಯಾಂಕ ಪಟ್ಟಿಯಲ್ಲಿ ಬ್ರಿಟನ್ 4 ಸ್ಥಾನದಲ್ಲಿದ್ದರೆ, ಜಪಾನ್ ಹಾಗೂ ಫ್ರಾನ್ಸ್ ಕ್ರಮವಾಗಿ 5 ಹಾಗೂ 6ನೇ ಸ್ಥಾನ ಪಡೆದಿವೆ.

ಭಾರತದ 'ರಾಷ್ಟ್ರೀಯ ಬ್ರಾಂಡ್ ಮೌಲ್ಯದಲ್ಲಿ ಶೇ.32ರಷ್ಟು ಹೆಚ್ಚಳ ಕಂಡು ಬಂದಿದೆ. ಇದು ಪಟ್ಟಿಯಲ್ಲಿರುವ ಟಾಪ್ 20 ರಾಷ್ಟ್ರಗಳಲ್ಲೇ ಅತ್ಯಧಿಕವೆನಿಸಿದೆ. 6.3 ಶತಕೋಟಿ ಡಾಲರ್ ಬ್ರಾಂಡ್ ವೌಲ್ಯದ ಚೀನಾವು ದ್ವಿತೀಯ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. (ಪಿಟಿಐ)

English summary
India has moved up one position to become the world's seventh most valued 'nation brand', with an increase of 32 per cent in its brand value to $2.1 billion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X