ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿರಾರು ಕೋಟಿ ನಷ್ಟದಲ್ಲಿ ವಿಮಾನಯಾನ ಸಂಸ್ಥೆಗಳು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 4: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ವಿಮಾನಯಾನ ವಲಯವು ಒಟ್ಟಾರೆಯಾಗಿ 1.9 ಮಿಲಿಯನ್ ಡಾಲರ್ ನಷ್ಟವನ್ನು ಎದುರಿಸುವ ಸಾಧ್ಯತೆ ಇದೆ.

ಏರ್ ಇಂಡಿಯಾ ಮತ್ತು ಜೆಟ್ ಏರ್‌ವೇಸ್‌ನಂತಹ ಪೂರ್ಣಾವಧಿ ಸೇವಾ ವಿಮಾನಗಳು ಹೆಚ್ಚುತ್ತಿರುವ ವೆಚ್ಚ ಮತ್ತು ಕಡಿಮೆ ಪ್ರಯಾಣ ದರಗಳಿಂದಾಗಿ ತೀವ್ರ ನಷ್ಟಕ್ಕೆ ಸಿಲುಕಿವೆ ಎಂದು ವಿಮಾನಯಾನ ಸಲಹಾ ಸಂಸ್ಥೆ 'ಕಾಪಾ ಇಂಡಿಯಾ' ತಿಳಿಸಿದೆ.

ಆಟೋ ಪ್ರಯಾಣಕ್ಕಿಂತ ಕಡಿಮೆ ದರದಲ್ಲಿ ವಿಮಾನ ಪ್ರಯಾಣ!ಆಟೋ ಪ್ರಯಾಣಕ್ಕಿಂತ ಕಡಿಮೆ ದರದಲ್ಲಿ ವಿಮಾನ ಪ್ರಯಾಣ!

ಇಂಧನ ಬೆಲೆ ಮತ್ತು ನಿರ್ವಹಣಾ ವೆಚ್ಚವು ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ಭಾರತದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೂ ವಿಮಾನ ಸಂಸ್ಥೆಗಳು ಲಾಭಕರವಾಗಿ ನಡೆಯುತ್ತಿಲ್ಲ. ಅನೇಕ ವಿಮಾನ ಸಂಸ್ಥೆಗಳು ಸತತ ಹಿನ್ನಡೆಯನ್ನು ಎದುರಿಸಲು ಬೇಕಾದಷ್ಟು ಸಂಪನ್ಮೂಲಗಳನ್ನು ಹೊಂದಿಲ್ಲ.

430-460 ಮಿಲಿಯನ್ ಡಾಲರ್‌ ನಷ್ಟ

430-460 ಮಿಲಿಯನ್ ಡಾಲರ್‌ ನಷ್ಟ

ಜನವರಿಯಲ್ಲಿ ಪ್ರಮುಖವಾಗಿ ರೂಪಾಯಿ ಮೌಲ್ಯ ಕುಸಿತ ಹಾಗೂ ತೈಲ ಬೆಲೆ ಏರಿಕೆಯಿಂದ ವ್ಯಾಪಕ ಹೊರೆಯಾಗಿದ್ದು, ಮಾರ್ಚ್ 31ಕ್ಕೆ ಅಂತ್ಯದಲ್ಲಿ 12 ತಿಂಗಳಲ್ಲಿ ಎದುರಿಸಿದ ನಷ್ಟದ ಮೊತ್ತವು 430ರಿಂದ 460 ಮಿಲಿಯನ್ ಡಾಲರ್‌ವರೆಗೂ ತಲುಪಲಿದೆ ಎಂದು ಕಾಪಾ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ದೇಶದ ಮೊದಲ ಜೈವಿಕ ಇಂಧನ ವಿಮಾನ ಹಾರಾಟ ಯಶಸ್ವಿದೇಶದ ಮೊದಲ ಜೈವಿಕ ಇಂಧನ ವಿಮಾನ ಹಾರಾಟ ಯಶಸ್ವಿ

ಎಲ್ಲ ಸಂಸ್ಥೆಗಳೂ ನಷ್ಟದಲ್ಲಿ

ಎಲ್ಲ ಸಂಸ್ಥೆಗಳೂ ನಷ್ಟದಲ್ಲಿ

ಅಧಿಕ ವೆಚ್ಚವನ್ನು ಸರಿದೂಗಿಸಲು ಟಿಕೆಟ್ ದರದಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಇಂಟರ್‌ಗ್ಲೋಬ್ ವಿಮಾನಯಾನ ನಿಯಮಿತ ಸಂಸ್ಥೆಯ ಇಂಡಿಗೋ ಹೊರತುಪಡಿಸಿ ಉಳಿದ ಯಾವ ವಿಮಾನಯಾನ ಸಂಸ್ಥೆಯೂ ಅಧಿಕ ವೆಚ್ಚವನ್ನು ಹಾಗೂ ಕಡಿಮೆ ಪ್ರಯಾಣ ದರವನ್ನು ಸರಿದೂಗಿಸುವ ಸಾಮರ್ಥ್ಯ ಹೊಂದಿಲ್ಲ ಎಂದು ಕಾಪಾ ಹೇಳಿದೆ.

ಸಾಲ ತೀರಿಸಲಾಗದೆ ಸಂಕಷ್ಟದಲ್ಲಿ ಸಿಲುಕಿದ ಜೆಟ್ ಏರ್‌ವೇಸ್ಸಾಲ ತೀರಿಸಲಾಗದೆ ಸಂಕಷ್ಟದಲ್ಲಿ ಸಿಲುಕಿದ ಜೆಟ್ ಏರ್‌ವೇಸ್

ಸಂಪನ್ಮೂಲಗಳೇ ಇಲ್ಲ

ಸಂಪನ್ಮೂಲಗಳೇ ಇಲ್ಲ

ಅನೇಕ ವಿಮಾನ ಸಂಸ್ಥೆಗಳು ಸತತ ಹಿನ್ನಡೆಯನ್ನು ಎದುರಿಸಲು ಬೇಕಾದಷ್ಟು ಸಂಪನ್ಮೂಲಗಳನ್ನು ಹೊಂದಿಲ್ಲ. ಪ್ರಯಾಣಿಕರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿರುವುದರಿಂದ ವಿಮಾನಯಾನ ಸಂಸ್ಥೆಗಳು ದರ ಹೆಚ್ಚಳ ಮಾಡುವಂತೆಯೂ ಇಲ್ಲ. ಅಲ್ಲದೆ, ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ದರ ಸಮರ ನಡೆಸುವ ಅನಿವಾರ್ಯತೆಗೂ ಸಿಲುಕಿವೆ.

ಹೊಸ ವಿಮಾನಗಳಿಗೆ ಬೇಡಿಕೆ

ಹೊಸ ವಿಮಾನಗಳಿಗೆ ಬೇಡಿಕೆ

ಭಾರತವು ಜಗತ್ತಿನ ಅತಿ ವೇಗದ ಆಂತರಿಕ ವಿಮಾನಯಾನದ ಬೆಳವಣಿಗೆ ಹೊಂದಿರುವ ದೇಶವಾಗಿದ್ದು, ನೂರಾರು ಹೊಸ ಏರ್‌ಬಸ್ ಎಸ್‌ಇ ಮತ್ತು ಬೋಯಿಂಗ್ ಕೋ ಜೆಟ್ಸ್ ವಿಮಾನಗಳ ಪೂರೈಕೆಗೆ ಬೇಡಿಕೆಗಳನ್ನು ಇರಿಸಿದೆ.

ಪ್ರಯಾಣಿಕರು ದ್ವಿಗುಣ

ಪ್ರಯಾಣಿಕರು ದ್ವಿಗುಣ

ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ದೇಶದ ಆಂತರಿಕ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದ್ದರೂ ಮತ್ತು ಶೇ 90ರಷ್ಟು ಸೀಟುಗಳು ಭರ್ತಿಯಾಗುತ್ತಿದ್ದರೂ ವಿಮಾನಯಾನ ಸಂಸ್ಥೆಗಳು ಲಾಭ ಕಂಡುಕೊಳ್ಳುವುದು ಸಾಧ್ಯವಾಗುತ್ತಿಲ್ಲ.

ಭಾರತವು ಜಗತ್ತಿನ ಅತ್ಯಂತ ಅಗ್ಗದ ಆಂತರಿಕ ವಿಮಾನ ಮಾರುಕಟ್ಟೆ ಸೌಲಭ್ಯ ಹೊಂದಿದೆ. ಮುಂಬೈ-ದೆಹಲಿಯ ಎರಡು ಗಂಟೆ ಪ್ರಯಾಣಕ್ಕೆ 3,500 ರೂ.ನ ಏಕಮುಖ ಸಂಚಾರದ ಸುಲಭ ದರದ ಟಿಕೆಟ್‌ಗಳನ್ನು ಒದಗಿಸುವಂತಹ ಸೌಲಭ್ಯಗಳನ್ನು ನೀಡುತ್ತಿದೆ.

3 ಬಿಲಿಯನ್ ಡಾಲರ್ ಬೇಕು

3 ಬಿಲಿಯನ್ ಡಾಲರ್ ಬೇಕು

ಅತೀವ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸೇರಿದಂತೆ ಭಾರತೀಯ ವಿಮಾನ ಸಂಸ್ಥೆಗಳಿಗೆ ತಮ್ಮ ಬ್ಯಾಲೆನ್ಸ್‌ ಶೀಟ್‌ಅನ್ನು ಸರಿದೂಗಿಸುವ ಮೂಲಕ ಚೇತರಿಸಿಕೊಳ್ಳಲು ಹೆಚ್ಚುವರಿ 3 ಬಿಲಿಯನ್ ಡಾಲರ್ ಬಂಡವಾಳದ ಅಗತ್ಯವಿದೆ ಎಂದು ಕಾಪಾ ಅಂದಾಜಿಸಿದೆ.

ಏರ್ ಇಂಡಿಯಾ ಸಂಕಷ್ಟ

ಏರ್ ಇಂಡಿಯಾ ಸಂಕಷ್ಟ

ರಾಷ್ಟ್ರೀಯ ವಿಮಾನ ಸಂಸ್ಥೆಯ ಏರ್ ಇಂಡಿಯಾವನ್ನು ಉಳಿಸಿಕೊಳ್ಳಲು ಸರ್ಕಾರ ಸತತ ಪ್ರಯತ್ನ ನಡೆಸಿದೆ. ಆದರೆ, ಅದರ ಶೇ 76ರಷ್ಟು ಷೇರುಗಳನ್ನು ಖರೀದಿಸಲು ನಡೆಸಿದ ಬಿಡ್ಡಿಂಗ್ ವಿಫಲವಾಗಿತ್ತು. ಯಾವ ವಿಮಾನಯಾನ ಸಂಸ್ಥೆಯೂ ಷೇರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ.

ಜೆಟ್ ಏರ್‌ವೇಸ್ ನಷ್ಟ

ಜೆಟ್ ಏರ್‌ವೇಸ್ ನಷ್ಟ

ಕಳೆದ ತಿಂಗಳು ತನ್ನ ತ್ರೈಮಾಸಿಕ ವರದಿ ಸಲ್ಲಿಸಿದ್ದ ಜೆಟ್ ಏರ್‌ವೇಸ್ 1,323 ಕೋಟಿ ನಷ್ಟ ಉಂಟಾಗಿದೆ ಎಂದು ತಿಳಿಸಿತ್ತು. ವೆಚ್ಚವನ್ನು ಕಡಿತಗೊಳಿಸಲು, ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಹಾಗೂ ತನ್ನ ಹಾರಾಟದ ವೇಳಾಪಟ್ಟಿಗಳನ್ನು ಬದಲಿಸಲು ಬಯಸಿರುವುದಾಗಿ ತಿಳಿಸಿತ್ತು.

ಇಂಡಿಗೋ ಲಾಭದ ಇಳಿಕೆ

ಇಂಡಿಗೋ ಲಾಭದ ಇಳಿಕೆ

ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ, ಮೂರು ವರ್ಷದಲ್ಲಿಯೇ ತನ್ನ ಅತಿ ಕಡಿಮೆ ತ್ರೈಮಾಸಿಕ ಲಾಭವನ್ನು ಜುಲೈನಲ್ಲಿ ಪ್ರಕಟಿಸಿತ್ತು.

ಹೆಚ್ಚಿರುವ ಇಂಧನ ದರ ಹೆಚ್ಚಳ ಮತ್ತು ವಿದೇಶಿ ವಿನಿಮಯ ದರದ ನಷ್ಟದ ಕಾರಣ ತನ್ನ ಗಳಿಕೆ ಪ್ರಮಾಣ ಶೇ 97ರಷ್ಟು ಕುಸಿದಿದೆ ಎಂದು ಅದು ತಿಳಿಸಿತ್ತು.

English summary
Indian Aviation Industry losses could reach $1.9 billion this financial year, Aviation consulting firm CAPA India said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X