ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನರ್‌ವೇರ್‌, ಬನಿಯನ್‌ಗಳ ಬೆಲೆ ಶೇ.15 ರಷ್ಟು ಹೆಚ್ಚಳ

|
Google Oneindia Kannada News

ತಿರುಪುರ್ ಮೇ 10: ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಸದ್ಯ ಬೆಲೆ ಏರಿಕೆ ಬಿಸಿ ಬಟ್ಟೆಗಳಿಗೂ ತಟ್ಟಿದೆ. ಸದ್ಯ ನೂಲಿನ ಬೆಲೆ ಏರಿಕೆಯಾಗಿದ್ದು ಬಟ್ಟೆಗಳ ಬೆಲೆ ಕೂಡ ಹೆಚ್ಚಾಗಲಿದೆ.

ನೂಲಿನ ಬೆಲೆ ಪ್ರತಿ ಕಿಲೋಗ್ರಾಂಗೆ 40 ರಷ್ಟು ಏರಿಕೆಯಾಗಿದ್ದರ ನಷ್ಟವನ್ನು ತಡೆಗಟ್ಟಲು ವಸ್ತ್ರಗಳು ಮತ್ತು ಬ್ರೀಫ್‌ಗಳ ಬೆಲೆಯನ್ನು ಶೇಕಡಾ 15 ರಷ್ಟು ಹೆಚ್ಚಿಸುವ ಯೋಜನೆಯನ್ನು ದಕ್ಷಿಣ ಭಾರತೀಯ ಹೋಸರಿ ತಯಾರಕರ ಸಂಘ ಶನಿವಾರ ಪ್ರಕಟಿಸಿದೆ.

ಲಖಿಂಪುರ ಹಿಂಸಾಚಾರ: ಆರೋಪಿಗಳಿಗೆ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್ಲಖಿಂಪುರ ಹಿಂಸಾಚಾರ: ಆರೋಪಿಗಳಿಗೆ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

"ಮುಂದಿನ ದಿನಗಳಲ್ಲಿ ವಸ್ತ್ರಗಳು ಮತ್ತು ಬ್ರೀಫ್‌ಗಳ ದರವನ್ನು ಶೇ.10 ರಿಂದ ಶೇ.15 ರಷ್ಟು ಹೆಚ್ಚಿಸಲಾಗುವುದು. ಪ್ರಸ್ತುತ ವೆಸ್ಟ್‌ಗಳ ಬೆಲೆ 50 ರಿಂದ 100 ರ ನಡುವೆ ಮತ್ತು ಬ್ರೀಫ್‌ಗಳ ಬೆಲೆ 70 ರಿಂದ 100 ರವರೆಗೆ ಇದೆ ಎಂದು ಅವರು ಹೇಳಿದರು. ಹತ್ತಿ ಬೆಲೆ ಏರಿಕೆಯಿಂದಾಗಿ ಗಾರ್ಮೆಂಟ್ ಉದ್ಯಮ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇತ್ತೀಚೆಗೆ ನೂಲಿನ ಬೆಲೆಯಲ್ಲಿ ಏರಿಕೆಯಾಗಿದೆ. ಇದರಿಂದ ಈಗಾಗಲೇ ಹೆಣಗಾಡುತ್ತಿರುವ ಉದ್ಯಮಕ್ಕೆ ಮತ್ತೊಂದು ಹೊಡೆತವನ್ನು ನೀಡಲಾಗಿದೆ," ಎಂದು ದಕ್ಷಿಣ ಭಾರತೀಯ ಹೋಸರಿ ತಯಾರಕರ ಸಂಘದ ಅಧ್ಯಕ್ಷ ಎ ಸಿ ಈಶ್ವರನ್ ತಿಳಿಸಿದ್ದಾರೆ.

Increase in prices of fabrics: Vests, briefs to cost 15% more

ಇದರಿಂದ ಉಡುಪುಗಳು ಮತ್ತು ಬ್ರೀಫ್‌ಗಳ ಬೆಲೆಯನ್ನು ಹೆಚ್ಚಿಸುವ ಮೂಲಕ ತಯಾರಕರು ಲಾಭ ಗಳಿಸುವ ಗುರಿಯನ್ನು ಹೊಂದಿಲ್ಲ. ಇದರಿಂದ ನಷ್ಟವನ್ನು ತಪ್ಪಿಸಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

"ಆರ್ಡರ್‌ಗಳನ್ನು ಪೂರ್ಣಗೊಳಿಸಲು ನಮಗೆ 30 ರಿಂದ 45 ದಿನಗಳು ಬೇಕಾಗುತ್ತದೆ. ಏರಿಳಿತಗೊಳ್ಳುವ ಹತ್ತಿ ಬೆಲೆಯು ನಮ್ಮನ್ನು ಒಂದು ಸ್ಥಳದಲ್ಲಿ ಕಟ್ಟಿಹಾಕುತ್ತದೆ. ಏಕೆಂದರೆ ನಾವು ಆರ್ಡರ್ ಮಾಡಿದಾಗ ಉಲ್ಲೇಖಿಸಿದ ಬೆಲೆಗೆ ಉತ್ಪನ್ನಗಳನ್ನು ಪೂರೈಸಬೇಕು.

Increase in prices of fabrics: Vests, briefs to cost 15% more

ಆದರೆ ಅದರ ನಡುವೆ ಬೆಲೆ ಏರಿಕೆಯಾದರೆ ನಾವು ಬೆಲೆಯನ್ನು ಏರಿಕೆ ಮಾಡಲು ಬರುವುದಿಲ್ಲ. ಇದರಿಂದ ನಮಗೆ ನಷ್ಟವಾಗುತ್ತದೆ. ಈ ಹಿಂದೆ ಇದ್ದ ಬೆಲೆಗೆ ಉತ್ಪನ್ನಗಳನ್ನು ಮಾರಿ ಸದ್ಯ ಹೆಚ್ಚಾದ ಬೆಲೆಗೆ ನಾವು ಹತ್ತಿಯನ್ನು ಕೊಂಡುಕೊಳ್ಳಬೇಕು. ಇದು ನಮಗೆ ನಷ್ಟವನ್ನು ಉಂಟು ಮಾಡುತ್ತದೆ ಎಂದು ಅವರು ವಿವರಿಸಿದ್ದಾರೆ.

English summary
Days after the yarn price went up by 40 per kilogram, the South Indian Hosiery Manufacturers Association on Saturday announced the plans to hike the price of vests and briefs by 15% to prevent loss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X