ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಧನ ಬೆಲೆ ಏರಿಕೆ ತಾತ್ಕಾಲಿಕ ಧರ್ಮೇಂದ್ರ ಪ್ರಧಾನ್ ಪುನರುಚ್ಚಾರ

|
Google Oneindia Kannada News

ನವದೆಹಲಿ, ಮಾರ್ಚ್ 14: ಚುನಾವಣೆ ನೆಪದಲ್ಲೋ ಏನೋ ಕಳೆದ 15 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲು ಸರ್ಕಾರ ಮುಂದಾಗಿಲ್ಲ. ಈ ನಡುವೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮತ್ತೊಮ್ಮೆ ''ಇಂಧನ ಬೆಲೆ ಏರಿಕೆ ತಾತ್ಕಾಲಿಕ'' ಎಂದಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೇಡಿಕೆ ಹೆಚ್ಚಾಗಿದೆ. ಕಚ್ಚಾ ತೈಲ ದರ ಏರಿಕೆಯಾಗಿರುವುದು ಗ್ರಾಹಕರ ಮೇಲೂ ಪರಿಣಾಮ ಬೀರಿದೆ. ಚಳಿಗಾಲ ಮುಗಿಯುತ್ತಿದ್ದಂತೆ ಪೆಟ್ರೋಲ್ ಬೆಲೆ ಸ್ವಲ್ಪ ಇಳಿಕೆಯಾಗಲಿದೆ ಎಂದು ಈ ಹಿಂದೆ ಸಚಿವ ಪ್ರಧಾನ್ ಅವರು ಹೇಳಿದ್ದರು.

ಈಗ ಮತ್ತೊಮ್ಮೆ ಇದೇ ರೀತಿ ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ಇಂಧನ ದರ ಏರಿಕೆ ತಾತ್ಕಾಲಿಕ ಮಾತ್ರ, ಹಂತ ಹಂತವಾಗಿ ದರ ಇಳಿಕೆಯಾಗಲಿದೆ ಎಂದಿದ್ದಾರೆ.

ಇಂಧನದ ಮೇಲೆ ಕೇಂದ್ರ ಹಾಗೂ ರಾಜ್ಯಗಳಿಂದ ತೆರಿಗೆ, ಸೆಸ್ ಹಾಕುವುದನ್ನು ಸಮರ್ಥಿಸಿಕೊಂಡ ಪ್ರಧಾನ್, ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯ, ಕೊವಿಡ್ 19 ಸಂದರ್ಭದಲ್ಲಿ ಸಂಪನ್ಮೂಲ ಬಳಕೆ, ಆರ್ಥಿಕ ಪರಿಸ್ಥಿತಿ ಸುಧಾರಣೆ ಬಹುಮುಖ್ಯ ಆದ್ಯತೆಯಾಗಿದೆ ಎಂದು ಹೇಳಿದರು. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 91.17 ರೂ. ಮತ್ತು ಡೀಸೆಲ್ ದರ 81.47 ರೂ. ನಷ್ಟಿದೆ.

ತೈಲ ಪೂರೈಕೆ ರಾಷ್ಟ್ರಗಳ ಜೊತೆ ಮಾತುಕತೆ

ತೈಲ ಪೂರೈಕೆ ರಾಷ್ಟ್ರಗಳ ಜೊತೆ ಮಾತುಕತೆ

ತೈಲ ಉತ್ಪಾದನಾ ಹಾಗೂ ಪೂರೈಕೆ ರಾಷ್ಟ್ರಗಳ ಜೊತೆ ಭಾರತ ನಿರಂತರ ಮಾತುಕತೆಯಲ್ಲಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಶೀಘ್ರದಲ್ಲೇ ಬೆಲೆ ಇಳಿಕೆ ಮಾಡಲಿವೆ ಎಂದರು.

ತೆರಿಗೆ ಇಳಿಕೆ ಬಗ್ಗೆ ಸಚಿವೆ ನಿರ್ಮಲಾ

ತೆರಿಗೆ ಇಳಿಕೆ ಬಗ್ಗೆ ಸಚಿವೆ ನಿರ್ಮಲಾ

ಇಂಧನ ಹಾಗೂ ಸಂಬಂಧಿಸಿದ ಉತ್ಪನ್ನಗಳ ಮೇಲೆ ಕೇಂದ್ರ ಮಾತ್ರ ತೆರಿಗೆ ವಿಧಿಸುತ್ತಿಲ್ಲ, ರಾಜ್ಯಗಳು ಸೆಸ್, ವ್ಯಾಟ್ ವಿಧಿಸುತ್ತಿವೆ, ರಾಜ್ಯಗಳಿಗೆ ಶೇ41ರಷ್ಟು ಆದಾಯ ತಲುಪುತ್ತಿವೆ. ಸೆಸ್ ತಗ್ಗಿಸಿ, ಪೆಟ್ರೋಲ್, ಡೀಸೆಲ್ ದರ ತಗ್ಗಿಸುವ ನಿರ್ಧಾರ ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬಹುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ತಿಂಗಳು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ

ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ

ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವುದರಿಂದ ಭಾರತದಂಥ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98ರು ಹಾಗೂ ಡೀಸೆಲ್ ಮೇಲೆ 31.80 ರು ನಷ್ಟಿದೆ. ಜಾಗತಿಕವಾಗಿ ಕಚ್ಚಾತೈಲ ಬೆಲೆ ಏರಿಕೆ ಕಂಡಿದ್ದರೂ ಭಾರತದಲ್ಲಿ ತೈಲ ಬೆಲೆ ಸ್ಥಿರತೆ ಕಂಡುಕೊಂಡಿದೆ. ಫೆಬ್ರವರಿ 9ರಿಂದ ಸುಮಾರು 14 ಬಾರಿ ಇಂಧನ ದರ ಪರಿಷ್ಕರಣೆಯಾಗಿದ್ದು, ಒಟ್ಟಾರೆ, ಪೆಟ್ರೋಲ್ ಬೆಲೆ 4.22 ರು ಪ್ರತಿ ಲೀಟರ್ ಹಾಗೂ ಡೀಸೆಲ್ 4.34 ಪ್ರತಿ ಲೀಟರ್ ಏರಿಕೆ ಕಂಡಿದೆ.

 ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary
The union minister Dharmendra Pradhan said, "Due to the rise in international fuel prices, India also had to increase fuel prices but it's temporary, gradually they'll be brought down."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X