ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಯ ಅವಧಿ ವಿಸ್ತರಣೆ

|
Google Oneindia Kannada News

ನವದೆಹಲಿ, ಡಿಸೆಂಬರ್ 30: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ಗಡುವನ್ನು ಕೇಂದ್ರ ಸರ್ಕಾರ ಮತ್ತೆ ವಿಸ್ತರಿಸಿದೆ. ಜನವರಿ 10ರವರೆಗೆ ಐಟಿ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಅಲ್ಲದೆ, ತಮ್ಮ ಖಾತೆಗಳ ಲೆಕ್ಕಪರಿಶೋಧನೆ ಮಾಡಬೇಕಾದ ತೆರಿಗೆದಾರರು (ಅವರ ಪಾಲುದಾರರು ಸೇರಿದಂತೆ) ಮತ್ತು ಕಂಪನಿಗಳ (ಅವರ ಪಾಲುದಾರರನ್ನು ಒಳಗೊಂಡಂತೆ) 2020-21 ನೇ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕವನ್ನು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 139 (1) ರ ನಿಬಂಧನೆಗಳ ಪ್ರಕಾರ 2021 ರ ಫೆಬ್ರವರಿ 15 ರವರೆಗೆ ವಿಸ್ತರಿಸಲಾಗಿದೆ. ಅದಕ್ಕೂ ಮುನ್ನ ಅಕ್ಟೋಬರ್ 31, 2020 ಮತ್ತು ನಂತರ 2020 ರ ನವೆಂಬರ್ 30 ಕ್ಕೆ ವಿಸ್ತರಿಸಲಾಗಿತ್ತು. ಬಳಿಕ ಮತ್ತೆ 2021ರ ಜನವರಿ 31 ರವರೆಗೆ ವಿಸ್ತರಿಸಲಾಗಿತ್ತು.

IT Returns ಸಲ್ಲಿಕೆ ತಪ್ಪಾಗಿದ್ದರೆ ಸರಿಪಡಿಸುವುದು ಹೇಗೆ?IT Returns ಸಲ್ಲಿಕೆ ತಪ್ಪಾಗಿದ್ದರೆ ಸರಿಪಡಿಸುವುದು ಹೇಗೆ?

ಅಂತರರಾಷ್ಟ್ರೀಯ / ನಿರ್ದಿಷ್ಟ ದೇಶೀಯ ವಹಿವಾಟುಗಳಿಗೆ ಸಂಬಂಧಿಸಿದಂತೆ ವರದಿಯನ್ನು ಸಲ್ಲಿಸಬೇಕಾದ ತೆರಿಗೆದಾರರಿಗೆ 2020-21ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕವನ್ನು 2020 ರ ನವೆಂಬರ್ 30ಕ್ಕೆ ನಿಗದಿಗೊಳಿಸಲಾಗಿತ್ತು. ನಂತರ ಇದನ್ನು ಜನವರಿ 31, 2021 ಕ್ಕೆ ವಿಸ್ತರಿಸಲಾಗಿತ್ತು. ಅದನ್ನು 2021 ರ ಫೆಬ್ರವರಿ 15ರವರೆಗೆ ವಿಸ್ತರಿಸಲಾಗಿದೆ. ಮುಂದೆ ಓದಿ.

ಜನವರಿ 10ರವರೆಗೆ ವಿಸ್ತರಣೆ

ಜನವರಿ 10ರವರೆಗೆ ವಿಸ್ತರಣೆ

ಇತರ ತೆರಿಗೆದಾರರಿಗೆ 2020-21ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕವನ್ನು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 139 (1) ರ ನಿಬಂಧನೆಗಳ ಪ್ರಕಾರ, ಜುಲೈ 31, 2020, 2020 ರ ನವೆಂಬರ್ 30 ಮತ್ತು ನಂತರ ಡಿಸೆಂಬರ್ 31, 2020 ಕ್ಕೆ ವಿಸ್ತರಿಸಲಾಗಿತ್ತು. ಈಗ 2021 ರ ಜನವರಿ 10 ರವರೆಗೆ ವಿಸ್ತರಿಸಲಾಗಿದೆ.

ಲೆಕ್ಕಪರಿಶೋಧನಾ ವರದಿ ದಿನಾಂಕ

ಲೆಕ್ಕಪರಿಶೋಧನಾ ವರದಿ ದಿನಾಂಕ

2020-21ರ ಮೌಲ್ಯಮಾಪನ ವರ್ಷಕ್ಕೆ ತೆರಿಗೆ ಲೆಕ್ಕಪರಿಶೋಧನಾ ವರದಿ ಮತ್ತು ಅಂತರರಾಷ್ಟ್ರೀಯ/ನಿರ್ದಿಷ್ಟ ದೇಶೀಯ ವಹಿವಾಟಿನ ವರದಿಯನ್ನು ಒಳಗೊಂಡಂತೆ ವಿವಿಧ ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸುವ ದಿನಾಂಕವನ್ನು 2021 ಜನವರಿ 15 ರವರೆಗೆ ವಿಸ್ತರಿಸಲಾಗಿದೆ.

ಒಂದು ಲಕ್ಷ ರೂಪಾಯಿಗೂ ಹೆಚ್ಚು ಚಿನ್ನ ಖರೀದಿಸಿದರೆ ನೀವು ಐಟಿ ವ್ಯಾಪ್ತಿಗೆ..!ಒಂದು ಲಕ್ಷ ರೂಪಾಯಿಗೂ ಹೆಚ್ಚು ಚಿನ್ನ ಖರೀದಿಸಿದರೆ ನೀವು ಐಟಿ ವ್ಯಾಪ್ತಿಗೆ..!

ವಿವಾದ್ ಸೆ ವಿಶ್ವಾಸ್ ಯೋಜನೆ

ವಿವಾದ್ ಸೆ ವಿಶ್ವಾಸ್ ಯೋಜನೆ

ವಿವಾದ್ ಸೆ ವಿಶ್ವಾಸ್ ಯೋಜನೆಯಡಿ ಘೋಷಣೆ ಸಲ್ಲಿಸಲು ಕೊನೆಯ ದಿನಾಂಕವನ್ನು 2020 ಡಿಸೆಂಬರ್ 31 ರಿಂದ 2021ರ ಜನವರಿ 31 ರವರೆಗೆ ವಿಸ್ತರಿಸಲಾಗಿದೆ. ವಿವಾದ್ ಸೆ ವಿಶ್ವಾಸ್ ಯೋಜನೆಯಡಿ 2021 ರ ಜನವರಿ 30 ರೊಳಗೆ ನೀಡಬೇಕಾದ ಆದೇಶಗಳನ್ನು ನೀಡುವ ದಿನಾಂಕವನ್ನು ಕೂಡ 2021 ಜನವರಿ 31 ರವರೆಗೆ ವಿಸ್ತರಿಸಲಾಗಿದೆ.

ಸ್ವಯಂ ಮೌಲ್ಯಮಾಪನ ತೆರಿಗೆ

ಸ್ವಯಂ ಮೌಲ್ಯಮಾಪನ ತೆರಿಗೆ

ಸ್ವಯಂ-ಮೌಲ್ಯಮಾಪನ ತೆರಿಗೆ ಪಾವತಿಸುವ ಸಣ್ಣ ಮತ್ತು ಮಧ್ಯಮ ವರ್ಗದ ತೆರಿಗೆದಾರರಿಗೆ ಮೂರನೇ ಬಾರಿಗೆ ಪರಿಹಾರ ನೀಡುವ ಸಲುವಾಗಿ, ಸ್ವಯಂ-ಮೌಲ್ಯಮಾಪನ ತೆರಿಗೆ ಪಾವತಿಸುವ ದಿನಾಂಕವನ್ನು ಮತ್ತೆ ವಿಸ್ತರಿಸಲಾಗಿದೆ. ಅದರಂತೆ, ಪ್ಯಾರಾ 4 (ಎ) ಮತ್ತು ಪ್ಯಾರಾ 4 (ಬಿ) ನಲ್ಲಿ ಉಲ್ಲೇಖಿಸಿರುವ ಸ್ವಯಂ-ಮೌಲ್ಯಮಾಪನ ತೆರಿಗೆಯು 1 ಲಕ್ಷ ರೂ.ಗಳವರೆಗೆ ಇರುವ ತೆರಿಗೆದಾರರಿಗೆ ಅಂತಿಮ ದಿನಾಂಕವನ್ನು ಫೆಬ್ರವರಿ 15, 2021 ಮತ್ತು ಪ್ಯಾರಾ 4 (ಸಿ) ನಲ್ಲಿ ಉಲ್ಲೇಖಿಸಿರುವ ತೆರಿಗೆದಾರರಿಗೆ 2021 ಜನವರಿ 10 ರವರೆಗೆ ವಿಸ್ತರಿಸಲಾಗಿದೆ.

ನೇರ ತೆರಿಗೆ ಮತ್ತು ಬೇನಾಮಿ ಕಾಯ್ದೆ

ನೇರ ತೆರಿಗೆ ಮತ್ತು ಬೇನಾಮಿ ಕಾಯ್ದೆ

ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017 ರ ಸೆಕ್ಷನ್ 44 ರ ಅಡಿಯಲ್ಲಿ 2019-20ರ ಹಣಕಾಸು ವರ್ಷಕ್ಕೆ ವಾರ್ಷಿಕ ರಿಟರ್ನ್ ಸಲ್ಲಿಕೆಯ ದಿನಾಂಕವನ್ನು ಸಹ 2020 ರ ಡಿಸೆಂಬರ್ 31 ರಿಂದ 2021 ರ ಫೆಬ್ರವರಿ 28 ರವರೆಗೆ ಸರ್ಕಾರ ವಿಸ್ತರಿಸಿದೆ.

ನೇರ ತೆರಿಗೆಗಳು ಮತ್ತು ಬೇನಾಮಿ ಕಾಯಿದೆಗಳ ಅಡಿಯಲ್ಲಿ 2021 ರ ಮಾರ್ಚ್ 30 ರೊಳಗೆ ಆದೇಶಗಳು ಅಥವಾ ನೋಟಿಸ್ ನೀಡಬೇಕಾಗಿದ್ದ ದಿನಾಂಕವನ್ನು 2021 ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ.

English summary
Government has extended the deadline to file income tax return (ITR) for individual to January 10, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X