ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಕೊನೆ ದಿನಾಂಕ ಮಾ.15ಕ್ಕೆ ವಿಸ್ತರಣೆ

|
Google Oneindia Kannada News

ಕೋವಿಡ್ 19 ಸಾಂಕ್ರಾಮಿಕದ ದೆಸೆಯಿಂದ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ಗಡುವನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ.

ತೆರಿಗೆದಾರರಿಗೆ 2020-21ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕವನ್ನು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 139 (1) ರ ನಿಬಂಧನೆಗಳ ಪ್ರಕಾರ ಮಾರ್ಚ್15, 2022ಕ್ಕೆ ವಿಸ್ತರಿಸಿದೆ ಎಂದು ಇಲಾಖೆ ಜನವರಿ 11ಕ್ಕೆ ಆದೇಶ ನೀಡಿದೆ. ಇದಕ್ಕೂ ಮುನ್ನ ಜುಲೈ 31,2021ರ ಬದಲಿಗೆ ಸೆಪ್ಟೆಂಬರ್ 30, 2021 ರ ತನಕ ಐಟಿ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು.

ಸೆಪ್ಟೆಂಬರ್ 30, 2021 ಬದಲು ಎರಡು ತಿಂಗಳು ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ. ಇದಲ್ಲದೆ, ಜೂನ್ 7 ರಂದು ಆದಾಯ ತೆರಿಗೆ ಕಟ್ಟಲು ಹೊಸ ವೆಬ್ ತಾಣ (http://incometax.gov.in) ವನ್ನು ಇಲಾಖೆ ಪರಿಚಯಿಸಿದೆ.

Income Tax Returns deadline extended to March 15

ವಿವಾದ್ ಸೆ ವಿಶ್ವಾಸ್ ಯೋಜನೆಯಡಿ ಘೋಷಣೆ ಸಲ್ಲಿಸಲು ಕೊನೆಯ ದಿನಾಂಕವನ್ನು 2020 ಡಿಸೆಂಬರ್ 31 ರಿಂದ 2021ರ ಜನವರಿ 31 ರವರೆಗೆ ವಿಸ್ತರಿಸಲಾಗಿತ್ತು. ವಿವಾದ್ ಸೆ ವಿಶ್ವಾಸ್ ಯೋಜನೆಯಡಿ 2021 ರ ಜನವರಿ 30 ರೊಳಗೆ ನೀಡಬೇಕಾದ ಆದೇಶಗಳನ್ನು ನೀಡುವ ದಿನಾಂಕವನ್ನು ಕೂಡ 2021 ಜನವರಿ 31 ರವರೆಗೆ ವಿಸ್ತರಿಸಲಾಗಿತ್ತು.

ಮೂಲ ತೆರಿಗೆ ಪಾವತಿ ಮಿತಿ ಮೂಲ ತೆರಿಗೆ ಪಾವತಿ ಮಿತಿ: 5 ಲಕ್ಷ ರು ತನಕ ತೆರಿಗೆ ಪಾವತಿಸುವಂತಿಲ್ಲ, ಇನ್ನೊಂದಿಷ್ಟು ಉಳಿತಾಯ ತೋರಿಸಿದರೆ 9 ಲಕ್ಷ ರು ತನಕ ತೆರಿಗೆ ಕಟ್ಟದೆ ಇರಬಹುದು ಎಂದು ತಜ್ಞರು ತಿಳಿಸಿದ್ದಾರೆ. ಆದರೆ, ತೆರಿಗೆ ಪಾವತಿ ಮೂಲ ಮಿತಿಯಾದ 2.5 ಲಕ್ಷ ರುಗಳನ್ನು 2014ರಿಂದ ಇಲ್ಲಿ ತನಕ ಬದಲಾಯಿಸಿಲ್ಲ. ಪ್ರಸ್ತುತ ಬಜೆಟ್ ನಲ್ಲಿ ಈ ಮಿತಿಯನ್ನು 3 ಲಕ್ಷ ರುಗಳಿಗೆ ಏರಿಸಲು ಬೇಡಿಕೆ ಬಂದಿತ್ತು. ಆದರೆ, ಈಗಾಗಲೇ ವೈಯಕ್ತಿಕ ಆದಾಯ 5 ಲಕ್ಷರು ತನಕ ಹೊಂದಿರುವವರು ಸೆಕ್ಷನ್ 87ಎ ಅಡಿಯಲ್ಲಿ ಪೂರ್ತಿ ತೆರಿಗೆ ರಿಬೇಟ್ ಪಡೆಯಬಹುದಾಗಿದೆ. ಹೀಗಾಗಿ, ಮೂಲ ಮಿತಿಯನ್ನು ಬದಲಾಯಿಸಿಲ್ಲ.

Recommended Video

Rahul ಕ್ಯಾಪ್ಟೆನ್ಸಿ ಬಗ್ಗೆ, Rishabh Pant ಶಾಟ್ ಆಯ್ಕೆ ಬಗ್ಗೆ Virat Kohli ಮಾತು | Oneindia Kannada

ಆದಾಯ ತೆರಿಗೆ ಪಾವತಿ ಮಾಡಲಿ ಆಧಾರ್, ಪ್ಯಾನ್ ಕಾರ್ಡ್ ಎರಡರಲ್ಲಿ ಒಂದು ಹೊಂದಿದ್ದರೆ ಸಾಕು, ಎರಡು ಕಡ್ಡಾಯ ಎಂಬ ಸಡಿಲಗೊಳಿಸಲಾಗಿದೆ.ಒಂದು ಬ್ಯಾಂಕಿನ ಒಂದು ಖಾತೆಯಿಂದ ವಾರ್ಷಿಕ 1 ಕೋಟಿ ರು ವಿಥ್ ಡ್ರಾ ಮಾಡಿದರೆ ಶೇ 2ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ.

English summary
Ministry of Finance extends due date for filing Income tax returns for Assessment year 2021-2022 to March 15, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X