ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿಆರ್‌ ಫೈಲಿಂಗ್‌: ತೆರಿಗೆದಾರರಿಗೆ ಕೊಂಚ ರಿಲೀಫ್‌ ನೀಡಿದ ಐಟಿ ಇಲಾಖೆ

|
Google Oneindia Kannada News

ಹೊಸ ವರ್ಷ ಆರಂಭವಾಗುವುದಕ್ಕೂ ಮುನ್ನ ನಾವು ಹಲವಾರು ಕಾರ್ಯಗಳನ್ನು ಮಾಡಬೇಕಾಗಿದೆ. ಅಂದರೆ ಡಿಸೆಂಬರ್‌ 31 ಕೊನೆಯ ದಿನಾಂಕ ಆಗಿರುವ ಹಿನ್ನೆಲೆಯಿಂದಾಗಿ ನಾವು ಹಲವಾರು ಕಾರ್ಯಗಳನ್ನು ಮಾಡಬೇಕಾಗಿದೆ. ಈ ಪೈಕಿ ಆದಾಯ ತೆರಿಗೆ ರಿಟರ್ನ್ (ITR) ಫೈಲಿಂಗ್ ಕೂಡಾ ಒಂದಾಗಿದೆ. ಈ ಮಧ್ಯೆ ಐಟಿ ಫೈಲಿಂಗ್‌ ವಿಚಾರದಲ್ಲಿ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಕೊಂಚ ರಿಲೀಫ್‌ ನೀಡಿದೆ.

ಈ ನಿಟ್ಟಿನಲ್ಲಿ ಸಿಬಿಡಿಟಿ ಹೇಳಿಕೆ ಬಿಡುಗಡೆ ಮಾಡಿದ್ದು, "ಹಲವಾರು ಮಂದಿಯ ಇ ಪರಿಶೀಲನೆ ನಡೆಸಿಲ್ಲ. ಆದ್ದರಿಂದಾಗಿ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕವನ್ನು ಫೆಬ್ರವರಿವರೆಗೆ ವಿಸ್ತರಣೆ ಮಾಡಲಾಗುತ್ತದೆ," ಎಂದು ತಿಳಿಸಿದೆ.

ಗಮನಿಸಿ: ಹೊಸ ವರ್ಷದಲ್ಲಿ ಈ ಪ್ರಮುಖ ಹಣಕಾಸು ಬದಲಾವಣೆಗಳು ಆಗಲಿದೆ.. ಗಮನಿಸಿ: ಹೊಸ ವರ್ಷದಲ್ಲಿ ಈ ಪ್ರಮುಖ ಹಣಕಾಸು ಬದಲಾವಣೆಗಳು ಆಗಲಿದೆ..

ಡಿಸೆಂಬರ್‌ 31 ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕವಾದ ಹಿನ್ನೆಲೆಯಿಂದಾಗಿ ಜನರು ಐಟಿ ರಿಟರ್ನ್ ಸಲ್ಲಿಕೆ ಮಾಡಲು ಮುಗಿಬಿದ್ದಿದ್ದಾರೆ. ಭಾರತದಲ್ಲಿ ಒಂದೇ ದಿನ 15.49 ಲಕ್ಷ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಲಾಗಿದೆ. ಆದರೆ ಈ ನಡುವೆ ಹಲವಾರು ತಾಂತ್ರಿಕ ದೋಷಗಳು ಉಂಟಾಗುತ್ತಿದೆ. ಈ ನಡುವೆ ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ.

Income Tax Return: Income Tax Dept Provides One-Time Relaxation

ಇ ಪರಿಶೀಲನೆ ಕೊನೆಯ ದಿನಾಂಕ ಫೆಬ್ರವರಿ 28

2019-20ರ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆಯನ್ನು ಪಾವತಿಯ ಇ ಪರಿಶೀಲನೆ ನಡೆಸದ ತೆರಿಗೆದಾರರು ಪರಿಶೀಲನಾ ಪ್ರಕ್ರಿಯೆಯನ್ನು 2022ರ ಫೆಬ್ರವರಿ 28ರ ವೇಳೆಗೆ ಪೂರ್ಣಗೊಳಿಸಬಹುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಇನ್ನು ನೀವು ಐಟಿ ರಿಟರ್ನ್ ಸಲ್ಲಿಕೆ ಮಾಡಿದ 120 ದಿನಗಳ ಒಳಗಾಗಿ ಇ-ವೆರಿಫಿಕೇಶನ್‌ ಮಾಡಿಕೊಳ್ಳಬೇಕು ಎಂದು ಕೂಡಾ ಹೇಳಿರುವ ಆದಾಯ ತೆರಿಗೆ ಇಲಾಖೆಯು ಇ ಪರಿಶೀಲನೆ ಕೊನೆಯ ದಿನಾಂಕ 2022ರ ಫೆಬ್ರವರಿ 28 ಎಂದು ತಿಳಿಸಿದೆ.

ಐಟಿಆರ್‌ ಕೊನೆಯ ದಿನಾಂಕ ವಿಸ್ತರಣೆ ಮಾಡಲು ಆಗ್ರಹ

ಹಲವಾರು ತಾಂತ್ರಿಕ ದೋಷಗಳು ಇರುವ ಕಾರಣದಿಂದಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಕೊನೆಯ ದಿನಾಂಕವನ್ನು ಮುಂದೂಡಿಕೆ ಮಾಡಬೇಕು ಎಂದು ಹಲವಾರು ತೆರಿಗೆದಾರರು ಆಗ್ರಹ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗ #Extend_Due_Date_Immediately ಎಂಬ ಹ್ಯಾಷ್‌ಟ್ಯಾಗ್‌ ಭಾರೀ ಟ್ರೆಂಡ್‌ ಆಗುತ್ತಿದೆ. ಆದಾಯ ತೆರಿಗೆ ರಿಟರ್ನ್ ಪಾವತಿಗೆ ನೀಡಲಾದ ಗಡುವನ್ನು ಕೂಡಲೇ ವಿಸ್ತರಣೆ ಮಾಡಬೇಕು ಎಂಬ ಆಗ್ರಹ ಮಾಡುತ್ತಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್ ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವ ಹಿನ್ನೆಲೆಯಿಂದಾಗಿ ತೆರಿಗೆ ಪಾವತಿದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲು ಭಾರೀ ಅಡೆತಡೆ ಉಂಟಾಗುತ್ತಿದೆ.

ಡಿಸೆಂಬರ್‌ 31 ಕೊನೆಯ ದಿನಾಂಕ ಆಗಿರುವ ಕಾರಣಕ್ಕೆ ಇದೀಗ ವೆಬ್‌ಸೈಟ್‌ನಲ್ಲಿ ಒಂದೇ ಬಾರಿಗೆ ಲಾಗಿನ್‌ ಆಗುವವರ ಸಂಖ್ಯೆ ಅಧಿಕವಾಗಿದೆ. ಹೀಗೆ ಒಂದೇ ಸಲಕ್ಕೆ ಸಾವಿರಾರು, ಲಕ್ಷ ಜನರು ಒಂದು ವೆಬ್‌ಸೈಟ್‌ಗೆ ಲಾಗಿನ್‌ ಸಾಧ್ಯವಾಗುತ್ತಿಲ್ಲ ಎಂದು ಟ್ಯಾಕ್ಸ್‌ ಪಾವತಿದಾರರು ದೂರುತ್ತಿದ್ದಾರೆ. ಈ ಡಿಸೆಂಬರ್‌ 31 ಎಂಬುದು ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕೊನೆಯ ದಿನಾಂಕವೋ ಅಥವಾ ವೆಬ್‌ಸೈಟ್‌ ಸಾಫ್ಟ್‌ವೇರ್‌ ಡೆವಲಪರ್‌‌ಗಳಿಗೆ ಕೊನೇ ದಿನವೋ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಲಾಗುತ್ತಿದೆ. ಇನ್ನು ಮತ್ತೋರ್ವರು ಐಟಿಆರ್‌ ವೆಬ್‌ಸೈಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಬಗ್ಗೆ ಚಿತ್ರವನ್ನು ಶೇರ್‌ ಮಾಡಿದ್ದು, ಪ್ರತಿ ದಿನ ಇಂತಹ ದೋಷ, ಎರರ್‌ ತೋರಿಸುವಂಥ ವೆಬ್‌ಸೈಟ್‌ ಡೆವಲಪ್‌ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ವ್ಯಂಗ್ಯವಾಡಿದ್ದಾರೆ.

ಡಿಸೆಂಬರ್‌ 31ರೊಳಗೆ ಐಟಿಆರ್ ಸಲ್ಲಿಸದಿದ್ದರೆ ಎಷ್ಟು ದಂಡ?

ನಿಗದಿತ ದಿನಾಂಕದ ಒಳಗೆ ಅಂದರೆ ಡಿಸೆಂಬರ್‌ 31ರೊಳಗೆ ಐಟಿಆರ್‌ ಫೈಲ್‌ ಮಾಡದಿದ್ದರೆ ಐದು ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಅಂದರೆ ಐದು ಲಕ್ಷಕ್ಕಿಂತ ಅಧಿಕ ರೂಪಾಯಿ ಇದ್ದರೆ ಮಾತ್ರ ಈ ನಿಯಮ ಅನ್ವಯ ಆಗಲಿದೆ. ತೆರಿಗೆ ಆದಾಯ ಐದು ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. (ಒನ್‌ಇಂಡಿಯಾ ಸುದ್ದಿ)

English summary
Income Tax Return: Income Tax Dept Provides One-Time Relaxation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X