ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶದಲ್ಲಿ ಕಾನೂನುಬಾಹಿರ ಆಸ್ತಿ ಮಾಡಿದ ಭಾರತೀಯರ ಮೇಲೆ ಐಟಿ ಕಣ್ಣು

|
Google Oneindia Kannada News

ನವದೆಹಲಿ, ಅಕ್ಟೋಬರ್ 22: ವಿದೇಶದಲ್ಲಿ ಕಾನೂನು ಬಾಹಿರವಾಗಿ ಹಣ ಹೂಡಿದ ಹಾಗೂ ಆಸ್ತಿ ಮಾಡಿದ ಭಾರತೀಯರ ವಿರುದ್ಧ ಆದಾಯ ತೆರಿಗೆ ಇಲಾಖೆ ಕಾರ್ಯಾಚರಣೆಗೆ ಇಳಿದಿದೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಪ್ಪು ಹಣ ವಿರೋಧಿ ಕಾನೂನು ಹೊಸದಾಗಿ ಪರಿಚಯಿಸಲು ಚಿಂತನೆ ನಡೆದಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ದೇಶದ ತೆರಿಗೆ ಇಲಾಖೆ ಜತೆಗೆ ಸಮನ್ವಯ ಸಾಧಿಸಿ, ತನಿಖೆ ನಡೆಸಲಾಗುತ್ತದೆ. ವಿದೇಶದಲ್ಲಿ ಬ್ಯಾಂಕ್ ಠೇವಣಿ ಮಾಡಿದ ಹಾಗೂ ಆಸ್ತಿ ಖರೀದಿಸಿದ ಸಾವಿರಾರು ಭಾರತೀಯರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಿಬಿಡಿಟಿ (ಕೇಂದ್ರೀಯ ನೇರ ತೆರಿಗೆ ಮಂಡಳಿ) ಅಧ್ಯಕ್ಷ ಸುಶೀಲ್ ಚಂದ್ರ ಖಾತ್ರಿ ಪಡಿಸಿದ್ದು, ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ.

ಭಾರತದಲ್ಲಿ ಕರೋಡ್ ಪತಿಗಳ ಸಂಖ್ಯೆ ಶೇ 60ರಷ್ಟು ಹೆಚ್ಚಳ, ಏನಿದು ಜಾದೂ?ಭಾರತದಲ್ಲಿ ಕರೋಡ್ ಪತಿಗಳ ಸಂಖ್ಯೆ ಶೇ 60ರಷ್ಟು ಹೆಚ್ಚಳ, ಏನಿದು ಜಾದೂ?

ಆರ್ಥಿಕ ಗುಪ್ತಚರ ಇಲಾಖೆ ವಿಭಾಗ ಹಾಗೂ ಇತರ ಮೂಲಗಳ ಮೂಲಕ ವಿದೇಶದಲ್ಲಿ ಭಾರತೀಯರ ಮುಖ್ಯ ಆರ್ಥಿಕ ವ್ಯವಹಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ದೇಶದಾದ್ಯಂತ ಅಂಥ ಪ್ರಕರಣಗಳನ್ನು ಪತ್ತೆ ಮಾಡುತ್ತಿದ್ದೇವೆ. ಕಪ್ಪು ಹಣದ ವಿರುದ್ಧ ನಡೆಸಲಿರುವ ಪ್ರಮುಖ ಕಾರ್ಯಾಚರಣೆ ಇದಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Income Tax department launches major drive against Indians with illegal foreign assets

ಕೆಲವು ಪ್ರಕರಣಗಳಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ವೈಯಕ್ತಿಕ ತೆರಿಗೆದಾರರು ಅಥವಾ ಇತರ ವರ್ಗದಡಿ ಬರುವಂಥ ವ್ಯವಹಾರಗಳ ಬಗ್ಗೆ ವಿವರಣೆ ನೀಡುವಂತೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಲವು ಹೈ ಪ್ರೊಫೈಲ್ ಪ್ರಕರಣಗಳಿವೆ. ಅತೀ ಶ್ರೀಮಂತರ ಆಸ್ತಿಗಳು ಇದರಡಿ ಬರುತ್ತದೆ. ಯಾವುದು ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಮಾಹಿತಿ ನೀಡಿಲ್ಲವೋ ಅಂಥದ್ದರ ಬಗ್ಗೆ ಮಾತ್ರ ತನಿಖೆ ನಡೆಸುತ್ತೇವೆ. ತೆರಿಗೆ ಕದಿಯಲು ಯತ್ನಿಸಿದವರು ಕ್ರಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಪ್ರಾಶಸ್ತ್ಯದ ಸೇವೆ, ಸರಕಾರದ ಹೊಸ ಚಿಂತನೆ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಪ್ರಾಶಸ್ತ್ಯದ ಸೇವೆ, ಸರಕಾರದ ಹೊಸ ಚಿಂತನೆ

ಕಪ್ಪು ಹಣ ಹಾಗೂ ತೆರಿಗೆ ವಿಧಿಸುವ ಕಾಯ್ದೆಯನ್ನು ಸರಕಾರ ಮೂರು ವರ್ಷದ ಹಿಂದೆ ಜಾರಿಗೆ ತಂದಿದೆ. ಹೊಸ ಕಾನೂನು ವಿದೇಶದಲ್ಲಿನ ಕಾನೂನುಬಾಹಿರ ಆಸ್ತಿ ಬಗ್ಗೆ ವಿವರಿಸುತ್ತದೆ. ಈಚೆಗೆ ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿತ್ತು. ಹೊಸ ಕಾನೂನಿನ ಪ್ರಕಾರ ಮಾಹಿತಿ ನೀಡದ ವಿದೇಶದಲ್ಲಿ ಮಾಡಿದ ಆಸ್ತಿ ಹಾಗೂ ಆದಾಯಕ್ಕೆ ಶೇಕಡಾ ನೂರಿಪ್ಪತ್ತರಷ್ಟು ತೆರಿಗೆ ಮತ್ತು ದಂಡ, ಜತೆಗೆ ಹತ್ತು ವರ್ಷದ ತನಕ ಜೈಲು ಶಿಕ್ಷೆ ಇದೆ.

English summary
The Income Tax Department has launched a major operation to investigate cases of illegal funds and properties stashed abroad by Indians and may invoke the new anti-black money law for strict criminal action in many such cases, official said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X